Kannada Fact Check: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಂಭ ಮೇಳ ಶುರುವಾದ ಬಳಿಕ, ಅದರ ಬಗ್ಗೆ ಹೇಳಿಕೆಯೊಂದನ್ನು ಕೊಟ್ಟಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕುಂಭಮೇಳದಲ್ಲಿ ಮಿಂದ ಬಳಿಕ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ದೇಶದ ಬಡತನ ಕೊನೆಗೊಳ್ಳುತ್ತದೆಯಾ ಅಂತಾ ಪ್ರಶ್ನಿಸಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆಯವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಹಾಾಗಾಗಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರೆ, ದೇಶದ ಬಡತನ ವಾಸಿಯಾಗತ್ತಾ ಅಂತಾ ಪ್ರಶ್ನಿಸಿ, ಈ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ನಿಜ. ಆದರೆ ಅವರು ಭಾಗವಹಿಸಿದ್ದು 2006ರಲ್ಲಿ. ಈ ಫೋಟೋವನ್ನು ಇದೀಗ ವೈರಲ್ ಮಾಡಿ, ಅವರ ಕುಂಭ ಮೇಳದ ಹೇಳಿಕೆಗೆ ತಾಕುವಂತೆ, ಟ್ರೋಲ್ ಮಾಡಲಾಗಿದೆ.
Claim: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಇತ್ತೀಚಿಗೆ ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಅನ್ನುವ ರೀತಿ ಫೋಟೋ ವೈರಲ್ ಮಾಡಲಾಗುತ್ತಿದೆ.
Fact: ಆದರೆ ಈ ಫೋಟೋ 2006ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು.
Fact Check By News Meter