Wednesday, March 12, 2025

Latest Posts

ಖಾಲಿಯಾಯ್ತಾ ಕಾಂಗ್ರೆಸ್ ಖಜಾನೆ..? ಗ್ಯಾರಂಟಿ ಯೋಜನೆ ಮುನ್ನಡೆಸಲು ಹಣವಿಲ್ಲ ಎಂದರು ಸಿಎಂ

- Advertisement -

Political News: ಆಯಾ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಭರ್ಜರಿ ಪ್ರಚಾರ ಮಾಡಿ, ಗೆಲುವು ಸಾಧಿಸಿದ್ದ ಕಾಂಗ್ರೆಸ್‌ಗೆ ಇದೀಗ ಗ್ಯಾರಂಟಿ ಪೂರೈಸಲು ಹಣವೇ ಸಾಕಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ತಕ್ಕಂತೆ, ತೆಲಂಗಾಣ ಸಿಎಂ ರೇವಂತ ರೆಡ್ಡಿ, ಗ್ಯಾರಂಟಿ ಯೋಜನೆ ಮುಂದುವರಿಸಲು ಹಣವೇ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಕರ್ನಾಟಕ, ತೆಲಂಗಾಣದಂತೆ ಕಾಂಗ್ರೆಸ್ ಆಡಳಿತವಿರುವ ಮತ್ತೊಂದು ಕ್ಷೇತ್ರವೆಂದರೆ, ಹಿಮಾಚಲ ಪ್ರದೇಶ. ಇಲ್ಲಿಯೂ ಗ್ಯಾರಂಟಿ ಯೋಜನೆ ಮುಂದುವರಿಸಲು ಇರುವ ಹಣವನ್ನೆಲ್ಲ ಖರ್ಚು ಮಾಡಿ, ಇದೀಗ ಖಜಾನೆ ಬರಿದಾಗಿದೆ. ಅದೇ ರೀತಿ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆ ಮುಂದುವರಿಸಲು, ಹಣ ಹೊಂದಿಸಲು ತೆಲಂಗಾಣ ಸರ್ಕಾರ ಪರದಾಡುತ್ತಿದೆ ಎಂದು ಸ್ವತಃ ಇಲ್ಲಿನ ಸಿಎಂ ರೇವಂತ್ ರೆಡ್ಡಿ ಅವರೇ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರೇವಂತ್, ಪ್ರತೀ ತಿಂಗಳು ತೆಲಂಗಾಣ ಸರ್ಕಾರಕ್ಕೆ 18,000 ಕೋಟಿ ಆದಾಯ ಬರುತ್ತದೆ. ಈ ಪೈಕಿ 6,500 ಕೋಟಿ ರೂಪಾಯಿ ಸರ್ಕಾರಿ ವೇತನ ಹಾಗೂ ಮಾಜಿ ನೌಕರರ ಪಿಂಚಣಿಗಾಗಿ ವೆಚ್ಚ ಮಾಡಲಾಗುತ್ತದೆ. ಇನ್ನುಳಿದ 6,500 ಕೋಟಿ ರೂಪಾಯಿ ಮೊತ್ತವನ್ನು ಸಾಲ ಮತ್ತು ಬಡ್ಡಿ ಪಾವತಿ ಮಾಡಲು ಬಳಕೆ ಮಾಡಲಾಗುತ್ತದೆ. ಹೀಗಾಗಿ ಒಟ್ಟಾಗಿ 13 ಸಾವಿರ ಕೋಟಿ ರೂಪಾಯಿ ಪ್ರತೀ ತಿಂಗಳ ಹತ್ತನೇ ತಾರೀಖಿನೊಳಗೆ ಹೊಂದಾಣಿಕೆ ಮಾಡಬೇಕಾಗಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ವೇತನ ಪಾವತಿ, ಬಡ್ಡಿ, ಸಾಲ ಪಾವತಿ ಬಳಿಕ ರಾಜ್ಯ ಸರ್ಕಾರದ ಬಳಿ ವಿವಿಧ ಯೋಜನೆಗಾಗಿ ಖರ್ಚು ಮಾಡಲು ಬರೀ  5ಸಾವಿರ ಕೋಟಿ ರೂಪಾಯಿ ಅಷ್ಟೇ ಉಳಿದಿರುತ್ತದೆ. ಹೀಗಾಗಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ನೀಡಲು ದುಡ್ಡೇ ಇಲ್ಲ ಎಂದು ರೇವಂತ್ ರೆಡ್ಡಿ ನೇರವಾಗಿಯೇ ಹೇಳಿದ್ದಾರೆ.

ಇನ್ನು 2023ರಲ್ಲಿ ಅಧಿಕಾರ ವಹಿಸಿಕೊಂಡು ಸಿಎಂ ಆದ ಬಳಿಕ, ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮನವರಿಕೆಯಾಗಿದೆ. ಹಲವು ರೀತಿಯ ಕಲ್ಯಾಣ ಕಾರ್ಯಕ್ರಮಗಳು ಯಾವ ರೀತಿ ಜಾರಿಯಾಗಬೇಕು ಎಂಬ ಬಗ್ಗೆ ದೇಶಾದ್ಯಂತ ಚರ್ಚೆಯಾಗಬೇಕು ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ಕ್ಷೇತ್ರ ಪುನರ್ವಿಂಗಡಣೆ ಬಗ್ಗೆಯಾಗಲಿ, ಗ್ಯಾರಂಟಿ ಯೋಜನೆ ನಿಲ್ಲಿಸುವುದರ ಬಗ್ಗೆ ಚರ್ಚೆ ಮಾಡುವುದಲ್ಲ, ಬದಲಾಗಿ, ಇಂಥ ಯೋಜನೆಗಳನ್ನು ಹೇಗೆ ನಾವು ಜನರಿಗೆ ತಲುಪಿಸಬೇಕು ಎಂಬ ಬಗ್ಗೆ ಚರ್ಚೆಯಾಗಬೇಕು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.

- Advertisement -

Latest Posts

Don't Miss