Bengaluru News: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಡಾ.ಭಗವಾನ್ ಬಿ.ಸಿ ಅವರು ಆಯ್ಕೆಯಾಗಿದ್ದಾರೆ. ಕೆಂಪೆಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯವರಾದ ಡಾ.ಭಗವಾನ್ ಅವರನ್ನು ಕುಲಪತಿಯಾಗಿ ನೇಮಕ ಮಾಡಬೇಕು ಎಂದು, ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.
ಈ ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಸರ್ಕಾರಿ ಕರ್ತವ್ಯದಲ್ಲಿರುವ ವೈದ್ಯರನ್ನೇ ನೇಮಕ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಖಾಸಗಿ ಕಾಲೇಜಿನ ವೈದ್ಯರೊಬ್ಬರನ್ನು ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ.
ಕುಲಪತಿ ಆಯ್ಕೆ ಸಂಬಂಧ ರಚಿಸಲಾಗಿದ್ದ ಪ್ರೊ.ಎಂ.ರಾಮಚಂದ್ರಗೌಡ ಅಧ್ಯಕ್ಷತೆಯ ಪರಿಶೋಧನಾ ಸಮಿತಿಯು, ಹಾಸನದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ರವಿಕುಮಾರ್ ಬಿ.ಸಿ, ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ನಳಿನಿ ಮತ್ತು ಭಗವಾನ್ ಅವರನ್ನು ಶಿಪಾರಸ್ಸು ಮಾಡಲಾಗಿತ್ತು. ಅದರಲ್ಲಿ ಡಾ.ಭಗವಾನ್ ಅವರನ್ನು ಕುಲಪತಿಯಾಗಿ ಆಯ್ಕೆ ಮಾಡಲಾಾಗಿದೆ.




