Wednesday, October 15, 2025

Latest Posts

ಮೈಕ್ರೋ ಫೈನಾನ್ಸ್ ಹಾವಳಿ ನಿಂತ್ರಣಕ್ಕೆ ಬರಲಿದೆ ನೂತನ ಕಾನೂನು: ಸಚಿವ ಹೆಚ್‌.ಕೆ.ಪಾಟೀಲ್

- Advertisement -

Gadag News: ಗದಗ: ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್, ಮೈಕ್ರೋ ಫೈನಾನ್ಸ್ ಹಾವಳಿ ನಿಂತ್ರಣಕ್ಕೆ ನೂತನ ಕಾನೂನು ಸಿದ್ಧವಾಗುತ್ತಿದೆ.

30 ತಾರೀಕು ಸಂಪುಟಕ್ಕೆ ಕರಡು ಪ್ರತಿ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡ್ತೇನೆ. ಈಗಾಗ್ಲೆ ಡ್ರಾಫ್ಟ್ ಕಾನೂನು ಪ್ರತಿಯನ್ನ ಅನುಭವಿ ಪೋಲಿಸ್ ಅಧಿಕಾರಿಗಳಿಗೆ ನೀಡಲಾಗಿದೆ. ಕಾನೂನು ಜಾರಿ ಆದ್ಮೇಲೆ ಇದ್ರಲ್ಲಿ ಪಾವರ್ ಇಲ್ಲ ಎನ್ನುವಂತಾಗಬಾರದು. ಹೀಗಾಗಿ ಕಂದಾಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳಿಗೆ ಡ್ರಾಫ್ಟ್ ಕೊಟ್ಟಿದ್ದೇವೆ. ಮೂರು ನಾಲ್ಕು ದಿನದಲ್ಲಿ ಕಾನೂನು ಸ್ವರೂಪ ಗೊತ್ತಾಗಲಿದೆ. 30 ನೇ ತಾರೀಕು ಕರಡು ಪ್ರತಿಯನ್ನ ಸಂಪುಟ ಸಭೆಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗುತ್ತದೆ.  ಅಷ್ಟರಲ್ಲಿ ಗೃಹ ಸಚಿವರು, ಕಂದಾಯ ಸಚಿವರು, ಡಿಸಿಎಂ ಜೊತೆಗೂ ಸಮಾಲೋಚನೆ ಮಾಡ್ತೇನೆ. ನಂತರ ಮುಖ್ಯಮಂತ್ರಿಗಳಿಗೆ ಪ್ರತಿಯನ್ನ ಸಲ್ಲಿಕೆ ಮಾಡ್ತೇವೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕೆಪಿಐಡಿ, ಬಡ್ಸ್ ಕಾನೂನುಗಳಿಗೆ ಬಲತುಂಬುವ ಅಗತ್ಯ ಇದೆ. ಬಡ್ಡಿ ಶೋಷಣೆ ಕೇಸ್ ಗೆ ಸಂಬಂಧಿಸಿದಂತೆ ಕ್ರಮ ವಹಿಸಲು ಕಾನೂನಿನಲ್ಲಿ ಪೊಲೀಸರಿಗೆ ಬಲವಿಲ್ಲ. ಆ ಕಾನೂನಿಗೆ ಬಲ ತುಂಬುವ ಕೆಲಸವನ್ನ ಈಗ ಸರ್ಕಾರ ಮಾಡಲಿದೆ. ನೋಂದಾಯಿತರಲ್ಲದ ಸಾಲ ಕೊಡುವವರ ಹೆಚ್ಚು ಕಡಿಮೆ ಮಾಡಿದ್ರೂ ನಡೆದೋಗುತ್ತೆ. ಅನ್ ರೆಜಿಸ್ಟರ್ಡ್ ಲೇವಾದೇವಿಗಾರರೂ ತಪ್ಪು ಮಾಡಿದ್ರೂ ಕ್ರಮ ಆಗ್ಬೇಕು. ಹೀಗಾಗಿ ನೂತನ ಕಾನೂನು ತರಲು ಮುಂದಾಗಿದ್ದೇವೆ ಎಂದು ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

- Advertisement -

Latest Posts

Don't Miss