Tuesday, March 11, 2025

Latest Posts

ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಹಾಕಿದ್ರೆ, ಆರ್ಥಿಕ ಪರಿಸ್ಥಿತಿ, ಆರೋಗ್ಯ ಎರಡೂ ಸುಧಾರಿಸುತ್ತದೆ

- Advertisement -

Spiritual: ಸ್ನಾನ ಮಾಡೋದು ಕಾಮನ್ ವಿಷಯ. ದೇಹ ಸ್ವಚ್ಛವಾಗಿ ಇರಲಿ. ಯಾವುದೇ ಕೀಟಾಣುವಿನಿಂದ ನಮಗೆ ತೊಂದರೆಯಾಗದಿರಲು, ರೋಗಗಳು ಬಾರದಿರಲಿ ಎಂದು ನಾವು ಸ್ನಾನ ಮಾಡುತ್ತೇವೆ. ಆದರೆ ಸ್ನಾನಕ್ಕೂ ಅದೃಷ್ಟಕ್ಕೂ ನಂಟಿದೆ ಅಂತಾ ನಿಮಗೆ ಗೊತ್ತಾ..? ಹೌದು.. ಸ್ನಾನದ ನೀರಿಗೆ ಕೆಲವು ವಸ್ತುಗಳನ್ನು ಸೇರಿಸುವುದರಿಂದ, ನಮ್ಮ ಅದೃಷ್ಟ, ಆರೋಗ್ಯ ಎಲ್ಲವೂ ಸುಧಾರಿಸುತ್ತದೆ. ಹಾಗಾದ್ರೆ ಸ್ನಾನದ ನೀರಿಗೆ ಏನೇನು ಹಾಕಿ ಸ್ನಾನ ಮಾಡಿದ್ರೆ, ಉತ್ತಮ ಅಂತಾ ತಿಳಿಯೋಣ ಬನ್ನಿ.

ರೋಸ್ ವಾಟರ್: ಸ್ನಾನ ಮಾಡುವ ನೀರಿಗೆ ರೋಸ್ ವಾಟರ್ ಸೇರಿಸಿದರೆ, ಸೌಂದರ್ಯ ಹೆಚ್ಚಾಗುತ್ತದೆ. ಅಲ್ಲದೇ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ, ವೈಜ್ಞಾನಿಕವಾಗಿ ಹೇಳುವುದಾದರೆ, ಇದರಿಂದ ನಮ್ಮ ದೇಹ ಫ್ರೆಶ್ ಆಗಿ, ವಾಸನೆ ರಹಿತವಾಗಿರುತ್ತದೆ.

ದಪ್ಪ ಉಪ್ಪು: ದಪ್ಪ ಉಪ್ಪು, ಅಥವಾ ಕೆಂಪು ಉಪ್ಪನ್ನು ನೀವು ಸ್ನಾನ ಮಾಡುವ ನೀರಿಗೆ ಬೆರಿಸಿ ಸ್ನಾನ ಮಾಡಿದರೆ, ನಿಮ್ಮ ಮನೆಯಲ್ಲಿ ಯಾವುದಾದರೂ ನಕಾರಾತ್ಮಕ ಶಕ್ತಿ ಇದ್ದರೆ, ಅಥವಾ ನಿಮ್ಮ ಮೇಲೆ ನಕಾರಾತ್ಮಕ ಶಕ್ತಿಯ ಪ್ರಭಾವವಿದ್ದರೆ, ಅಂಥ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ದೇಹದ ದುರ್ಗಂಧವೂ ದೂರವಾಗುತ್ತದೆ.

ಅರಿಶಿನ: ಇನ್ನು ಸ್ನಾನದ ನೀರಿಗೆ ಚಿಟಿಕೆ ಅರಿಶಿನ ಹಾಕಿದ್ರೆ, ಗುರುದೋಷ ನಿವಾರಣೆಯಾಗುತ್ತದೆ. ಅಲ್ಲದೇ, ಇದರಿಂದ ಆರ್ಥಿಕ ಸಂಕಷ್ಟವೂ ಪರಿಹಾರವಾಗುತ್ತದೆ.

ಗಂಗಾಜಲ: ಗಂಗಾಜಲವನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿದ್ರೆ, ಗಂಗಾಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ.

- Advertisement -

Latest Posts

Don't Miss