Mangaluru News: ಬಂಟ್ವಾಳ ತಾಲೂಕಿನ ಫರಂಗೀಪೇಟೆಯ ಕಿದೆಬೆಟ್ಟು ನಿವಾಸಿ ದಿಗಂತ್ ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ. ಪೊಲೀಸರ ತನಿಖೆಯಿಂದಾಗಿ, ಇಂದು ಪತ್ತೆಯಾಗಿದ್ದಾನೆ. ಉಡುಪಿಯಲ್ಲಿ ದಿಗಂತ್ ಪತ್ತೆಯಾಗಿದ್ದು, ಪೊಲೀಸರು ಈತನನ್ನು ಅವನ ಪೋಷಕರಿಗೆ ಒಪ್ಪಿಸಿದ್ದಾರೆ. ಈತ ಪತ್ತೆಯಾದ ಬಳಿಕ, ಈತನ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದು, ಈ ಮಾಹಿತಿ ಕೇಳಿ ಸ್ವತಃ ಅವನ ಮನೆ ಮಂದಿ ದಂಗಾಗಿದ್ದಾರೆ.
ದಿಗಂತ್ ಸ್ನೇಹಿತ ಹೇಳಿದ ಪ್ರಕಾರ, ದಿಗಂತ್ ಮಂಗಳಮುಖಿಯೊಂದಿಗೆ ಹೋಗಿದ್ದ ಎನ್ನಲಾಗಿದೆ. ಫರಂಗೀಪೇಟೆಯಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿಲ್ಲ. ಹಾಗಾಗಿ ಪೊಲೀಸರಿಗೆ ದಿಗಂತ್ ಪತ್ತೆ ಹಚ್ಚಲು ಇಷ್ಟು ಸಮಯ ಬೇಕಾಗಿದೆ. ಶ್ವಾನ ದಳದ ಬಳಕೆ ಮಾಡಿದರೂ, 12 ದಿನಗಳ ಬಳಿಕ ದಿಗಂತ್ ಎಲ್ಲಿದ್ದಾನೆಂದು ಗೊತ್ತಾಗಿದೆ. ಆದರೆ ಆತ ಮಂಗಳಮುಖಿಯೊಂದಿಗೆ ಹೋಗಿದ್ದನೆಂದು ಹೇಳಲಾಗುತ್ತಿದೆ. ಇದೆಷ್ಟು ಸತ್ಯ ಎಂಬುದು ಪೊಲೀಸರ ತನಿಖೆ ಬಳಿಕ ಗೊತ್ತಾಗಿದೆ.
100 ಹೆಚ್ಚು ಪೊಲೀಸರು, ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸತತ 12 ದಿನದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಡ್ರೋಣ್ ಮೂಲಕವೂ ದಿಗಂತ್ ಪತ್ತೆಗೆ ಕಾರ್ಯಾಚರಣೆ ನಡೆದಿತ್ತು. ಅಲ್ಲದೇ, ನೇತ್ರಾವತಿ ನದಿ ಸುತ್ತ ಮುತ್ತಲೂ ಕಾರ್ಯಾಚರಣೆ ನಡೆಸಿ, ದೋಣಿ ಬಳಸಿ, ನದಿಯಲ್ಲೂ ದಿಗಂತ್‌ನನ್ನು ಹುಡುಕಲಾಗಿತ್ತು. ದಿಗಂತ್ ಪತ್ತೆಯಾದ ಬಳಿಕ ವಿಚಾರಣೆ ನಡೆಸಿದಾಗ, ದಿಗಂತ್ ಎರಡೆರಡು ಫೋನ್ ಬಳಸುತ್ತಿದ್ದ. ಚಾಟಿಂಗ್‌ನಲ್ಲಿ ಬ್ಯುಸಿ ಇರುತ್ತಿದ್ದ. ರಾತ್ರಿ ಹೊತ್ತು ಗೇಮ್ ಆಡುತ್ತಿದ್ದ. ಆತನ ನಡೆ ನಿಗೂಢವಾಗಿತ್ತು ಎಂದು ಮನೆ ಮಂದಿಗೆ ಇದೀಗ ಗೊತ್ತಾಗಿದೆ.