Political News: ರಾಜ್ಯ ರಾಜಕಾರಣದಲ್ಲಿ ಸದ್ಯ ಭರ್ಜರಿಯಾಗಿ ಚರ್ಚೆಯಾಗಿರುತ್ತಿರುವ ಟಾಪಿಕ್ ಅಂದ್ರೆ, ಅದು ಸಿಎಂ ಬದಲಾವಣೆ ಟಾಪಿಕ್. ಕಾಂಗ್ರೆಸ್ ಸರ್ಕಾರ ರಚನೆಯಾಗುವಾಗ, ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೋ, ಸಿಎಂ ಸಿದ್ದರಾಮಯ್ಯ ಆಗ್ತಾರೋ ಅಂತಾ ಕುತೂಹಲವಿತ್ತು. ಕೊನೆಗೆ ಸಿದ್ದರಾಾಮಯ್ಯನವರೇ ಎರಡನೇಯ ಬಾರಿ ಸಿಎಂ ಆಗಿ ಆಯ್ಕೆಯಾದರು. ಆದರೆ ಬೇರೆ ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಯಶಸ್ವಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಎರಡೂವರೆ ವರ್ಷದ ಬಳಿಕ ಸಿಎಂ ಮಾಡಲಾಗುವುದು ಎಂದು ಸಮಾಧಾನ ಮಾಡಲಾಯಿತು. ಡಿಕೆಶಿ ಕೂಡ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಡಿಸಿಎಂ ಪಟ್ಟವನ್ನು ಒಪ್ಪಿಕೊಂಡು ಸುಮ್ಮನಾಗಿದ್ದರು.
ಆದರೆ ಇದೀಗ ಸಮಯ ಹತ್ತಿರವಾಗಿದ್ದು, ಸಿದ್‌ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಡಬೇಕು ಎಂದು ಡಿಕೆಶಿ ನೆನಪಿಸುತ್ತಿದ್ದಾರೆ. ಹಾಗಾಗಿ ರಾಜ್ಯ ರಾಜಕೀಯದಲ್ಲಿ ಸಿಎಂ, ಡಿಸಿಎಂ ಬೆಂಬಲಿಗರ ಮಧ್ಯೆ ಡಿಸ್ಟೆನ್ಸ್ ಹೆಚ್ಚಾಗಿದೆ. ಸಿಎಂ ಡಿಸಿಎಂ ಅವರನ್ನು ದೂರವಿಟ್ಟು, ತಮ್ಮ ಬೆಂಬಲಿಗರೊಂದಿಗೆ ಡಿನ್ನರ್ ಮೀಟಿಂಗ್ ಮಾಡಿ, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗಾಗಿ ಸಿಎಂ ಕುರ್ಚಿಗಾಗಿ ರಾಜ್ಯದಲ್ಲಿ ಪೈಪೋಟಿ ಜೋರಾಗಿದೆ.
ಈ ಮಧ್ಯೆ ಇದೀಗ ಕಾಂಗ್ರೆಸ್ ಶಾಸಕರೊಬ್ಬರು, ಡಿಸೆಂಬರ್ ಒಳಗೆ ಡಿಕೆಶಿ ಸಿಎಂ ಆಗೇ ಆಗ್ತಾರೆ. ಬೇಕಾದ್ರೆ ರಕ್ತದಲ್ಲಿ ಬರೆದು ಕೊಡ್ತೀನಿ ಅಂತಾ ಬಹಿರಂಗ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಕಾರ್‌ಯಕ್ರಮವೊಂದರಲ್ಲಿ ಮಾತನಾಡಿರುವ ಶಾಸಕ ಬಸವರಾಾಜ್ ಶಿವಗಂಗಾ, ರಾಜ್ಯದಲ್ಲಿ ಕಾಂಗ್ರೆಸ್ ಬರಲು, 80 ಜನ ಶಾಸಕರು ಗೆಲ್ಲಲು ಡಿಕೆಶಿ ಅವರೇ ಕಾರಣರಾಗಿದ್ದಾರೆ. ಅವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಹಾಗಾಗಿ ಅವರು ಡಿಸೆಂಬರ್ ಒಳಗೇ ಸಿಎಂ ಆಗೇ ಆಗ್ತಾರೆ ಎಂದು ಶಾಸಕರು ಹೇಳಿದ್ದಾರೆ.
ಅಲ್ಲದೇ, ಡಿಸಿಎಂ ಆಗಿರುವ ಡಿಕೆಶಿ ಈ ವರ್ಷ ಸಿಎಂ ಆದ್ರೆ ಇನ್ನೂ 7 ವರ್ಷಗಳ ಕಾಲ ಅವರೇ ಸಿಎಂ ಆಗಿರ್ತಾರೆ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ಆವಾಗಲೂ ಡಿಕೆಶಿ ಸಿಎಂ ಪಟ್ಟಕ್ಕೇರುತ್ತಾರೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಅಲ್ಲದೇ ಇದೇ ವೇಳೆ ಮಾತನಾಡಿರುವ ಬಸವರಾಜ್, ಕೆ.ಎನ್.ರಾಜಣ್ಣ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ರಾಜಣ್ಣ ಹೇಳಿಕೆಯಿಂದ ಪಕ್ಷಕ್ಕೆ, ರಾಜ್ಯ ಸರ್ಕಾರಕ್ಕೆ ಭಾರೀ ಮುಜುಗರವಾಗುತ್ತಿದೆ. ಹೈಕಮಾಂಡ್ ಇದನ್ನು ಗಮನಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ರಾಜಣ್ಣಂಗೆ ಶಾಸಕ ಬಸವರಾಜ್ ಟಾಂಗ್ ಕೊಟ್ಟಿದ್ದಾರೆ.
ಒಟ್ಟಾರೆಯಾಗಿ, ಡಿಕೆಶಿ ಕೂಡ ತಾವು ಸಿಎಂ ಆಗಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ದೇವರು, ದೈವಗಳ ಮೊರೆ ಹೋಗಿರುವ ಡಿಕೆಶಿ, ಕುಂಭಮೇಳಕ್ಕೆ ಹೋಗಿ ಗಂಗಾಾಸ್ನಾನ ಮಾಡಿದ್ದಾರೆ. ಕುಂಭಕೋಣಂ ದೇವಸ್ಥಾನ, ಬೇರೆ ಬೇರೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪ್ರತ್ಯಂಗೀರಾ ಹೋಮವನ್ನೂ ಮಾಡಿ, ದೇವಿಯ ದಯೆಗಾಗಿ ಕಾಯುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ ಹೊತ್ತಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ ಮುಗಿಯುತ್ತದೆ. ಬಳಿಕ ತನಗೆ ಸಿಎಂ ಕುರ್ಚಿ ಬಿಟ್ಟುಕೊಡಬೇಕು ಎಂದು ಡಿಕೆಶಿ ಕಾಂಗ್ರೆಸ್ ಹೈಕಮಾಂಡ್ ಬಳಿ ಮನವಿ ಮಾಡಿ, ಸಮಯವನ್ನೂ ನೀಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ತಮ್ಮ ಸಿಎಂ ಪಟ್ಟ ಬಿಟ್ಟು ಕೊಡ್ತಾರಾ ಅಥವಾ ತಾವೇ ಮುಂದುವರಿಯಬೇಕು ಎಂದು ಪಟ್ಟು ಹಿಡಿಯುತ್ತಾರಾ ಅನ್ನೋದು ಕಾಲವೇ ಉತ್ತರಿಸಬೇಕು.