International News: ಕಳೆದ ಕೆಲ ದಿನಗಳ ಹಿಂದಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಅಲ್ದೆ ಈ ವಿಚಾರ ಇಡೀ ಜಗತ್ತೇ ಬೆಚ್ಚಿಬೀಳುವಂತೆ ಮಾಡಿತ್ತು.
ಮಾತುಕತೆಗೆಂದು ದೂರದಿಂದ ಬಂದಿದ್ದ ಝಲೆನ್ಸ್ಕಿಯನ್ನ ಟ್ರಂಪ್ ಬೈದು ಹೊರಹಾಕಿದ್ದರು. ಇನ್ನೂ ವಿಶ್ವದ ಮಾಧ್ಯಮಗಳೆದುರೇ ಅವಮಾನಿಸೋದು ನಿಮಗೆ ಗೌರವ ತರೋದಿಲ್ಲ ಅಂತ ಉಕ್ರೇನ್ ಅಧ್ಯಕ್ಷ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಪ್ರತಿಯಾಗಿ 3ನೇ ಮಹಾಯುದ್ದಕ್ಕೆ ನೀವೇ ಕಾರಣರಾಗ್ತೀರಿ ಅಂತ ಟ್ರಂಪ್ ದಾಳಿ ಪೀಡಿತ ರಾಷ್ಟ್ರದ ಅಧ್ಯಕ್ಷನ ವಿರುದ್ಧ ಕೆಂಡಕಾರಿದ್ರು..
ಇದೆಲ್ಲ ಟ್ರಂಪ್ ಹಾಗೂ ಝೆಲೆನ್ಸ್ಕಿ ನಡುವಿನ ಗಲಾಟೆಯ ಒಂದು ಭಾಗವಾದ್ರೆ…. ಮುಂದುವರೆದು ಇದೀಗ ಮಹತ್ವದ ಬೆಳವಣಿಗೆಯೊಂದ್ರಲ್ಲಿ ಝೆಲೆನ್ಸ್ಕಿ ಮತ್ತೆ ಅಮೆರಿಕ ಕೊಂಡಾಡಿದ್ದಾರೆ, ಟ್ರಂಪ್ ಅವರಿಗೂ ಸಹ ಉಕ್ರೇನ್ ಅಧ್ಯಕ್ಷ ಉಘೇ ಉಘೇ ಅಂದಿದ್ದಾರೆ. ಇದರಿಂದ ತನಗೇನೋ ಒಂದು ದೊಡ್ಡ ಅವಾರ್ಡ್ ಬಂದೋರ ಹಾಗೆ ಅಮೆರಿಕ ನಡೆದುಕೊಳ್ತಿದೆ. ಅಷ್ಟಕ್ಕೂ ಅಮೆರಿಕಕ್ಕೆ ಝೆಲೆನ್ಸ್ಕಿ ಕಳುಹಿಸಿರುವ ಪತ್ರದಲ್ಲಿ ಏನಿದೆ..? ಅಮೆರಿಕದ ಉಕ್ರೇನ್ ಸ್ವಾಧೀನ ನೀತಿಗೆ ವರವಾಗುತ್ತಾ ಝೆಲೆನ್ಸ್ಕಿ ನಡೆ..? ಕಿತ್ತಾಟದ ಬಳಿಕ ಏನಿದು ಅಮೆರಿಕದ ಹೊಸ ದೋಸ್ತಿ ಡ್ರಾಮಾ..? ಈ ಎಲ್ಲ ವಿಚಾರಗಳ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲು ಈ ವಿಡಿಯೋವನ್ನ ಕೊನೆಯವರೆಗೂ ತಪ್ಪದೇ ವೀಕ್ಷಿಸಿ..
ಎಸ್.. ಅಮೆರಿಕದಲ್ಲಿ ಇತ್ತೀಚಿಗಷ್ಟೇ ಟ್ರಂಪ್ ಭೇಟಿಯ ವೇಳೆ ನಡೆದ ಗಲಾಟೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ಇದೀಗ ಅಮೆರಿಕಕ್ಕೆ ಸ್ವಾರಿ ಕೇಳಿದ್ದಾರೆ. ಈ ಕುರಿತು ಬರೆದ ಪತ್ರದಲ್ಲಿ ಟ್ರಂಪ್ ಹೆಸರು ಉಲ್ಲೇಖಿಸಿರುವ ಝೆಲೆನ್ಸ್ಕಿ, ಓವಲ್ ಕಚೇರಿಯಲ್ಲಿ ನಡೆದಿದ್ದ ಘಟನೆಗೆ ನಾನು ಟ್ರಂಪ್ ಅವರ ಕ್ಷಮೆಯಾಚಿಸುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ವಿಚಾರವನ್ನ ಖುದ್ದು ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಬಾರಿ ಸ್ಟೀವ್ ವಿಟ್ಕಾಫ್ ಅವರು ಬಹಿರಂಗಗೊಳಿಸಿದ್ದಾರೆ.
ಅಂದಹಾಗೆ ಝೆಲೆನ್ಸ್ಕಿ ಅವರು ತಮ್ಮ ದೇಶದ ಒಳಿತಿಗಾಗಿ ಇಟ್ಟಿರುವ ಒಂದು ಮುಖ್ಯವಾದ ಹೆಜ್ಜೆ ಇದಾಗಿದೆ ಅಂತ ನಾನು ಭಾವಿಸಿಕೊಳ್ಳುತ್ತೇನೆ. ಈಗಾಗಲೇ ನಮ್ಮ ತಂಡಗಳು ಉಕ್ರೇನಿಯರು ಹಾಗೂ ಯುರೋಪಿಯನ್ನರ ನಡುವೆ ಹಲವು ಚರ್ಚೆಗಳನ್ನ ನಡೆಸಿವೆ. ಅಲ್ದೆ ಬಹಿರಂಗವಾಗಗಿ ಮಾಧ್ಯಮಗಳ ಎದುರೇ ಕಿತ್ತಾಡಿಕೊಂಡ ಬಳಿಕ ಪತ್ರದ ಮೂಲಕ ಕ್ಷಮೆಯಾಚಿಸುತ್ತೀರೋ ಉಕ್ರೇನ್ ಅಧ್ಯಕ್ಷರ ನಡೆಯು, ಬದಲಾವಣೆಯನ್ನ ಸೂಚಿಸುತ್ತೆ ಅನ್ನೋ ಮಾತುಗಳನ್ನ ಹೇಳೋ ಮೂಲಕ ಝೆಲೆನ್ಸ್ಕಿ ನಡೆಯನ್ನ ಅವರು ಸ್ವಾಗತಿಸಿದ್ದಾರೆ.
ಅಲ್ದೆ ತನ್ನೊಂದಿಗೆ ಗಲಾಟೆ ಮಾಡಿಕೊಂಡು, ಬೈದು ಹೊರಹಾಕಲ್ಪಟ್ಟಿದ್ದ ಝೆಲೆನ್ಸ್ಕಿಯ ಕ್ಷಮಾಪಣಾ ಪತ್ರಕ್ಕೆ ಟ್ರಂಪ್ ಫುಲ್ ಖುಷ್ ಆಗಿದ್ದಾರೆ. ಇನ್ನೂ ಉಕ್ರೇನ್ ಅಧ್ಯಕ್ಷನ ಕ್ಷಮೆಯ ಬಗ್ಗೆಯೂ ಸ್ವತಃ ಟ್ರಂಪ್ ಸಭೆಯೊಂದರಲ್ಲಿ ತಮ್ಮ ಭಾಷಣವನ್ನ ಮಾಡುವ ವೇಳೆ ಹಂಚಿಕೊಂಡಿದ್ದಾರೆ. ಇನ್ನೂ ಯಾರನ್ನ ಯಾವ ರೀತಿ ಆಟ ಆಡಿಸಬೇಕು ಅನ್ನೋದನ್ನ ಚೆನ್ನಾಗಿ ಕಲಿತಿರುವ ಈ ಟ್ರಂಪ್, ಉಕ್ರೇನ್ ವಿಚಾರದಲ್ಲಿಯೂ ಸಹ ತನ್ನದೇ ವಸಾಹತು ಶಾಹಿ ಮನಸ್ಥಿತಿಯನ್ನ ತೋರಿಸಿದ್ದರು. ಅಲ್ದೆ ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ, ಅಮೆರಿಕಕ್ಕೆ ಭೇಟಿ ನೀಡಿದ್ದ ಝೆಲೆನ್ಸ್ಕಿಗೆ ಈ ಡೊನಾಲ್ಡ್ ಟ್ರಂಪ್ ತನ್ನ ರಾಷ್ಟ್ರದ ವಿಚಾರದಲ್ಲಿ ಖನಿಜಗಳಿಗೆ ಕುರಿತಂತೆ ಒಪ್ಪಂದಕ್ಕೆ ಸಹಿ ಹಾಕಬೇಕಂತ ಒತ್ತಡ ಹೇರಿದ್ದರು. ಆದರೆ ಇದೇ ವಿಚಾರವು ಇಬ್ಬರ ನಡುವೆ ವಿವಾದದ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿತ್ತು.
