Political News: ಸಿದ್ದರಾಮಯ್ಯ ಕೈಯಿಂದ ಅಧಿಕಾರ ಪಡೆಯೋದು ಸುಲಭವಲ್ಲ

Political News: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯ ಬದಲಾವಣೆಯ ಕಸರತ್ತಿನ ನಡುವೆಯೇ ಕೋಟಿ ಮಠದ ಡಾ. ಶಿವಯೋಗಿ ಶಿವಾನಂದ ಶ್ರೀಗಳು ನುಡಿದಿರುವ ಭವಿಷ್ಯ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆ ವಿಚಾರದಲ್ಲಿ ಮಾತನಾಡಿರುವ ಅವರು, ಹಾಲುಮತ ಸಮಾಜ ಪ್ರಾಚೀನ ಕಾಲದಿಂದಲೂ ಸಹ ಅಪಾರ ದೈವಾರಾಧನೆ ಮಾಡುವ ಸಮಾಜವಾಗಿದೆ. ಹಾಲು ಕೆಟ್ಟರು ಹಾಲುಮತ ಸಮಾಜ ಕೆಡದು, ಹಾಲುಮತ ಸಮಾಜದಲ್ಲಿ ರಾಜ್ಯದ ಅಧಿಕಾರವಿದೆ.

ಸಿದ್ದರಾಮಯ್ಯ ಕೈಯಿಂದ ಅಧಿಕಾರ ತಿತ್ತುಕೊಳ್ಳುವುದು ಸುಲಭವಲ್ಲ..
ಅವರು ತಾವಾಗಿಯೇ ಕುರ್ಚಿ ಬಿಡಬೇಕು..

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಸ್ವಯಂ ಪ್ರೇರಿತರಾಗಿಯೇ ಆ ಸಿಎಂ ಕುರ್ಚಿಯನ್ನು ಬಿಡಬೇಕು. ಬದಲಿಗೆ ಒತ್ತಾಯ ಪೂರ್ವಕವಾಗಿ ಬಿಡಿಸುವುದು ಅಷ್ಟೊಂದು ಸಲೀಸಾಗಿಲ್ಲ ಎನ್ನುವ ಮೂಲಕ ಕುರ್ಚಿಯ ವಿಚಾರಕ್ಕೆ ಕುದಿಯುತ್ತಿರುವ ರಾಜಕಾರಣದಲ್ಲಿ ಶ್ರೀಗಳು ಇನ್ನಷ್ಟು ಕಂಪನ ಸೃಷ್ಟಿಸುತ್ತಿದ್ದಾರೆ. ಇನ್ನೂ ರಾಜ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ, ಮಳೆ, ಬೆಳೆ ಎಲ್ಲ ಚೆನ್ನಾಗಿ ಆಗಲಿದೆ. ನಾಡಿನ ಜನ ಸುಭಿಕ್ಷೆಯಿಂದ ಇರಲಿದ್ದಾರೆ, ಯುಗಾದಿ ಬಳಿಕ ಎಲ್ಲವೂ ತಿಳಿಯಲಿದೆ ಎಂದು ಶ್ರೀಗಳು ನುಡಿದಿದ್ದಾರೆ.

ಹಾಲು ಮತದವರು ಅಪಾರ ದೈವಾರಾಧಕರು..
ರಾಜಕಾರಣದ ಕುರಿತು ಕೋಡಿ ಶ್ರೀ ಸ್ಫೋಟಕ ಭವಿಷ್ಯ..

ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕಬುಕ್ಕರು ಹಾಲುಮತದ ಸಮಾಜದವರು. ಇವತ್ತು ಕೂಡಾ ವಿಜಯನಗರ ಸಾಮ್ರಾಜ್ಯದ ಹೆಸರು ಎಲ್ಲೆಡೆ ಖ್ಯಾತಿಯಾಗಿದೆ. ಆ ಸಮಾಜದ ಕೈಯಲ್ಲಿ ಅಧಿಕಾರ ಹೋದರೆ ಅಷ್ಟು ಸುಲಭವಾಗಿ ಅದನ್ನು ಕಸಿದುಕೊಳ್ಳಲು ಆಗುವುದಿಲ್ಲ. ಯಾವಾಗಲೂ ಸಮಾಜದ ಪರ, ರಾಜ್ಯದ ಹಿತಕ್ಕಾಗಿ ಉತ್ತಮ ಕೆಲಸ ಮಾಡುವರಿಗೆ ಕೆಡಕಾಗುವುದು ಕಷ್ಟ. ಈಗ ಅದೇ ಹಾಲುಮತ ಸಮಾಜದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾರೆ. ಹೀಗಾಗಿ ಅವರಿಂದ ಅಧಿಕಾರ ಕಿತ್ತುಕೊಳ್ಳುವದು ಪ್ರಯಾಸದಾಯಕ. ಅಲ್ಲದೆ ಈ ಹಿಂದೆಯೂ ಸಹ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ನೀಡಿದ್ದಾರೆ. ಅವರಿಂದ ಅಧಿಕಾರ ಕಿತ್ತುಕೊಳ್ಳಲು ಯಾರಿಂದಲೂ ಆಗಿಲ್ಲ. ಇವತ್ತಿನ ರಾಜಕೀಯ ಚಿಂತನೆಯಲ್ಲಿ ಅದು ಸಾಧ್ಯವಿಲ್ಲ ಎಂದು ಕೋಡಿ ಶ್ರೀಗಳು ನುಡಿದಿದ್ದಾರೆ.

About The Author