ಚಹಾ ಮಾಡುವಾಗ ಲೀಕ್‌ ಆದ ಪೈಪ್ ಲೀಕ್, ಸಿಲಿಂಡರ್ ಬ್ಲಾಸ್ಟ್: ಮೂವರು ಯುವಕರಿಗೆ ಗಂಭೀರ ಗಾಯ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮೂವರು ಯುವಕರಿಗೆ ಗಂಭೀರ ಗಾಯವಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಎಂಬಲ್ಲಿ ನಡೆದಿದೆ.

ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಶೋಕ್, ಸುಭಾಶ್, ಮಾಂಗಿಲಾಲ್ ಎಂಬ ಯುವಕರಿಗೆ ಗಾಯವಾಗಿದೆ. ಗಾಯಾಳುಗಳು ರಾಜಸ್ತಾನ ಮೂಲದವರಾಗಿದ್ದು, ಚಹಾ ಮಾಡುವ ಸಂದರ್ಭದಲ್ಲಿ ಪೈಪ್ ಲೀಕ್ ಆಗಿ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author