Dharwad News: ಧಾರವಾಡ: ಧಾರವಾಾಡದಲ್ಲಿ ಜೆಡಿಎಸ್ ಶಾಸಕ ಸುರೇಶ್ ಬಾಬು ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೈ ಸರಕಾರ ಅಧಿಕಾರಿಕ್ಕೆ ಬಂದು 2 ವರ್ಷ ಆಗ್ತಾ ಬಂದಿದೆ. ಕೇವಲ ಗ್ಯಾರಂಟಿಗೆ ಒತ್ತು ಕೊಡುತ್ತಿದೆ. ಗಂಡಸರಿಂದ ಲೂಟಿ ಮಾಡೋದು ಮಹಿಳೆಯರಿಗೆ ಹಣ ಕೊಡುವ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಮೈಕ್ರೋ ಪೈನಾನ್ಸ್ ಗಳ ಮುಖಾಂತರ ಸಾಲ ಕೊಡುತ್ತದೆ. ಕುಮಾರಸ್ವಾಮಿ ಅವರು ಬರುವ ಅಧಿವೇಶನದಲ್ಲಿ ಎನೆಲ್ಲ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡ್ತಾ ಇದಾರೆ. ಇಂದು ಆರ್ ಅಶೋಕ, ಕುಮಾರಸ್ವಾಮಿ ಅವರು ಸಭೆ ಮಾಡುತ್ತಾರೆ. ಸರಕಾರದ ನ್ಯೂನತೆಗಳ ಬಗ್ಗೆ ನಾವು ಹೋರಾಟವನ್ನ ಮಾಡುತ್ತೆವೆ.
ಉಪ ಮುಖ್ಯಮಂತ್ರಿ ಅವರೆ ಹೇಳಿದ್ದಾರೆ. ಸರಕಾರದ್ದ ಈ ಭಾರಿ ಮೂರು ಲಕ್ಷ ಕೋಟಿ ಬಜಟ್ ಇದೆ. ಬೆಂಗಳೂರನ್ನ ಅಭಿವೃದ್ಧಿ ಮಾಡಲು ಆಗೋದಿಲ್ಲ ಎಂದು ಹೇಳಿದ್ದಾರೆ. ಡಿಸಿಎಂ ಅವರೆ ಹೇಳಿದ್ದಾರೆ ಅಂದ್ರೆ ಸರಕಾರದಲ್ಲಿ ದುಡ್ಡಿಲ್ಲ. ಎಸ್ ಸಿ ಪಿ , ಟಿ ಎಸ್ ಪಿ, ಹಣವನ್ನ ಗ‌್ಯಾರಂಟಿಗಳಿಗೆ ಬಳಸಿಕ್ಕೊಳ್ಳಬಾರದು. ಶಾಸಕರಿಗೆ ಅನುದಾನವನ್ನ ಕೊಡ್ತಾ ಇಲ್ಲ. ಗ‌್ಯಾರಂಟಿಗಳಿಗೆ ಹಣ ನೀಡಿ ಸರಕಾರ ದಿವಾಳಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರಕಾರ ಗೃಹಲಕ್ಷ್ಮಿ ಹಣವನ್ನ ನೀಡುತ್ತಿಲ್ಲ, ಬಸ್ ಚಾಲಕರಿಗೆ, ಮೆಕ್ಯಾನಿಕ್ ಗಳಿಗೆ ಸ್ಯಾಲರಿ ಕೊಡಲು ಸರಕಾರದಲ್ಲಿ ದುಡ್ಡಿಲ್ಲ. ಗ‌್ಯಾರಂಟಿಗಳಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ. ಸರಕಾರ ವಾಮ ಮಾರ್ಗದಲ್ಲಿ ಹಣ ಸಂಗ್ರಹ ಮಾಡಲು ಮುಂದಾಗಿದೆ. ಕುಮಾರಸ್ವಾಮಿ ಅವರು ಸರಕಾರದ ಭೂಮಿಯನ್ನ ಕಬಳಿಸಿಲ್ಲ ಎಂದು ಹೇಳಿದ್ದಾರೆ. ಎಸ್ ಆರ್ ಹಿರೇಮಠ ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಸದ್ಯ ಕೋರ್ಟನಲ್ಲಿ ಇದೆ, ಹಿರೇಮಠ ಅವರಿಗೆ ದಾಖಲೆಗಳಿದ್ದರು ಕೋರ್ಟಗೆ ಹಾಜರು ಪಡಿಸಲಿ. ಕುಮಾರಸ್ವಾಮಿ ಅವರು ಸರಕಾರದ ಜಮೀನನನ್ನ ಕಬಳಿಕೆ ಮಾಡಿಲ್ಲ. ಕಾನೂನು ತಿರ್ಮಾಣಕ್ಕೆ ನಾವು ಬದ್ದರಿದ್ದೇವೆ ಎಂದು ಧಾರವಾಡದಲ್ಲಿ ಶಾಸಕ ಸುರೇಶ ಬಾಬು ಹೇಳಿದ್ದಾರೆ.