Health Tips: ಮೊದಲೆಲ್ಲ ತೂಕ ಹೆಚ್ಚಳವಾಗಿ ಸಣ್ಣ ವಯಸ್ಸಿನಲ್ಲೇ ಖಾಯಿಲೆ ದಾಸರಾಗುವವರ ಸಂಖ್ಯೆ ಕಡಿಮೆ ಇತ್ತು. ಕಾರಣ, ಅವರ ಜೀವನ ಶೈಲಿ ಅಷ್ಟು ಆರೋಗ್ಯಕರವಾಗಿತ್ತು. ಇಂದಿನ ಕಾಲದಲ್ಲಿ ನಮ್ಮ ಆಹಾರ ಶೈಲಿ, ಜೀವಿಸುವ ರೀತಿ ಎಲ್ಲವೂ ಅನಾರೋಗ್ಯಕರ ರೀತಿಯೇ ಆಗಿದೆ. ಹಾಗಾಗಿ ಬೊಜ್ಜು ಬೆಳೆಯುವುದು ಹೆಚ್ಚಾಗಿದೆ.
ಇನ್ನು ಬೊಜ್ಜು ಬಂದರೆ, ಒಂದೇ ಬರೋದಿಲ್ಲ. ಬದಲಾಗಿ ಬಿಪಿ, ಶುಗರ್, ಹೃದಯ ಸಮಸ್ಯೆ, ಕಿಡ್ನಿ ಸಮಸ್ಯೆ ಹೀಗೆ ಹಲವು ರೋಗಗಳನ್ನು ಹೊತ್ತು ತರುತ್ತದೆ. ಆದರೆ ಬೊಜ್ಜಿನ ಸಮಸ್ಯೆಯನ್ನು ಎದುರಿಸಿ, ತೂಕ ಇಳಿಸಿಕೊಂಡು ಫಿಟ್ ಆಗಿರುವ ಭೂಮಿಕಾ ಅವರು, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು. ಏನು ಮಾಡಿದ್ರೆ 5ರಿಂದ 6 ಕೆಜಿ ತೂಕವನ್ನು ಬರೀ ಒಂದೇ ತಿಂಗಳಲ್ಲಿ ಇಳಿಸಬಹುದು ಎಂದಿದ್ದಾರೆ.
ಭೂಮಿಕಾ ಅವರು ಹೇಳುವ ಪ್ರಕಾರ, ನಾವು ಬೇಕಾದ್ದನ್ನೆಲ್ಲಾ ತಿಂದು, ಜೀನಿ ಸೇವನೆ ಮಾಡಿದ್ರೆ, ಅಥವಾ ಯಾವುದಾದರೂ ಔಷಧಿ ತೆಗೆದುಕೊಂಡರೆ, ಅದರಿಂದೇನೂ ಪ್ರಯೋಜನವಿಲ್ಲ. ಬದಲಾಗಿ ನಮ್ಮ ಆಹಾರದಲ್ಲಿಯೂ ನಾವು ಕಂಟ್ರೋಲ್ ಮಾಡಿ, ತೂಕ ಇಳಿಸಲು ಬೇಕಾದ ಔಷಧ ತೆಗೆದುಕೊಂಡರೆ, ಆಗ ನಮ್ಮ ತೂಕ ಇಳಿಸಬಹುದು.
ಭೂಮಿಕಾ ಅವರು ಕೂಡ ಊಟ, ವ್ಯಾಯಾಮ ಎಲ್ಲವನ್ನೂ ಸರಿಯಾಗಿ ಫಾಲೋ ಮಾಡಿದ್ದ ಕಾರಣಕ್ಕೆ 6 ತಿಂಗಳಲ್ಲಿ 34 ಕೆಜಿ ತೂಕ ಇಳಿಸಿಕೊಂಡಿದ್ದರು. ಮೊದಲು 84 ಕೆಜಿ ಇದ್ದ ಭೂಮಿಕಾ, ಈಗ ಬಳುಕುವ ಬಳ್ಳಿಯ ಹಾಗೆ ಸಣ್ಣವಾಗಿದ್ದಾರೆ. ಇದಕ್ಕೆ ಕಾರಣ ಸಿರಿಧಾನ್ಯಗಳು. ಮನಸ್ಸು ಮಾಡಿದ್ರೆ, ಸಿರಿ ಧಾನ್ಯಗಳ ರೆಸಿಪಿಯನ್ನು ಸಹ ಟೇಸ್ಟಿಯಾಗಿ ಮಾಡಿ ಸೇವಿಸಬಹುದು. ಇದು ಆರೋಗ್ಯಕ್ಕೂ ಉತ್ತಮ, ರುಚಿಯಾಗಿಯೂ ಇರತ್ತೆ ಅಂದಿದ್ದಾರೆ ಭೂಮಿಕಾ. ಇವರ ಪೂರ್ತಿ ಸಂದರ್ಶನ ನೋಡಲು ಈ ವೀಡಿಯೋ ಕ್ಲಿಕ್ ಮಾಡಿ.