Political News: ಜಾಗತಿಕ ಹೂಡಿಕೆದಾರರ ಸಮಾವೇಶ: ಆರಂಭಕ್ಕೂ ಮುನ್ನವೇ ವಿವಾದ

Political News: ಜಾಗತಿಕ ಹೂಡಿಕೆದಾರರ ಸಮಾವೇಶ ಫೆಬ್ರವರಿ 11ರಿಂದ ಶುರುವಾಗುತ್ತಿದೆ. ಈ ಹೂಡಿಕೆ ಸಮಾವೇಶದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಬರುವ ಸಾಧ್ಯತೆ ಇದೆ. ಆದರೆ ಹೂಡಿಕೆದಾರರ ಸಮಾವೇಶ ಸುರುವಾಗುವುದಕ್ಕೂ ಮುನ್ನವೇ ವಿವಾದ ಉಂಟಾಗಿದೆ.

ಈ ಸಮಾವೇಶದಲ್ಲಿ ಕೇಂದ್ರ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ನಾಯಕ ಆರ್.ಅಶೋಕ್ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶಕ್ಕೆ ಕೇಂದ್ರ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಶಿಷ್ಟಾಾಚಾರ ಪಾಲನೆಯಲ್ಲೂ ಕಾಂಗ್ರೆಸ್ ಸರ್ಕಾರ ಪಾರ್ಷಿಯಾಲಿಟಿ ಮಾಡಿದೆ. ಸಮಾವೇಶಕ್ಕೆ ನಮ್ಮ ಶುಭ ಹಾರೈಕೆಗಳು. ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಹರಿದು ಬರಲಿ. ಸ್ತಬ್ಧವಾಗಿರುವ ರಾಜ್ಯದ ಅಭಿವೃದ್ಧಿ ಇನ್ನಾದರೂ ಶುರುವಾಗಲಿ ಎಂದು ಅಶೋಕ್, ಕಾಂಗ್ರೆಸ್ ಕಾಲೆಳೆದಿದ್ದಾರೆ.

ಕಾಂಗ್ರೆಸ್‌ನವರು ಪುಟಗಟ್ಟಲೇ ಜಾಹೀರಾತನ್ನು ನೀಡಿದ್ದಾರೆ. ಆದರೆ ಈ ಕಾರ್ಯಕ್ರಮ ಉದ್ಘಾಟಿಸುವ ರಾಜ್‌ನಾಥ್ ಸಿಂಗ್ ಫೋಟೋ ಯಾಕಿಲ್ಲ..? ಉಪಸ್ಥಿತಿಯಲ್ಲಿರುವ ರಾಜ್ಯಪಾಲರಾದ ಗೆಹ್ಲೋಟ್ ಅವರ ಫೋಟೋ ಏಕಿಲ್ಲ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಅಲ್ಲದೇ ಶಿಷ್ಠಾಚಾರ ಪಾಲಿಸುವ ಕನಿಷ್ಟ ಸೌಜನ್ಯವನ್ನು ಕಾಂಗ್ರೆಸ್ ತೋರಿಲ್ಲ ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

About The Author