Hubli News: ಮೇವಿನ ಬಣವೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ರೈತರ ಬದುಕಿಗೆ ಬರಸಿಡಿಲು..!

Hubli News: ಹುಬ್ಬಳ್ಳಿ: ದುಷ್ಕರ್ಮಿಗಳು ರೈತರ ಮೇವಿನ ಬಣಿವೆಗೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ಮೌಲ್ಯದ ಮೇವು ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

ನಿಂಗಪ್ಪ ಕಲಘಟಗಿ ಎಂಬುವ ರೈತರ ಬಣಿವೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ದನಗಳು ತಿನ್ನುವ ಮೇವಿಗೆ ಸಂಕಷ್ಟ ಬಂದೊದಗಿದೆ. ಏಕಾಏಕಿ ಬೆಂಕಿ ಹತ್ತಿದ ಪರಿಣಾಮ ಬೆಂಕಿಯ ಕಿನ್ನಾಲಿಗೆ ಆಕಾಶಕ್ಕೆ ಚಾಚಿದೆ.

ಇನ್ನೂ ವರ್ಷವೀಡಿ ದನಗಳು ತಿನ್ನಲು ಕೂಡಿಡಬೇಕಿದ್ದ ಮೇವು ಏಕಾಏಕಿ ಬೆಂಕಿಯಲ್ಲಿ ಸುಟ್ಟಿದ್ದು, ರೈತನಿಗೆ ದಿಕ್ಕೆ ತೋಚದಂತಾಗಿದೆ.

About The Author