Mysuru News: ಈಗಿನ ಕಾಲದ ಹಲವು ಮಕ್ಕಳಿಗೆ ತಂದೆ ತಾಯಿಯ ಕಷ್ಟ ಅರಿತುಕೊಳ್ಳುವ ಬುದ್ಧಿ ಕಡಿಮೆ. ತಂದೆ ತಾಯಿ ಮಾಡಿದ ತ್ಯಾಗ ಮರೆಯುವ ಮಕ್ಕಳೇ ಈಗಿನ ಕಾಲದಲ್ಲಿ ಹೆಚ್ಚಾಗಿದ್ದಾರೆ. ಅಲ್ಲದೇ, ಮದುವೆ, ಸಂಸಾರವೆಂದರೆ, ಮಕ್ಕಳಾಟವಾಗಿಬಿಟ್ಟಿದೆ. ಸಿನಿಮಾ, ಸಿರಿಯಲ್ ರೀತಿ ಮದುವೆ ಮಂಟಪದಲ್ಲಿ ಹೈಡ್ರಾಮಾ ನಡೆಯೋದು ಕಾಮನ್ ಆಗಿ ಬಿಟ್ಟಿದೆ.
ಅದೇ ರೀತಿ ಬೆಂಗಳೂರಿನಲ್ಲೊಂದು ಘಟನೆ ನಡೆದಿದ್ದು, ಹಳದಿ ಶಾಸ್ತ್ರ, ನಾಂದಿ, ಮೆಹೆಂದಿ ಶಾಸ್ತ್ರ ಎಲ್ಲವೂ ಮುಗಿದ ಬಳಿಕ, ಮದುವೆ ದಿನವೇ ವರ ಮಂಟಪದಿಂದ ಎಸ್ಕೇಪ್ ಆಗಿದ್ದಾನೆ. ಈತನ ಈ ಹುಚ್ಚಾಟಕ್ಕೆ ಕಾರಣವೇನು ಅಂದ್ರೆ, ವಧುವಿನ ಅಪ್ಪನ ಬಳಿ ಈತ ವರದಕ್ಷಿಣೆಗಾಗಿ ಡಿಮ್ಯಾಂಡ್ ಮಾಡಿದ್ದ. ಆದರೆ ಮಾವ ಮಾತ್ರ ಖಡಾಖಂಡಿತವಾಗಿ, ಮದುವೆ ಬೇಕಾದ್ರೆ ಮಾಡಿಸೋಣ, ವರದಕ್ಷಿಣೆ ಎಲ್ಲ ಕೋಡೋಕ್ಕಾಗಲ್ ಎಂದಿದ್ದಾರೆ. ಇದೇ ಸೇಡಿಗೆ ವರ ಈ ರೀತಿ ಮದುವೆ ಮಂಟಪದಿಂದಲೇ ಎಸ್ಕೇಪ್ ಆಗಿದ್ದಾನೆ.
ಇನ್ನು ಇದು ಅಪ್ಪ ಅಮ್ಮನ ಒತ್ತಾಯಕ್ಕೆ ಮದುವೆಯಾಗಿದ್ದಲ್ಲ. ಬದಲಾಗಿ ಲವ್ ಮ್ಯಾರೇಜ್ ಆಗಬೇಕಾಗಿತ್ತು. ವಧು ವರ ಇಬ್ಬರೂ ಮೈಸೂರಿನಲ್ಲೇ ಓದಿ, ಪ್ಯಾರಿಸ್ನಲ್ಲಿ ಕೆಲಸಕ್ಕೆ ಸೇರಿದ್ದರು. ಪ್ಯಾರಿಸ್ನ ಫ್ರಾನ್ಸ್ನಲ್ಲಿ ಒಂದೇ ಕಡೆ ಕೆಲಸಕ್ಕೆ ಸೇರಿದಾಗ, ಅಲ್ಲಿ ಮತ್ತೆ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿದೆ. ಪ್ಯಾರಿಸ್ನಲ್ಲಿ ಪ್ರಣಯ ಪಕ್ಷಿಗಳು ಓಡಾಡಿ, ಮನೆಯವರನ್ನು ಒಪ್ಪಿಸಿ, ಮದುವೆಗೆ ತಯಾರಾಗಿದ್ದರು.
