Political News: ಹಿಂದುತ್ವದ ಹೆಸರಲ್ಲಿ ಡಿ.ಕೆ.ಶಿವಕುಮಾರ್ ನಾಟಕ: ಪ್ರಮೋದ್ ಮುತಾಲಿಕ್ ಕಿಡಿ

Hubli News: ಹುಬ್ಬಳ್ಳಿ; ಡಿ.ಕೆ.ಶಿವಕುಮಾರ್ ಹಿಂದೂತ್ವದ ಹೆಸರಲ್ಲಿ ನಾಟಕ ಮಾಡುತ್ತಿರುವುದನ್ನು ನಾನು ಒಪ್ಪುವುದಿಲ್ಲ. ಕಾಂಗ್ರೆಸ್ ಹಾಗೂ ಡಿ‌.ಕೆ.ಶಿವಕುಮಾರ್ ಹಿಂದೂತ್ವಕ್ಕೆ ಹಾಗೂ ದೇಶಕ್ಕೆ ಬಹುದೊಡ್ಡ ಹಾನಿ ಮಾಡಿದವರು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹಿಂದೂತ್ವಕ್ಕೆ ಹಾನಿ ಮಾಡಿ ಈಗ ನಾಟಕ ಮಾಡುತ್ತಿರುವುದು ಸರಿಯಲ್ಲ. ನಾನು ಒಪ್ಪುವುದಿಲ್ಲ ನಮ್ಮ ಹಿಂದೂ ಸಮಾಜವು ಒಪ್ಪುವುದಿಲ್ಲ ಇದೆಲ್ಲಾ ಅಧಿಕಾರಕ್ಕಾಗಿ ಮಾಡುತ್ತಿರುವ ನಾಟಕ ಎಂದು ಕಿಡಿಕಾರಿದರು.

ಹಿಂದೂ ನಾಯಕರ ಕೊಲೆಯಾದ ಸಂದರ್ಭದಲ್ಲಿ ನೀವು ನಡೆದುಕೊಂಡ ರೀತಿ, ನಿಮ್ಮ ಪ್ರತಿಕ್ರಿಯೆ ಹೇಗಿತ್ತು ಸ್ವಲ್ಪ ಪೂರ್ವಾಪರ ನೋಡಿಕೊಳ್ಳಿ ಈಗ ಹಿಂದುತ್ವದ ನಾಟಕ ಆಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.

About The Author