International News: ಡೊನಾಲ್ಡ್ ಟ್ರಂಪ್ ಎರಡನೇಯ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇತ್ತೀಚಿಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಪ್ರವಾಸದ ಕುರಿತು ಇದೊಂದು ಫಲಪ್ರದ ಭೇಟಿಯಾಗಿದೆ, ಉಭಯ ನಾಯಕರ ನಡುವಿನ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಬಲವರ್ಧನೆಯಾಗಿದೆ ಅನ್ನೋ ಚರ್ಚೆಗಳು ನಡೆದಿವೆ. ಆದರೆ ಈ ಎಲ್ಲವುಗಳ ನಡುವೆ ಅಮೆರಿಕದಲ್ಲಿ ಎಲ್ಲೋ ಒಂದು ಕಡೆ ನರೇಂದ್ರ ಮೋದಿಯವರ ಭೇಟಿಯು ಫೇಲ್ ಆಯಿತಾ..? ಮಾಧ್ಯಮಗಳಲ್ಲಿ ಟ್ರಂಪ್ ಸರ್ಕಾರ ಕೇವಲ ಶೋ ಅಪ್ ಮಾಡಿತಾ..? ಮೋದಿ ವಿರೋಧ ಸಾಧ್ಯವಾಗಿಲ್ಲದ್ದಕ್ಕೆ ಹಿಂದೂಗಳ ವಿರೋಧಕ್ಕೆ ಅಮೆರಿಕ ಮುಂದಾಯ್ತಾ..? ಟ್ರಂಪ್- ಮೋದಿ ಭೇಟಿಯಲ್ಲಿ ಭಾರತಕ್ಕೆ ಯಾವುದೇ ಲಾಭವಾಗಿಲ್ಲವಾ..? ಅಮೆರಿಕದಲ್ಲಿ ಹಿಂದೂಗಳಿಗಾದ ಅವಮಾನ ಏನು..? ಅನ್ನೋ ಈ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನ ತಿಳಿಯಲು ಈ ವಿಡಿಯೋವನ್ನ ತಪ್ಪದೇ ಕೊನೆಯವರೆಗೂ ವೀಕ್ಷಿಸಿ..
ಎಸ್.. ಡೊನಾಲ್ಡ್ ಟ್ರಂಪ್.. ಅಮೆರಿಕಾದಲ್ಲಿ ತನ್ನ ಹಲವು ಗಮನಾರ್ಹ ಹಾಗೂ ವಿಭಿನ್ನ ನಿರ್ಣಯಗಳನ್ನ ಕೈಗೊಳ್ಳುವ ಮೂಲಕ ಅಮೆರಿಕ ಫಸ್ಟ್ ಅನ್ನೋ ನೀತಿಗೆ ಬದ್ದರಾಗಿರುವ ನಾಯಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ಒಡನಾಟವನ್ನ ಹೊಂದಿರುವುದಾಗಿ ತೋರಿಕೆಯ ನಟನೆ ಮಾಡುವುದನ್ನ ಈ ಟ್ರಂಪ್ ಕರಗತ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಲ್ದೆ ವಿಶ್ವದ ಹಲವು ದೇಶಗಳ ವಿಚಾರದಲ್ಲಿ ಟ್ರಂಪ್ ವಿಧಿಸಿರುವ ತೆರಿಗೆ ನೀತಿಯಿಂದ ಸುದ್ದಿಯಲ್ಲಿದ್ದಾರೆ. ಇನ್ನೂ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆಯೂ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಈ ಟ್ರಂಪ್ ನಡೆಯು ಭಾರತಕ್ಕೆ ಲಾಭವಾಗುತ್ತೆ ಅನ್ನೋ ನಿರೀಕ್ಷೆ ಮೂಡಿತ್ತು. ಆದರೆ ಲಾಭವಾಗುವುದರ ಬದಲಿಗೆ ಅದು ಟ್ರಂಪ್ ಸರ್ಕಾರದ ಭಾರತ ವಿರೋಧಿ ನಿಲುವಿಗೆ ಕಾರಣವಾಗಿದೆ ಅನ್ನೋದು ಸ್ಪಷ್ಟವಾಗಿದೆ.
