Wednesday, September 17, 2025

Latest Posts

BREAST FEEDING & BREAST CANCER: ಕ್ಯಾನ್ಸರ್ ತಡೆಗಟ್ಟಲು ಇದೊಂದು ಕಾರಣವಾಗುತ್ತೆ..!

- Advertisement -

Health Tips: ಇತ್ತೀಚೆಗೆ ಕ್ಯಾನ್ಸರ್ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣಗಳೂ ಹಲವಿದೆ. ಆದರೆ ನಾವು ನಮಗೆ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಅದು ಯಾವುದು ಅೞತಾ ವೈದ್ಯರೇ ವಿವರಿಸಿದ್ದಾರೆ ನೋಡಿ.

ಡಾ.ಪವನ್ ಕುಮಾರ್ ಅವರು ಬ್ರೀಸ್ಟ್ ಕ್ಯಾನ್ಸರ್ ಬಗ್ಗೆ ವಿವರಿಸಿದ್ದು, ತಾಯಿಯಾದ ಬಳಿಕ, ನಾವು ಮಕ್ಕಳಿಗೆ ಸ್ತನಪಾನ ಮಾಡಿಸಿದರೆ, ಬ್ರೀಸ್ಟ್ ಕ್ಯಾನ್ಸರ್ ಬರುವುದು ತಪ್ಪುತ್ತದೆ. ಎಲ್ಲೋ ಕೆಲವೇ ಕೆಲವು ಕೇಸ್‌ನಲ್ಲಿ ಕೆಲವು ತಪ್ಪಿನಿಂದಾಗಿ ಬ್ರೀಸ್ಟ್ ಕ್ಯಾನ್ಸರ್ ಬರಬಹುದು. ಆದರೆ ಎದೆ ಹಾಾಲುಣಿಸುವ ಹಲವು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವುದಿಲ್ಲ.

ಇನ್ನು ಲಂಗ್ ಕ್ಯಾನ್ಸರ್ ಬರಲು ಧೂಮಪಾನವೇ ಮುಖ್ಯ ಕಾರಣವಾಗಿದೆ. ಕೆಲವರು ನಾವು ಧೂಮಪಾನ, ಮಧ್ಯಪಾನ ಏನೂ ಮಾಡುತ್ತಿರಲಿಲ್ಲ. ಆದರೂ ನಮಗೆ ಕ್ಯಾನ್ಸರ್ ಬಂದಿದೆ ಎನ್ನುತ್ತಾರೆ. ಅಂಥ ಕೇಸ್‌ಗಳು ಕೆಲವೇ ಕೆಲವು. ಆದರೆ ಅತೀ ಹೆಚ್ಚು ಧೂಮಪಾನ ಮಾಡುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಅಂತಾರೆ ವೈದ್ಯರು. ಅಲ್ಲದೇ ಟಾರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss