Koppala News: ಸಮಸ್ತ ಆ್ಯಪ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಆನ್ಲೈನ್ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವುದನ್ನು ವಿರೋಧಿಸಿ, ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಪ್ಪಳ ಜಿಲ್ಲಾ ಸಮಿತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಸವಡಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕಾಮ್ರೇಡ್ ಡಾ. ಪ್ರಮೋದ್ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್, ಸಮರ್ಪಕ ನೆಟ್ವರ್ಕ್, ತಾಂತ್ರಿಕ ಸೌಲಭ್ಯ ಹಾಗೂ ಸೂಕ್ತ ತರಬೇತಿ ನೀಡದೆ ಸಮಸ್ತ ಆ್ಯಪ್ನಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದರು.
ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ನಿಗದಿತ ವೇತನವಿಲ್ಲದೆ ವಿವಿಧ ಆರೋಗ್ಯ ಸೇವೆಗಳ ಜವಾಬ್ದಾರಿ ನೀಡಲಾಗಿದೆ. ಇದರ ಜೊತೆಗೆ ಆನ್ಲೈನ್ ಕೆಲಸದ ಹೊರೆ ಹೇರುವುದು ಖಂಡನೀಯ.
ಸ್ಮಾರ್ಟ್ಫೋನ್, ಅಗತ್ಯ ಸೌಲಭ್ಯ ಹಾಗೂ ನಿಗದಿತ ವೇತನ ನೀಡುವವರೆಗೆ ಸಮಸ್ತ ಆ್ಯಪ್ನ ಕೆಲಸ ಮಾಡುವುದಿಲ್ಲ ಎಂದು ಸಂಘ ಸ್ಪಷ್ಟಪಡಿಸಿದೆ.
ಮನವಿ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್ ಸೇರಿದಂತೆ ಆಶಾ ಕಾರ್ಯಕರ್ತೆಯರ ಮುಖಂಡರು ಉಪಸ್ಥಿತರಿದ