ಅಲ್ದೆ ಚೀನಾ, ಕೆನಡಾಗಳ ಜೊತೆ ತೆರಿಗೆ ಯುದ್ಧ ನಡೆಸುತ್ತಿರುವ ಅಮೆರಿಕ ಇದೀಗ ಭಾರತವನ್ನೂ ಬಿಟ್ಟಿಲ್ಲ ಅನ್ನೋದನ್ನ ದೊಡ್ಡನ್ಣ ತನ್ನ ದೇಶದ ಮೇಲೆ ಇಟ್ಟುಕೊಂಡಿರೋ ನಿಷ್ಠೆಯನ್ನ ತೋರಿಸುತ್ತೆ. ಅಂದಹಾಗೆ ಭಾರತದ ಮೇಲೆ ರೆಸಿಪ್ರೋಕಲ್ ಟ್ಯಾಕ್ಸ್ ವಿಧಿಸಲು ಅಮೆರಿಕ ಇದೀಗ ಮುಂದಾಗಿದೆ. ಇನ್ನೂ ಈ ರೆಸಿಪ್ರೋಕಲ್ ಟ್ಯಾಕ್ಸ್ ಏನು ಅಂತ ನೋಡೋದಾದ್ರೆ.. ಪ್ರಮುಖವಾಗಿ ಭಾರತದ ಮಾರುಕಟ್ಟೆಯನ್ನ ಪ್ರವೇಶಿಸುವ ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ಎಷ್ಟು ತೆರಿಗೆ ಹಾಕುತ್ತದೆಯೋ, ಅಷ್ಟೇ ತೆರಿಗೆಯನ್ನ ಅಮೆರಿಕವೂ ಸಹ ಅಲ್ಲಿನ ಮಾರುಕಟ್ಟೆಗೆ ಲಗ್ಗೆಯಿಡುವ ಭಾರತೀಯ ಉತ್ಪನ್ನಗಳ ಮೇಲೆ ವಿಧಿಸಲಿದೆ. ಈ ರೀತಿಯ ಟ್ಯಾಕ್ಸ್‌ಗೆ ರೆಸಿಪ್ರೋಕಲ್ ತೆರಿಗೆ ಪದ್ಧತಿ ಅಂತ ಟ್ರಂಪ್ ಹೇಳಿದ್ದಾರೆ. ಅಲ್ದೆ ಇದು ಅಮೆರಿಕದಲ್ಲಿ ಇತ್ತೀಚೆಗೆ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ರೂಪಿಸಲಾಗಿರುವ ಆಮದು ತೆರಿಗೆ ಪದ್ಧತಿಯಾಗಿದೆ. ಮುಂಬರುವ ಏಪ್ರಿಲ್ ತಿಂಗಳ 2ರಿಂದ ಅಮೆರಿಕದಲ್ಲಿ ರೆಸಿಪ್ರೋಕಲ್ ಟಾರಿಫ್ ನಿಯಮಗಳು ಜಾರಿಗೆ ಬರಲಿವೆ ಅನ್ನೋ ಮಾಹಿತಿಯನ್ನ ಅಮೆರಿಕದ ಅಧ್ಯಕ್ಷ ಟ್ರಂಪ್ ನೀಡಿದ್ದಾರೆ. ಇನ್ನೂ ಭಾರತಕ್ಕೆ ತೆರಿಗೆ ವಿಚಾರದಲ್ಲಿ ಯಾವುದೇ ಜ್ಞಾನವಿಲ್ಲ ಎಂದು ಅವರು ಟೀಕಿಸಿದ್ದಾರೆ. ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಮೋದಿ ಅಮೆರಿಕಕ್ಕೆ ಹೋಗಿ ಟ್ರಂಪ್ ಕೈಕುಲುಕಿ ಬಂದರೂ ಸಹ ಅದು ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಅದು ಭಾರತಕ್ಕೆ ವರವಾಗುವುದಿರಲಿ, ದೊಡ್ಡ ಶಾಪವೆ ಆಗಲಿದೆ ಅನ್ನೋದು ಸುಳ್ಳಲ್ಲ.
ತೆರಿಗೆ ಬೆನ್ನಲ್ಲೇ ದೊಡ್ಡಣ್ಣನ ಹಿಂದೂ ವಿರೋಧಿ ನಿಲುವು..
ಎಸ್.. ಪ್ರಖರ ಹಿಂದೂತ್ವವಾದಿ, ರಕ್ತದ ಕಣ ಕಣದಲ್ಲೂ ಹಿಂದುತ್ವವನ್ನೇ ತುಂಬಿಕೊಂಡಿರುವ ಪ್ರಧಾನಿ ಮೋದಿಯವರು ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ ಕೆಲವೇ ದಿನಗಳಲ್ಲಿಯೇ ಹಿಂದುಗಳಿಗೆ ಅವಮಾನಿಸುವ ಘಟನೆ ನಡೆದಿದೆ. ಅಂದಹಾಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಬಿಎಪಿಎಸ್ ಹಿಂದೂ ದೇವಾಲಯದ ಗೋಡೆ ಹಾಗೂ ಇತರೆಡೆ ಭಾರತ ವಿರೋಧಿ ಬರಹ ಕಂಡು ಬಂದಿದೆ. ಅಲ್ದೆ ದೇವಾಲಯವನ್ನ ಧ್ವಂಸ ಮಾಡಲಾಗಿದೆ. ಸ್ವತಃ ಮೋದಿ ಹೆಸರೇ ಉಲ್ಲೇಖಿಸಿ ಗೋಡೆಯ ಮೇಲೆ ಆಕ್ಷೇಪಾರ್ಹವಾಗಿ ಬರೆಯಲಾಗಿದೆ. ಚಿನೋ ಹಿಲ್ಸ್ ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ ಅಪವಿತ್ರಗೊಂಡಿದೆ ಎಂದು ಹಿಂದೂ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿರುವ ಅಮೆರಿಕದ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ ಹೇಳಿದೆ. ಮೋದಿ ಹಿಂದೂಸ್ತಾನ್ ಮುರ್ದಾಬಾದ್ ಅಂತ ಬರೆದು ಭಾರತೀಯರನ್ನ ಕೆರಳಿಸುವಂತೆ ಮಾಡಲಾಗಿದೆ. ಇದರಿಂದ ಅಮೆರಿಕದ ವಿರುದ್ಧ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇನ್ನೂ ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಲ್ಲುತ್ತದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದ ಜನರೊಂದಿಗೆ ದ್ವೇಷ ಬೇರೂರಲು ನಾವು ಬಿಡುವುದಿಲ್ಲ. ನಮ್ಮ ಮಾನವೀಯತೆ ಮತ್ತು ನಂಬಿಕೆಯಿಂದ ಶಾಂತಿ ಮತ್ತು ಕರುಣೆ ಮೇಲುಗೈ ಸಾಧಿಸಲಿದೆ ಅಂತ ಬಿಎಪಿಎಸ್ ಹೇಳಿಕೊಂಡಿದೆ. ಅಲ್ದೆ ಇದೇ ವಿಚಾರಕ್ಕೆ ಆಕ್ರೋಶ ಹೊರಹಾಕಿರುವ ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ, ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹದ ದಿನ ಹತ್ತಿರವಾಗುತ್ತಿದ್ದಂತೆ ದೇವಾಲಯ ಧ್ವಂಸವಾಗುವುದು ನಿರೀಕ್ಷಿತವಾಗಿತ್ತು ಎಂದು ಹೇಳಿದೆ. ಅಲ್ದೆ ಕಳೆದ 2022 ರಿಂದ ಅಮೆರಿಕದಲ್ಲಿ ಧ್ವಂಸಗೊಂಡಿರುವ ದೇವಾಲಯಗಳ ಪಟ್ಟಿ ನೀಡಿ, ಈ ಪ್ರಕರಣಗಳ ಸೂಕ್ತ ತನಿಖೆಗೆ ಹಿಂದೂ ಒಕ್ಕೂಟ ಆಗ್ರಹಿಸಿದೆ. ಉತ್ತರ ಅಮೆರಿಕಾದಲ್ಲಿ ಹಿಂದೂ ಧರ್ಮದ ಪ್ರಸಾರಕ್ಕಾಗಿ ಮತ್ತು ಹಿಂದೂ ಸಮುದಾಯದ ವಿರೋಧಿ ವಿಚಾರಗಳನ್ನ ಖಂಡಿಸುವುದರ ಜೊತೆಗೆ ಧರ್ಮದ ಬೆಳವಣಿಗೆಗೆ ಈ ಒಕ್ಕೂಟವು ಶ್ರಮಿಸುತ್ತಿದೆ ಅನ್ನೋದು ಗಮನಾರ್ಹ.
ಮೋದಿ ವಿರೋಧಿ ನಿಲುವಿನ ಅಮೆರಿಕ..
ಇನ್ನೂ ನಾವಿಲ್ಲಿ ಅಮೆರಿಕದ ಧರ್ಮ ಸಹಿಷ್ಣುತೆಯ ನೀತಿಯ ಬಗ್ಗೆ ನೋಡಿದಾಗ.. ಪ್ರಜಾಪ್ರಭುತ್ವವನ್ನ ಹೊಂದಿರುವ ಅಮೆರಿಕದಲ್ಲಿ ಮುಕ್ತ ಅಭಿವ್ಯಕ್ತಿಗೆ ಹಾಗೂ ಧರ್ಮ ಪಾಲನೆಗೆ ಅವಕಾಶಗಳಿವೆ. ಅಲ್ಲಿ ಹಿಂದೂ ಮಂದಿರಗಳು ನಿರ್ಮಾಣವಾಗುತ್ತಿರುವ ಬಗ್ಗೆ ಮೇಲಿಂದ ಮೇಲೆ ಕೆಲವು ಆಕ್ಷೇಪಗಳು ವ್ಯಕ್ತವಾಗಿ, ದಾಳಿಗಳನ್ನ ನಡೆಸಲಾಗಿತ್ತು. ಅಂದಹಾಗೆ ಭಾರತದ ಹಿಂದೂಗಳನ್ನ ಅಪ್ಪಿಕೊಳ್ಳೋ ರೀತಿ ನಾಟಕವಾಡುವ ಅಮೆರಿಕದಲ್ಲಿ ಹಿಂದೂ ಮಂದಿರವನ್ನ ಹಾಳುಗೆಡವಲು ಹಲವು ಬಾರಿ ಯತ್ನಗಳು ನಡೆದಿವೆ. ಅಲ್ದೆ ಕಳೆದ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹೊಸ್ತಿಲಲ್ಲೇ ಎರಡು ಬಾರಿ ಹಿಂದೂ ದೇವಾಲಯಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರ ವಿರುದ್ಧ ಹಗೆತನದ ಸಂದೇಶಗಳನ್ನ ಬರೆಯಲಾಗಿತ್ತು. ಹಿಂದೂಗಳನ್ನ, ಭಾರತೀಯರನ್ನ ಅವಮಾನಿಸುವ ತಂತ್ರದ ಭಾಗವಾಗಿರುವ ಈ ಚಟುವಟಿಕೆಗಳು ನಿಜಕ್ಕೂ ಅಮೆರಿಕದ ಎದೆಯಲ್ಲಿ ಭಾರತದ ಬಗ್ಗೆ ಇರುವ ನಿಲುವನ್ನ ಪ್ರಶ್ನಿಸುವಂತಾಗಿದೆ. ಅಲ್ದೆ ಇಷ್ಟಕ್ಕೆ ಸಮಾಧಾನದವಾಗದ ಈ ದ್ವೇಷ, ಈಗಲೂ ಕೂಡ ಹಿಂದೂಗಳು ಹಾಗೂ ಪ್ರಧಾನಿ ಮೋದಿಯವರನ್ನ ಟಾರ್ಗೆಟ್ ಮಾಡಿ ಮಂದಿರದ ಬೋರ್ಡ್‌ಗಳ ಮೇಲೆ ಬರಹಗಳನ್ನ ಬರೆಯುವಂತೆ ಮಾಡಿದೆ. ಇದನ್ನೆಲ್ಲ ನಾವು ನೋಡಿದಾಗ ಅಮೆರಿಕದಲ್ಲಿ ಮೋದಿಯ ಬಗ್ಗೆ ನಿಜವಾಗಿ ಪ್ರೀತಿಯ ಬದಲು ದ್ವೇಷವೇ ಹೆಚ್ಚಾಗಿದೆ ಅನ್ನೋದು ಕನ್ಫರ್ಮ್ ಆಗುತ್ತೆ..
ಇನ್ನೂ ಕಳೆದ ಸೆಪ್ಟೆಂಬರ್‌ನಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಹಿಂದೂ ದೇವಾಲಯದ ಮೇಲೆ ಹಿಂದೂಗಳೇ ಹಿಂತಿರುಗಿ! ಅಂತ ಗೀಚಲಾಗಿತ್ತು. ಸ್ಯಾಕ್ರಮೆಂಟೊ ಘಟನೆಯ ಸುಮಾರು 10 ದಿನಗಳ ಮುನ್ನ, ನ್ಯೂಯಾರ್ಕ್‌ನ ಮೆಲ್‌ವಿಲ್ಲೆಯಲ್ಲಿರುವ ಮತ್ತೊಂದು ಶ್ರೀ ಸ್ವಾಮಿನಾರಾಯಣ ಮಂದಿರವನ್ನ ದ್ವೇಷಪೂರಿತ ಸಂದೇಶಗಳೊಂದಿಗೆ ವಿರೂಪಗೊಳಿಸಲಾಗಿತ್ತು. ಪ್ರಸ್ತುತ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಘಟನೆಯನ್ನ ತೀವ್ರವಾಗಿ ಖಂಡಿಸಿದೆ. ಅಲ್ದೆ ಸ್ಥಳೀಯ ಹಿಂದೂ ಸಮುದಾಯವನ್ನಈ ರೀತಿಯ ಘಟನೆಗಳು ಆತಂಕಕ್ಕೀಡು ಮಾಡಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸಮುದಾಯವು ಒಗ್ಗಟ್ಟಿನಿಂದ ನಿಲ್ಲುವ ಬದ್ಧತೆಯನ್ನ ಪ್ರದರ್ಶಿಸಿದೆ.
