Sandalwood News: ಕಿರಿಕ್ ಪಾರ್ಟಿ ಸಿನಿಮಾದಿಂದ ಕರ್ನಾಟಕದ ಕ್ರಶ್ ಎಂದು ಫೇಮಸ್ ಆಗಿದ್ದ ರಶ್ಮಿಕಾ, ಕ್ರಮೇಣ, ತೆಲುಗು, ತಮಿಳು ಸಿನಿಮಾದಲ್ಲಿ ನಟಿಸಿ, ಇದೀಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಅವರಿಗೆ ಪ್ರಸಿದ್ಧತೆಯ ಮತ್ತು ಯಾವ ರೇಂಜಿಗೆ ತಲೆಗೇರಿದೆ ಅಂದ್ರೆ, ಅವರು ಕನ್ನಡಿಗರು, ಕರ್ನಾಟಕದವರು ಅನ್ನೋದೇ ಮರೆತು ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಕೆ, ಛಾವಾ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದ ವೇಳೆ, ನಾನು ಹೈದರಾಬಾದ್‌ನಿಂದ ಇಲ್ಲಿಯತನಕ ಬಂದಿದ್ದೀರಿ. ನನ್ನನು ನೀವು ನಿಮ್ಮವಳಂತೆ ಕಾಣುತ್ತೀರಾ ಎಂದು ಪ್ರಶ್ನಿಸುವ ಮಟ್ಟಿಗೆ, ಆಕೆಗೆ ಆಕೆಯ ಬೇರು ಮರೆತು ಹೋಗಿದೆ. ಈಗಾಗಲೇ ಕನ್ನಡಿಗರ ಮನಸ್ಸಿನಿಂದ ಬ್ಯಾನ್ ಆಗಿರು ರಶ್ಮಿಕಾಳನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಅನ್ನೋ ಮಾತು ಕೇಳಿಬರುತ್ತಿದೆ.
ಕರವೇ ಅಧ್ಯಕ್ಷ ನಾರಾಯಣಗೌಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಕನ್ನಡ ಸಿನಿಮಾವನ್ನು ಜನ ನೋಡಲ್ಲ ಅಂತೀರಲ್ಲ..? ಯಾವ ಕಾಳಜಿ ಇಟ್ಟುಕೊಂಡು ಕನ್ನಡಿಗರು ನಿಮ್ಮ ಸಿನಿಮಾಗಳನ್ನು ನೋಡಬೇಕು..? ನೀವು ಬೀದಿಗೆ ಬಂದು ಕನ್ನಡಿಗರ ಪರವಾಗಿ ಹೋರಾಟ ಮಾಡಿದ್ರೆ, ಆಗ ಕನ್ನಡಿಗರು ನಿಮ್ಮ ಸಿನಿಮಾವನ್ನು ನೋಡ್ತಾರೆ. ಕೋಟಿ ಕೋಟಿ ತೆಗೆದುಕೊಳ್ಳುವ ನೀವು ಕನ್ನಡಿಗರಿಗೆ ಸಮಸ್ಯೆ ಬಂದಾಗ, ಏಕೆ ನೀವು ಬೀದಿಗೆ ಬಂದು ಹೋರಾಟ ಮಾಡಬಾರದು. ಹಾಗಾಗಿ ಕನ್ನಡಿಗರು ಕನ್ನಡ ಸಿನಿಮಾ ನೋಡಲ್ಲ ಎಂದು ಹೇಳಲು ನಿಮಗೆ ಯಾವುದೇ ನೈತಿಕತೆ ಇಲ್ಲವೆಂದು ನಾರಾಯಣ ಗೌಡ ಹೇಳಿದ್ದಾರೆ.
ಅಲ್ಲದೇ ರಶ್ಮಿಕಾ ಮಂದಣ್ಣ ಸಿನಿಮಾ ಕಾರ್ಯಕ್ರಮದಲ್ಲಿ ಆಕೆ ಹೈದರಾಬಾದ್‌ನವಳು ಅಂತಾ ಹೇಳಿದ್ದನ್ನು ಕೇಳ್ಪಟ್ಟೆ. ಕನ್ನಡ ಸಿನಿಮಾದಿಂದ ಬಾಲಿವುಡ್ ತನಕ ಹೋಗಿ, ಇಲ್ಲಿಂದಲೇ ಬೆಳೆದು, ಈಗಷ್ಟೇ ಚಿಗುರಿ, ಒಂದೆರಡು ಭಾಷೆಯ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದು, ಈಗ ಆಂಧ್ರದವಳು ಹೇಳ್ತಾರೆ ಅಂದ್ರೆ ಎಂಥವರು ಅಂತಾ ಇದರಲ್ಲೇ ಗೊತ್ತಾಗತ್ತೆ. ನಾವೆಷ್ಟೇ ಎತ್ತರಕ್ಕೆ ಹೋದರೂ, ನಮ್ಮ ಭಾಷೆ, ನೆಲ, ಜಲದ ಬಗ್ಗೆ ನಮಗೆ ಗೌರವವಿರಬೇಕು ಎಂದು ನಾರಾಯಣ ಗೌಡ ಹೇಳಿದ್ದಾರೆ,.