Saturday, February 22, 2025

Latest Posts

Bengaluru News: ಮಾಂಸಕ್ಕಾಗಿ ಹಸು-ಕುರಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

- Advertisement -

Bengaluru News: ಬೆಂಗಳೂರಿನ ಹೊರವಲಯದಲ್ಲಿ ಹಸು ಕುರಿಗಳನ್ನು ಕಳುವು ಮಾಡುತ್ತಿದ್ದ ಇಬ್ಬರು ಮಾಂಸ ಮಾರಾಟಗಾರರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಆನೆಕಲ್ ತಾಲೂಕಿನ ಸರ್ಜಾಪುರದ ಅಡಿಗಾರನಹಳ್ಳಿ ನಿವಾಸಿ ಫೈರೋಜ್ ಬೇಗ್ ಹಾಗೂ ಅಡಿಗಾರ ಕಲ್ಲಹಳ್ಳಿ ಗ್ರಾಮದ ಸೈಯದ್ ರಿಸ್ವಾನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 2 ಕಾರು ಮತ್ತು 1 ಲಕ್ಷ ದುಡ್ಡು ಸೇರಿ 5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ತಲಘಟ್ಟಪುರ ಬಳಿಕ ರೈತರ ಮನೆಯೊಂದರಲ್ಲಿದ್ದ 2 ಹಸುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಇನ್ಸ್‌ಪೆಕ್ಟರ್ ಜಗದೀಶ್ ತನಿಖೆ ಆರಂಭಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಫೈರೋಜ್ ಬೇಗ್ ಈಗಾಗಲೇ ಕುಖ್ಯಾತ ಕಳ್ಳನಾಗಿದ್ದು, ಬೆಂಗಳೂರಿನ ಹಲವು ಠಾಣೆಗಳಲ್ಲಿ ಈತನ ವಿರುದ್ಧ 30ಕ್ಕೂ ಹೆಚ್ಚು ಕೇಸ್ ಇದೆ. ಅದರಲ್ಲೂ ಕುರಿ, ಹಸು ಕದಿಯುವುದರಲ್ಲಿ ನಿಸ್ಸೀಮನಾಗಿದ್ದ.

ಕೊಟ್ಟೆಗೆಯಲ್ಲಿ ಕಟ್ಟುತ್ತಿದ್ದ ಹಸು, ಕುರಿಯನ್ನು ಕದ್ದು ಮಾರುತ್ತಿದ್ದ. ಮಾಂಸಕ್ಕಾಗಿ ಬಳಸುತ್ತಿದ್ದ. ಸದ್ಯ ಇಬ್ಬರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿ, ಕೇಸ್ ದಾಖಲಿಸಿದ್ದಾರೆ.

- Advertisement -

Latest Posts

Don't Miss