Spiritual: ಓರ್ವ ಮನುಷ್ಯನಿಗೆ ಪ್ರಸಿದ್ಧಿ, ಶ್ರಿಮಂತಿಕೆ ಇಲ್ಲದಿದ್ದರೂ, ಸಮಾಜದಲ್ಲಿ ಸಣ್ಣ ಮಟ್ಟಿಗಿನ ಗೌರವವಂತೂ ಇರಲೇಬೇಕು. ಹಾಗೆ ಗೌರವವನ್ನು ಇರಿಸಿಕೊಳ್ಳುವುದು, ಅವರವರ ಜೀವನ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಚಾಣಕ್ಯರು ಜೀವನ ಯಾವ ರೀತಿ ಇದ್ದರೆ ಗೌರವ ಸಿಗುತ್ತದೆ ಎಂದು ಹೇಳಿದ್ದಾರೆ.
ಜೀವನದಲ್ಲಿ ಸುಖ ದುಃಖ ಎರಡೂ ಇರಬೇಕು. ಆಗಲೇ ಜೀವನ ನಾರ್ಮಲ್ ಆಗಿರುತ್ತದೆ. ಬರೀ ದುಃಖವೇ ಇದ್ದವರ ರೀತಿ ಇದ್ದರೆ, ನಿಮಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಈ ಮನುಷ್ಯನದ್ದು ಯಾವಾಗಲೂ ಗೋಳು ಅಂತಲೇ, ಹಲವರು ದೂರ ಸರಿಯುತ್ತಾರೆ. ಅದೇ ರೀತಿ ಬರೀ ಸುಖದಿಂದಲೇ ಇರುತ್ತೇವೆ ಎಂದು ತೋರಿಸಿದರೂ ತಪ್ಪು. ಸುಖ- ದುಃಖ ಎರಡೂ ಸಮನಾಗಿದ್ದಾಗ ಜೀವನ ಸರಿಯಾಗಿರುತ್ತದೆ. ಇಲ್ಲವಾದಲ್ಲಿ ತೋರಿಕೆಯ ಜೀವನವಾಗಿರುತ್ತದೆ.
ಎರಡನೇಯದಾಗಿ ನಿಮ್ಮ ಜೀವನ ಶೈಲಿ ಸರಿಯಾಗಿ ಇರಬೇಕು. ಓರ್ವ ಬಡವ ಅಥವಾಾ ಮಧ್ಯಮ ವರ್ಗದವನು, ಸರಿಯಾದ ಮಾರ್ಗದಲ್ಲಿ ದುಡಿದು ತಿನ್ನುತ್ತಿದ್ದರೆ, ಅವನಿಗೆ ಜನ ಗೌರವ ನೀಡೇ ನೀಡುತ್ತಾರೆ. ಆದರೆ ಅಡ್ಡದಾರಿ ಹಿಡಿದು ಶ್ರೀಮಂತನಾದವನಿಗೆ ಯಾರೂ ಬೆಲೆ ಕೊಡುವುದಿಲ್ಲ. ಹಾಗಂತ, ಶ್ರೀಮಂತರೆಲ್ಲವೂ ಅಡ್ಡದಾರಿ ಹಿಡಿದವರೇ ಅಲ್ಲ. ಇದರ ಅರ್ಥವೇನೆಂದರೆ, ನಿಯತ್ತಿನಿಂದ ಇರುವವರಿಗೆ ಸಮಾಜ ಗೌರವಿಸುತ್ತದೆ.
ಅದರಲ್ಲೂ ನೀವು ನಿಯತ್ತಾಗಿ ದುಡಿದು, ಸರಿಯಾದ ರೀತಿಯಲ್ಲಿ ಹಣವನ್ನು ಬಳಸಿ, ಬಂಡವಾಳ ಹೂಡಿ ಉದ್ಯಮ ಮಾಡಿ ಶ್ರೀಮಂತರಾಗಿದ್ದಲ್ಲಿ, ಜನ ನಿಮ್ಮನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಾರೆ. ಏಕೆಂದರೆ, ಈ ಪ್ರಪಂಚಕ್ಕೆ ಯಾವುದಕ್ಕಾದರೂ ಬೆಲೆ ಕಡಿಮೆಯಾಗಬಹುದು ಆದರೆ ಶ್ರೀಮಂತಿಕೆ ಮತ್ತು ಹಣಕ್ಕಲ್ಲ.
ಮೂರನೇಯದಾಗಿ ಮಾತಿನ ಮೇಲೆ, ನಡುವಳಿಕೆಯ ಮೇಲೆ ನಿಗಾ ವಹಿಸುವವರನ್ನು ಜನ ಗೌರವಿಸುತ್ತಾರೆ. ನೀವು ಎಷ್ಟೇ ಶ್ರೀಮಂತರಾಗಿರಿ, ಪ್ರಸಿದ್ಧರಾಗಿರಿ, ನೋಡಲು ಸುಂದರವಾಗಿರಿ, ನಿಮ್ಮ ಗುಣ, ಮಾತಾಾಡುವ ರೀತಿ, ನಡುವಳಿಕೆಯನ್ನೇ ಜನ ಗುರುತಿಸುತ್ತಾರೆ. ನಡುವಳಿಕೆ, ಮಾತನಾಡುವ ರೀತಿ ಸರಿಯಾಗಿ ಇದ್ದಲ್ಲಿ ಮಾತ್ರ, ಸಮಾಜ ನಿಮ್ಮನ್ನು ಗೌರವಿಸುತ್ತದೆ.