Wednesday, April 16, 2025

Latest Posts

ಧಾರವಾಡದಲ್ಲಿ ಕಳೆಗಟ್ಟಿದ 76 ನೇ ಗಣರಾಜ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಸಚಿವ ಲಾಡ್

- Advertisement -

Dharwad News: ದೇಶವ್ಯಾಪಿ ಇಂದು 76 ನೇ ಗಣರಾಜ್ಯೋತ್ಸವ ಸಂಭ್ರಮ ಮಾಡಿದ್ದು, ವಿದ್ಯಾಕಾಶಿ ಧಾರವಾಡದಲ್ಲಿಯು ಗಣರಾಜ್ಯೋತ್ಸದ ಸಂಭ್ರಮ ಜೋರಾಗಿತ್ತು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ ಹೋರಾಟಗಾರರಾದ ಮಹಾತ್ಮಗಾಂಧಿ ಜೀ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.

ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಜರುಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಧ್ವಜಾರೋಹಣ ನೆರವೇರಿಸಿದರು. ಇನ್ನೂ ಧ್ವಜಾರೋಹಣ ಮುನ್ನ ಸ್ವಾತಂತ್ರ ಹೋರಾಟಗಾರರಾದ ಮಹಾತ್ಮಾ ಗಾಂಧಿಜೀಯವರ ಸೇರಿ ಸಂವಿಧಾಮ ಶಿಲ್ಫಿ ಡಾ . ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಡಿಸ್ಟ್ರಿಕ್ಟ್ ಮಿನಿಸ್ಟರ್ ಲಾಡ್ ಸೇರಿ, ಜಿಲ್ಲಾಧಿಕಾರಿಗಳಾದ ದಿವ್ಯ ಫ್ರಭು, ಜಿಲ್ಲಾಪಂಚಾಯತಿ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಗೋಪಾಲ ಬ್ಯಾಕೋಡ, ನಗರ ಪೊಲೀಸ್ ಆಯುಕ್ತ ಎನ್ ಶಸಿಕುಮಾರ ಸೇರಿದಂತೆ ಹಲವು ಗಣ್ಯರು ಭಾಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. 76ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಕ್ರೀಡಾಂಗಣ ಒಳ ಭಾಗ ಸೇರಿದಂತೆ ಹೊರಭಾಗದಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿರುವ ದೃಶ್ಯಗಳು ಎಲ್ಲರ ಗಮನ ಸೆಳೆದವು.‌

- Advertisement -

Latest Posts

Don't Miss