ಆದರೆ ವಧುವಿನ ಅಪ್ಪನ ಬಳಿ ವರ 50 ಲಕ್ಷ ರೂಪಾಯಿ, ಅರ್ಧ ಕೆಜಿ ಚಿನ್ನ, ಒಂದು ಬೆಂಜ್ ಕಾರ್ ಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾನೆ. ವಧುವಿನ ಅಪ್ಪ ಈ ಲವ್ ಮ್ಯಾರೇಜ್ ಒಪ್ಪಿಕೊಂಡಿದ್ದೇ ದೊಡ್ಡದು. ಅಂಥಾದ್ರಲ್ಲಿ, ಇವನ ಡಿಮ್ಯಾಂಡ್ ಒಪ್ಪುತ್ತಾರಾ..? ಖಂಡಿತವಾಗಿಯೂ ಈ ಡಿಮ್ಯಾಂಡ್ನ್ನು ತಳ್ಳಿ ಹಾಕಿದ್ದಾರೆ. ಅಂತು ಇಂತೂ ವರದಕ್ಷಿಣೆ ಇಲ್ಲದೇ ಮದುವೆಯಾಗುತ್ತೇವೆ ಎಂದು ಇಬ್ಬರ ಕಡೆಯವರೂ ಒಪ್ಪಿ, ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು.
ವಧುವಿನ ಅಪ್ಪ ಗಾಂಧಿನಗರದ ಮ್ಯಾರೇಜ್ ಹಾಲ್ನಲ್ಲಿ ಮದುವೆ ಫಿಕ್ಸ್ ಮಾಡಿದ್ದರು. ಸಂಬಂಧಿಕರಿಗೆ, ಬಂಧು ಬಾಂಧವರಿಗೆ ವೆಡ್ಡಿಂಗ್ ಕಾರ್ಡ್ ಕೂಡ ಕೊಟ್ಟಾಗಿತ್ತು. ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿದ ಬಳಿಕವೂ, ವರನ ಸಂಬಂಧಿಕರು ಬಂದು ಮತ್ತೆ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ದಾರಂತೆ. ಮದುವೆಗೆ ಲಕ್ಷ ಲಕ್ಷ ಹಣ ಖರ್ಚಾಗಿದೆ. ಇಷ್ಟು ವರದಕ್ಷಿಣೆ ಕೊಡಲಾಗುವುದಿಲ್ಲವೆಂದು ವಧುವಿನ ತಂದೆ ಹೇಳಿದ್ದಾರೆ.
ಖುಷಿ ಖುಷಿಯಾಗಿ ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ್ ಎಲ್ಲವೂ ನಡೆದಿತ್ತು. ಆದರೆ ಮದುವೆ ದಿನವೇ ವರ ಮಂಟಪದಿಂದ ಕಾಲ್ಕಿತ್ತಿದ್ದಾನೆ. ಇದೀಗ ವಧುವಿನ ಕಡೆಯವರು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ವರ ಹಾಗೂ ಆತನ ಅಪ್ಪ ಅಮ್ಮನ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ, ಪ್ಯಾರಿಸ್ನಲ್ಲಿ ವರ ವಧುವಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಆರೋಪಿಸಲಾಗಿದೆ.
ಒಟ್ಟಾರೆಯಾಗಿ ಧನಪಿಶಾಚಿ ವರ ಅಮಾಯಕ ಹೆಣ್ಣು ಮಗಳ ಜೀವನದಲ್ಲಿ ಆಟವಾಡಿದ್ದಾನೆ. ಇಂಥವರನ್ನು ಪೊಲೀಸರು ಸುಮ್ಮನೆ ಬಿಡದೇ, ಅತ್ಯಂತ ಕಠಿಣ ಶಿಕ್ಷೆಯನ್ನೇ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.




