Web News: ಯೂಟ್ಯೂಬರ್ ದತ್ತಾ ಅವರ ಕಾರ್‌ನ ವಿಶೇಷಗಳೇನು ಅಂತಾ ನೀವೇ ನೋಡಿ

Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಅವರು ಯಾವ ರೀತಿ ಯೂಟ್ಯೂಬ್ ಶುರು ಮಾಡಿದ್ರು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು. ಅವರ ತಿಂಗಳ ಆದಾಯ ಎಷ್ಟಿತ್ತು ಅನ್ನೋ ಬಗ್ಗೆ ದತ್ತಾ ಅವರೇ, ಕರ್ನಾಟಕ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ, ಇನ್ನಷ್ಟು ಸುದ್ದಿಗಳನ್ನು ದತ್ತಾ ಅವರು ಹಂಚಿಕೊಂಡಿದ್ದಾರೆ.

ದತ್ತಾ ಅವರ ಕಾರ್ ಒಳಗಡೆ ಯಾವ ರೀತಿ ಇದೆ ಅಂತಾ ಕರ್ನಾಟಕ ಟಿವಿಗೆ ತೋರಿಸಿದ್ದಾರೆ. ಕಾರ್ ಒಳಗೆ ಇನ್ನೆರಡು ಪುಟ್ಟ ಪುಟ್ಟದಾಗಿರುವ ಕಾರ್, ಪ್ಲೇನ್ ಇದೆ. ಯೂಟ್ಯೂಬ್, ಫೇಸ್‌ಬುಕ್‌, ಇನ್‌ಸ್ಟಾಾಗೆ ಸಂಬಂಧಟ್ಟ ಲೋಗೋಗಳಿದೆ. ಕಾರ್ ಮೇಲೂ ಕೂಡ ತಮ್ಮ ಚಾನೆಲ್ ಲೋಗೋ, ಫೇಸ್‌ಬುಕ್, ಇನ್‌ಸ್ಟಾ, ಯೂಟ್ಯೂಬ್ ಲೋಗೋವನ್ನು ದತ್ತಾ ಬರೆಸಿದ್ದಾರೆ.

ಕರ್ನಾಟಕ ಎಂದು ಕಾರ್‌ ಮೇಲೆ ಬರೆದುಕೊಂಡಿರುವ ದತ್ತಾ ಅವರು ಕಾರ್‌ ಮೇಲೆ ಇನ್ನೂ ಸುಮಾರು ವಾಕ್ಯಗಳನ್ನು ಬರೆಸಿದ್ದಾರೆ. ಮತ್ತು ಆ ವಾಕ್ಯಗಳು ಅವರ ಜೀವನಕ್ಕೆ ಸಂಬಂಧಿಸಿದ್ದಾಗಿದೆ. ಈ ಕಾರ್‌ ಮೇಲೆ ಬರೆದಿದ್ದ ಒಂದು ವಾಕ್ಯಕ್ಕಾಗಿಯೇ ದತ್ತಾ ದುಡಿಯುತ್ತಿದ್ದಾರಂತೆ. ಆ ವಾಕ್ಯದ ಹೆಸರೇನು ಅಂದ್ರೆ, ಕಾಸ್ಟ್ಲಿಯಾಗಿರುವ ವಸ್ತು ಚೀಪ್ ಆಗುವವರೆಗೂ ಕೆಲಸ ಮಾಡಬೇಕು ಅಂತಾ ಬರೆಯಲಾಗಿದೆ.

ಈ ಬಗ್ಗೆ ವಿವರಿಸುವಾಗ ದತ್ತಾ ಅವರು ರೋಲ್ಸ್ ರಾಯ್ಸ್‌ ಕಾರನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಭಾರತದ ರಾಜ ಲಂಡನ್‌ಗೆ ಸಾಧಾರಣ ಧಿರಿಸಿನಲ್ಲಿ ಸುತ್ತಾಡಲು ಹೋದಾಗ, ರೋಲ್ಸ್ ರಾಯ್ಸ್ ಶೋರೂಮ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಗಳು ರಾಜನನ್ನು ಚೀಪ್ ಆಗಿ ನೋಡಿದ್ದರು. ತಕ್ಷಣ ತಾವು ತಂಗಿದ್ದ ಹೊಟೇಲ್‌ ರೂಮ್‌ಗೆ ಹೋಗಿ, ರಾಜನ ದಿರಿಸು ಧರಿಸಿದ ರಾಜರು ಮತ್ತೆ ಅದೇ ಶೋ ರೂಮ್‌ಗೆ ಬಂದರು.

ಬಳಿಕ ಸುಮಾರು ಗಾಡಿಗಳನ್ನು ಖರೀದಿಸಿ, ಭಾರತದಲ್ಲಿ ಕಸ ಆಯುವ ಗಾಡಿಯಾಗಿ ಮಾರ್ಪಡಿಸಿದರು. ಇದಾದ ಬಳಿಕ ಇಡೀ ವಿಶ್ವದಲ್ಲಿ ರೋಲ್ಸ್ ರಾಯ್ಸ್ ಕಾರ್‌ಗೆ ಗೌರವವೇ ಇಲ್ಲದಂತಾಯ್ತು. ಬಳಿಕ ಕಾರ್ ಶೋ ರೂಮ್ ಮಾಲೀಕ, ರಾಜರಲ್ಲಿ ಕ್ಷಮೆ ಕೇಳಿ 6 ಕಾರ್‌ನ್ನು ಉಡುಗೊರೆಯಾಗಿ ಕಳುಹಿಸಿದನಂತೆ. ಬಳಿಕ ರಾಜರು, ರೋಲ್ಸ್ ರಾಯ್ಸ್ ಕಾರನ್ನು ಕಸ ಆಯಲು ಬಳಸಬೇಡಿ ಎಂದು ಆದೇಶ ನೀಡಿದರು.

ಈ ಕಥೆಯನ್ನೇ ದತ್ತಾ ಅವರು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಈ ಇಂಟ್ರೆಸ್ಟಿಂಗ್ ವಿಷಯದ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ.

About The Author