Hubli News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ನವಲಗುಂದ ಶಾಸಕ ಕೋನರೆಡ್ಡಿ, ಚುನಾವಣೆಯಲ್ಲಿ ಗೆದ್ದ 136 ಜನರಿಗೂ ಮಂತ್ರಿಯಾಗೋ ಬಯಕೆ ಇದ್ದೆ ಇರುತ್ತೆ. ಹಾಗೇ ನಮಗೂ ಮಂತ್ರಿಯಾಗಬೇಕು ಅನ್ನೋ ಬಯಕೆ ಇದೆ ಎಂದಿದ್ದಾರೆ.
ಹೈಕಮಾಂಡ ನಮಗೆ ಮಂತ್ರಿ ಸ್ಥಾನ ನೀಡಿದ್ದರೆ ನಿಭಾಯಿಸೋ ಶಕ್ತಿ ಇದೆ. ಮಂತ್ರಿಮಂಡಳ ವಿಸ್ತರಣೆ ಕುರಿತು ಚರ್ಚೆಗಳ ನಡೆಯುತ್ತಿವೆ. ಆದರೆ ಇದರ ಬಗ್ಗೆ ನಮ್ಮ ಹೈಕಮಾಂಡ್ ಎಲ್ಲರಿಗೂ ಸೂಚನೆ ನೀಡಿದೆ. ಯಾವುದೇ ವಿಚಾರವನ್ನು ಬಹಿರಂಗವಾಗಿ ಮಾತನಾಡಬಾರುದು ಎಂದು ಹೇಳಿದ್ದಾರೆ. ಅಗ್ರಿಕಲ್ಚರ್ ಮಂತ್ರಿ ಆಗೋ ಅಸೆ ಹೊಂದಿದೆ. ಆದರೆ ಈಗ ಅದೂ ಖಾಲಿ ಇಲ್ಲ ಹಾಗಾಗಿ ಯಾವುದನ್ನು ಸಿಎಂ ಹೈಕಮಾಂಡ ನಿಡುತ್ತಾರೆ ಅದನ್ ನಿಭಾಯಿಸುತ್ತೇನೆ ಎಂದು ಕೋನರೆಡ್ಡಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕೈ ಪಕ್ಷದಲ್ಲಿ ಟಾಕ್ ವಾರ್ ವಿಚಾರದ ಬಗ್ಗೆ ಮಾತನಾಡಿರುವ ಕೋನರೆಡ್ಡಿ, ಈಗಾಗಲೇ ಹೈಕಮಾಂಡ ಅಧ್ಯಕ್ಷರ ಬದಲಾವಣೆ ಕುರಿತು ಬಹಿರಂಗವಾಗಿ ಮಾತಾಡಬಾರದು ಅಂತಾ ಹೇಳಿದೆ. ಅಧ್ಯಕ್ಷರ ಬದಲಾವಣೆ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಶಾಸಕರು ಹೇಳಿದ್ದಾರೆ.
ಮೆಟ್ರೋ ಟಿಕೆಟ್ ದರ ಸೇರಿ ಬೆಲೆಗಳ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋನರೆಡ್ಡಿ, ಬೆಲೆ ಏರಿಕೆಯ ತಾಯಿ ಕೇಂದ್ರ ಸರ್ಕಾರವಾಗಿದೆ. ಪೆಟ್ರೋಲ್ ಡಿಸೇಲ್ ಬೆಲೆಗಳ ಏರಿಕೆಯಾಗುತ್ತಿವೆ. ಆರ್ಥಿಕತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಬೆಲೆಗಳ ಏರಿಕೆ ಮಾಡಲೇಬೇಕು. ಹಾಗೇ ಮೆಟ್ರೋ ಟಿಕೆಟ್ ಏರಿಕೆಯಾಗಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರು ಬೆಲೆಗಳ ಏರಿಕೆ ಅನಿವಾರ್ಯ. ಕೇಂದ್ರ ಜಿಎಸ್‌ಟಿ ಜಾರಿಗೆ ಮೊದಲು ಕೇಂದ್ರ 50 ರಾಜ್ಯಕ್ಕೆ 50% ಅಂತಾ ಹೇಳಿತ್ತು. ಆ ಮಾತಿನಂತೆ ಕೇಂದ್ರ ನಡೆದುಕೊಳ್ಳತ್ತಾ..? ಕೇಂದ್ರದ ಅನ್ಯಾಯದ ಬಗ್ಗೆ ನಾವು ಹೋರಾಟ ಮಾಡಿದ್ವಿ ಎಂಪಿಗಳು ಸಾಥ ನೀಡಲಿಲ್ಲ. ಆಡಳಿತ ನಡೆಸುವ ಸರ್ಕಾರ ಬೆಲೆಗಳ ಏರಿಕೆ ಅನಿವಾರ್ಯವಾಗಿ ಮಾಡಬೇಕಿದೆ ಎಂದು ಮೆಟ್ರೋ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರ ಗ್ಯಾರಂಟಿ ನಿರ್ವಹಣೆ ಮಾಡಲಾಗದೆ ಬೆಲೆ ಮೊರೆ ಹುಗುತ್ತಿದೆ ಎಂಬ ವಿಪಕ್ಷ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಕೋನರೆಡ್ಡಿ, ಮೊದಲು ಬಿಜೆಪಿಯವರು ತಮ್ಮ ಮನೆ ಸುದ್ದ ಮಾಡಿಕೊಳ್ಳಲಿ. ಆ ಮೇಲೆ ಬೆಲೆಗಳ ಏರಿಕೆ ಬಗ್ಗೆ ಮಾತಾಡಲಿ. ಅವರಿಗೆ ಅಧಿಕಾರ ಮಾಡೋಕ್ಕೆ ಬರದೆ ಇರೋದಕ್ಕೆ ಅವರನ್ನು ಮತದಾರರು ವಿಪಕ್ಷ ಸ್ಥಾನದಲ್ಲಿರಿಸಿದ್ದಾರೆ ಎಂದು ಕೋನರೆಡ್ಡಿ ಕಿಡಿಕಾರಿದ್ದಾರೆ.




