ತಣ್ಣಗಾಗದ ಜಯನಗರ ಮತ ಎಣಿಕೆ ವಿವಾದ.. ಬಿಜೆಪಿ ಶಾಸಕ ರಾಮಮೂರ್ತಿ ಅರ್ಜಿ ವಜಾ..

Political News: ಜಯನಗರ ವಿಧಾನಸಭಾ ಚುನಾವಣೆಯ ಮತ ಎಣಿಕೆ ವಿವಾದದಲ್ಲಿ ಮಾಜಿ ಶಾಸಕಿ‌ ಸೌಮ್ಯ ರೆಡ್ಡಿ ವಿರುದ್ಧದ ಶಾಸಕ ರಾಮಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್! ವಜಾಗೊಳಿಸಿದೆ. ಸದ್ಯ ಜಯನಗರ ಶಾಸಕರಾಗಿರುವ ಸಿ.ಕೆ.ರಾಮಮೂರ್ತಿ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಪರಾಜಿತ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರು ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಹೈಕೋರ್ಟ್‌ ಕೂಡ ಈ ಕುರಿತು ಸೌಮ್ಯರೆಡ್ಡಿ ಅವರಿಗೆ ಕೆಲವು ಸೂಚನೆಗಳನ್ನು ನೀಡಿತ್ತು. ಇದನ್ನು ಪ್ರಶ್ನಿಸಿ, ರಾಮಮೂತ್ರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್‌ ಅವರ ಅರ್ಜಿಯನ್ನು ಇದೀಗ ರದ್ದುಗೊಳಿಸಿದೆ.

ಇನ್ನೂ ಈ ಹಿಂದೆ ಹೈಕೋರ್ಟ್‌ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ರಾಮಮೂರ್ತಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಅಲ್ಲದೆ ಸೌಮ್ಯ ರೆಡ್ಡಿ ಅವರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪ್ರಕರಣಕ್ಕೆ ಸಂಬಂಧಪಟ್ಟ ಡಿವಿಡಿ ಹಾಗೂ ಮುಖ್ಯವಾದ 10 ದಾಖಲೆಗಳನ್ನು ಹಾಜರುಪಡಿಸಲು ಕಳೆದ ಫೆಬ್ರವರಿ 14ರಂದು ಅವಕಾಶ ಕಲ್ಪಿಸಿತ್ತು. ಆದರೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ ರಾಮಮೂರ್ತಿಯವರಿಗೆ ಈ ದಾಖಲೆಗಳಿಗೆ ಲಿಖಿತ ಹೇಳಿಕೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶವನ್ನು ರಾಮಮೂರ್ತಿಯವರಿಗೆ ಸುಪ್ರೀಂಕೋರ್ಟ್‌ ನೀಡಿದ್ದು ಸೌಮ್ಯ ವಿರುದ್ಧ ರಾಮಮೂರ್ತಿಯವರಿಗೆ ಈ ಪ್ರಕರಣದಲ್ಲಿ ಹಿನ್ನಡೆಯಾದಂತೆ ಕಂಡುಬರುತ್ತಿದೆ.

16 ಮತಗಳಿಂದ ಸೋತಿದ್ದ ಸೌಮ್ಯ ರೆಡ್ಡಿ..

ಕಳೆದ 2023ರ ವೇಳೆ ರಾಜ್ಯದಲ್ಲಿ ನಡೆದಿದ್ದ ವಿಧಾನಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಕೆ. ರಾಮಮೂರ್ತಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸೌಮ್ಯ ರೆಡ್ಡಿ ಕೇವಲ 16 ಮತಗಳಿಂದ ಸೋಲುಂಡಿದ್ದರು. ಇದರಿಂದ ಮತ ಎಣಿಕೆಯಲ್ಲಿ ಪಾರದರ್ಶಕತೆ ಕಂಡುಬಂದಿಲ್ಲ ಎಂದು ಆರೋಪಿಸಿ ಸೌಮ್ಯ ರೆಡ್ಡಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ವಿದ್ಯುನ್ಮಾನ ಯಂತ್ರಗಳ ಮತ ಎಣಿಕೆಯಲ್ಲಿ ನಾನು ಮುನ್ನಡೆಯಲ್ಲಿದ್ದೆ. ಆದರೆ ಪೋಸ್ಟಲ್‌ ಮತಗಳ ಎಣಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಒಟ್ಟು 827 ಅಂಚೆ ಮತಗಳಲ್ಲಿ ವ್ಯತ್ಯಾಸವಾಗಿದ್ದು, ಪ್ರತಿ ಬಾರಿ ಮರು ಎಣಿಕೆ ಮಾಡಿದಾಗಲೂ ಬೇರೆ ಬೇರೆ ಅಂಕಿ-ಅಂಶ ಬಂದಿದೆ. ಮತ ಎಣಿಕೆ ಆರಂಭವಾದ ಬಳಿಕವೂ ಅಂಚೆಯಿಂದ ಬಂದಿದ್ದ ಮತ ಪತ್ರಗಳನ್ನೂ ಸಹ ಗಣನೆಗೆ ಪಡೆಯಲಾಗಿದೆ ಎಂದು ಸೌಮ್ಯಾರೆಡ್ಡಿ ಆರೋಪಿಸಿದ್ದರು.

About The Author