ಒಟ್ನಲ್ಲಿ.. ಇನ್ನೊಂದು ರಾಷ್ಟ್ರದ ಏಳಿಗೆಯನ್ನ ಸಹಿಸಿಕೊಳ್ಳಲಾಗದ ಅಮೆರಿಕ ಯಾವತ್ತೂ ತನ್ನ ಹೊಟ್ಟೆ ಕಿಚ್ಚಿನಿಂದಲೇ, ಕುತಂತ್ರಗಳಿಂದಲೇ ಸಣ್ಣ ಸಣ್ಣ ದೇಶಗಳನ್ನ ಹೆದರಿಸಿ ತನ್ನ ಸುಪರ್ದಿಗೆ ಪಡೆಯಬೇಕೆಂದು ಹವಣಿಸುತ್ತಲೇ ಇದೆ. ಕೆನಡಾ, ಫ್ರಾನ್ಸ್ ನಂತಹ ದೇಶಗಳನ್ನ ಬೆದರಿಸಿ ಸ್ವಾಧೀನಕ್ಕೆ ಪ್ಲಾನ್ ಮಾಡುತ್ತಿರುವ ವಿಶ್ವದ ದೊಡ್ಡಣ್ಣ ಮಾತ್ರ ತನ್ನ ಸಣ್ಣ ಬುದ್ದಿಯನ್ನ ಇನ್ನೂ ಬಿಟ್ಟಿಲ್ಲ. ಮೋದಿಯ ಎದುರು ಭಾರತವನ್ನ ಹೊಗಳಿ ಬೆನ್ನ ಹಿಂದೆ ಚೂರಿ ಹಾಕುವ ಕೆಲಸವನ್ನ ಇದೀಗ ಅಮೆರಿಕ ಮಾಡುತ್ತಿದೆ. ಭಾರತಕ್ಕೆ ತೆರಿಗೆಯ ವಿಚಾರದಲ್ಲಿ ಯಾವುದೇ ಜ್ಞಾನವಿಲ್ಲ, ಬೇಕಾಬಿಟ್ಟಿಯಾಗಿ ಟ್ಯಾಕ್ಸ್ ವಿಧಿಸುತ್ತಾರೆ ಅನ್ನೋ ಟೀಕೆಗಳನ್ನ ಟ್ರಂಪ್ ನೇರವಾಗಿ ಮಾಡಿದ್ದಾರೆ. ಇದಾದ ಬೆನ್ನಲ್ಲೇ ದೇವಸ್ಥಾನದ ಧ್ವಂಸದ ಕೃತ್ಯ ನಡೆದಿದೆ. ಇಷ್ಟೆಲ್ಲ ನವರಂಗಿ ಆಟಗಳನ್ನ ಆಡುವ ಈ ಟ್ರಂಪ್ ಮುಂದಿನ ದಿನಗಳಲ್ಲಿ ಅಲ್ಲಿನ ಖಲಿಸ್ತಾನಿಗಳ ಬೆಂಬಲಕ್ಕೆ ನಿಂತು ಹಿಂದುಗಳಿಗೆ ಹಾಗೂ ಭಾರತಕ್ಕೆ ಸಂಕಷ್ಟ ತರದಿರಲಿ. ಅದಕ್ಕೆ ಈ ಟ್ರಂಪ್ ವಿಚಾರದಲ್ಲಿ ಭಾರತ ಯಾವತ್ತೂ ಎಚ್ಚರಿಕೆಯ ಹೆಜ್ಜೆ ಹಾಕಬೇಕಿದೆ ಅನ್ನೋದನ್ನ ನಾವಿಲ್ಲಿ ಅಲ್ಲಗಳೆಯುವಂತಿಲ್ಲ.