Spiritual: ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ಬಳಿಕ ಶವ ಸಂಸ್ಕಾರ ಮಾಡಲಾಗುವುದಿಲ್ಲ. ಇದು ಒಳ್ಳೆಯ ನಿರ್ಧಾರವಲ್ಲ. ಇದರಿಂದ ಮನೆಗೆ ಕೆಟ್ಟದ್ದಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಇದರ ಹಿಂದಿರುವ ನಿಖರವಾದ ಕಾರಣವಾದ್ರೂ ಏನು..? ಯಾಕೆ ಸೂರ್ಯಾಸ್ತದ ಬಳಿಕ ಶವ ಸಂಸ್ಕಾರ ಮಾಡುವುದಿಲ್ಲ ಅಂತಾ ತಿಳಿಯೋಣ ಬನ್ನಿ.
ಮುಸ್ಸಂಜೆಯ ಬಳಿಕ ಮನೆಯಿಂದ ಹೊರಹೋಗಬಾರದು. ಹೆಣ್ಣು ಮಕ್ಕಳು ಕೂದಲು ಬಿಟ್ಟು ತಿರುಗಬಾರದು. ದೇಹಕ್ಕೆ ಸುಗಂಧ ದ್ರವ್ಯ ಹಾಕಿಕೊಂಡು ಓಡಾಡಬಾರದು. ಬಟ್ಟೆ ಒಗೆಯಬಾರದು. ಲೋಬಾನ ಹಾಕಬಾರದು. ಹೀಗೆ ಇತ್ಯಾದಿ ಮಾತುಗಳನ್‌ನು ಹಿರಿಯರು ಆಗಾಗ ಹೇಳುವುದನ್ನು ನೀವು ಕೇಳಿರುತ್ತೀರಿ. ಇದಕ್ಕೆಲ್ಲ ಒಂದೇ ಕಾರಣ. ಅದೇನೆಂದರೆ, ಸಂಜೆ ಬಳಿಕ ನಕಾರಾತ್ಮಕ ಶಕ್ತಿಗಳು ಜಾಗೃತಗೊಳ್ಳುತ್ತದೆ. ಅಂಥ ಶಕ್ತಿಯನ್ನು ಎದಿಸುವ ಶಕ್ತಿ ನಮಗೆ ಬೇಕು ಎಂಬ ಕಾರಣಕ್ಕೆ, ಮನೆಯಲ್ಲಿ ದೀಪ ಹಚ್ಚಿ, ದೇವರ ಧ್ಯಾನ ಮಾಡಬೇಕು, ಶ್ಲೋಕ, ಮಂತ್ರ ಪಠಣೆ ಮಾಡಬೇಕು. ಮನೆಯಲ್ಲೇ ಇರಬೇಕು ಅಂತಾ ಹೇಳುವುದು.
ಹೀಗೆ ಜಾಗೃತವಾಗುವ ನಕಾರಾತ್ಮಕ ಶಕ್ತಿಗಳು ನಮಗೊಂದು ದೇಹ ಬೇಕು ಎಂದು ಹುಡುಕುತ್ತಿರುತ್ತದೆ. ಹಾಗೆ ಹುಡುಕುವಾಗ ಯಾವುದಾದರೂ ದುರ್ಬಲ ದೇಹ ಸಿಕ್ಕರೆ, ಅದರಲ್ಲಿ ಹೋಗಿ ಸೇರುತ್ತದೆ. ನಂತರ ಆ ದೇಹವನ್ನು ತನಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತದೆ ಪ್ರೇತಗಳು. ಇದೇ ಕಾರಣಕ್ಕೆ ಮುಟ್ಟಾದ ಹೆಣ್ಣು ಮಕ್ಕಳನ್ನು, ಮದುವೆಗೂ ಮುನ್ನ ಅರಶಿನ ಶಾಸ್ತ್ರ ಮುಗಿಸಿರುವ ಮಧುಮಕ್ಕಳನ್ನು, ಬಾಣಂತಿಯನ್ನು, ಗರ್ಭಿಯರನ್ನು ಮುಸ್ಸಂಜೆ ಬಳಿಕ ಹೊರಬಿಡಲಾಗುವುದಿಲ್ಲ.
ಅಲ್ಲದೇ, ಮೃತದೇಹದಲ್ಲಿಯೂ ಯಾವುದೇ ಶಕ್ತಿ ಇರುವುದಿಲ್ಲ. ಅದೊಂದು ದುರ್ಬಲ ದೇಹವಾಗಿರುತ್ತದೆ. ಇದೇ ಕಾರಣಕ್ಕೆ ಆ ದೇಹದಲ್ಲಿ ನಕಾರಾತ್ಮಕ ಶಕ್ತಿಗಳು ಆರಾಮವಾಗಿ ಪ್ರವೇಶ ಮಾಡುವ ಎಲ್ಲ ಸಾಧ್ಯತೆಗಳಿರುತ್ತದೆ. ಹಾಗಾಗಿ ಸೂರ್ಯಾಸ್ತದ ಬಳಿಕ, ಹಿಂದೂ ಧರ್ಮದಲ್ಲಿ ಶವ ಸಂಸ್ಕಾರ ಮಾಡಲಾಗುವುದಿಲ್ಲ. ಅಲ್ಲದೇ, ಶವದ ಬಳಿ ಯಾರಾದರೂ ಒಬ್ಬರಾದರೂ, ನಿದ್ರೆ ಮಾಡದೇ, ಎಚ್ಚರಿರಬೇಕು ಅಂತಾ ಹೇಳಲಾಗುತ್ತದೆ. ಏಕೆಂದರೆ, ಎಲ್ಲರೂ ನಿದ್ದೆಯಲ್ಲಿದ್ದು, ಶವದ ಬಳಿಕ ಯಾರೂ ಸ್ವಯವಿಲ್ಲದೇ ನಿದ್ರಿಸಿದರೆ, ಆ ದೇಹದಲ್ಲಿ ಪ್ರೇತ ಸೇರಿಕೊಂಡು, ಆ ಮನೆಯ ನೆಮ್ಮದಿ ಹಾಳು ಮಾಡುವ ಎಲ್ಲಾ ಸಾಧ್ಯತೆಗಳಿದೆ. ಹಾಗಾಗಿ ರಾತ್ರಿ ಯಾರ ಮನೆಯಲ್ಲಿ ಶವವಿರುತ್ತದೆಯೋ, ಆ ಮನೆಯ ಕೆಲ ಸದಸ್ಯರು ನಿದ್ರಿಸದೇ, ಹೆಣ ಕಾಯಬೇಕಾಗುತ್ತದೆ.