ಆದ್ರೆ ಬಳಿಕ ಚಾಲಾಕಿ ಟ್ರಂಪ್ ಉಕ್ರೇನ್‌ಗೆ ಮಿಲಿಟರಿ ಸಹಾಯವನ್ನ ನಿಲ್ಲಿಸಿಬಿಡುವ ಮೂಲಕ ಝೆಲೆನ್ಸ್ಕಿಯನ್ನ ತನ್ನ ತೆಕ್ಕೆಗೆ ಪಡೆದುಕೊಳ್ಳಲು ಮುಂದಾಗ್ತಾರೆ. ಅಂದ್ರೆ ನಾವು ಸಾಮಾನ್ಯವಾಗಿ ಹೇಳ್ತೀವಲ್ಲಾ ಮೂಗು ಹಿಡಿದ್ರೆ ಬಾಯಿ ಬಿಡ್ತಾರಂತ.. ಎಸ್ ರೀಯಲ್ಲಿ ದ್ಯಾಟ್ಸ್ ರೈಟ್.. ಉಕ್ರೇನ್‌ಗೆ ನಮ್ಮ ನೆರವನ್ನ ಸ್ಟಾಪ್ ಮಾಡಿದ್ರೆ ವಿಧಿಯಿಲ್ಲದೆ ಮತ್ತೆ ಆ ದೇಶ ಸಹಾಯಕ್ಕಾಗಿ ನಮ್ಮನ್ನ ಅಂಗಲಾಚಿಕೊಳ್ಳುತ್ತೆ ಅಂತ ಲೆಕ್ಕಾಚಾರ ಹಾಕಿ ಈ ಟ್ರಂಪ್ ಉಕ್ರೇನ್‌ನ ವಿಚಾರದಲ್ಲಿ ಅಂದುಕೊಂಡಂತೆ ಎಲ್ಲ ಹಠವನ್ನ ಸಾಧಿಸುವ ಮೂಲಕ ಉಕ್ರೇನ್ ಕ್ಷಮೆ ಕೇಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಎಲ್ಲಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದ್ರೆ.. ನಮ್ಮ ನೆರವನ್ನ ಸ್ಥಗಿತಗೊಳಿಸಿದ ಬಳಿಕ ಬಂದ ಈ ಪತ್ರದ ಕುರಿತು ಪ್ರಶಂಸೆ ವ್ಯಕ್ತಪಡಿಸುವೆ ಅಂತ ಟ್ರಂಪ್ ಕೊಚ್ಚಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉಕ್ರೇನ್ ಮೇಲೆ ಅಮೆರಿಕ ಸವಾರಿ ಮಾಡುವ ಮುನ್ಸೂಚನೆ ನೀಡಿದ್ದಾರೆ.
ಕ್ಷಮೆ ಯಾಚಿಸಲು ನಿರಾಕರಿಸಿದ್ದ ಝೆಲೆನ್ಸ್ಕಿ..
ಹೌದು.. ಅಮೆರಿಕದಲ್ಲಿ ಈ ಹಿಂದೆ ನಡೆದಿದ್ದ ಡೊನಾಲ್ಡ್ ಟ್ರಂಪ್ ನಡುವಿನ ಜಟಾಪಟಿಯ ಬಳಿಕ ನಿಗಿ ನಿಗಿ ಕೆಂಡವಾಗಿದ್ದ ಝೆಲೆನ್ಸ್ಕಿ, ಈ ಘಟನೆಯ ಬಗ್ಗೆ ಟ್ರಂಪ್ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ದರು. ಇದಾದ ಕೆಲ ಸಮಯದ ಬಳಿಕ ಪ್ರತಿಕ್ರಿಯಿಸಿದ್ದ ಉಕೇನ್ ಅಧ್ಯಕ್ಷ, ಇದೊಂದು ವಿಷಾದನೀಯ ಮಾತಕತೆಯಾಗಿತ್ತು ಅಂತಷ್ಟೆ ಹೇಳಿದ್ದರು. ಆದ್ರೆ ಆಗ ಯಾವುದೇ ಕಾರಣಕ್ಕೂ ಅವರು ಕ್ಷಮೆ ಕೇಳಲು ಮುಂದಾಗಿರಲಿಲ್ಲ ಅನ್ನೋದು ಗಮನಾರ್ಹ. ಆದರೆ ಯಾವಾಗ ಟ್ರಂಪ್ ಮಿಲಿಟರಿ ನೆರವನ್ನ ನಿಲ್ಲಿಸುತ್ತಾರೋ ಆಗಲೇ ತನ್ನ ದೇಶಕ್ಕಾಗಿ, ತನ್ನ ನಂಬಿರುವ ಜನಕ್ಕಾಗಿ ಯಾವುದೇ ಅಳುಕಿಲ್ದೆ ಝೆಲೆನ್ಸ್ಕಿ ಇದೀಗ ಕ್ಷಮೆಯಾಚಿಸಿದ್ದಾರೆ. ಅದರೆ ಉಕ್ರೇನ್‌ನ ವಿಷಮಕಾರಿ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಅಮೆರಿಕ ಈಗ ತನಗೆ ಬೇಕಾದ ಸಂಪತ್ತನ್ನ ಕೊಳ್ಳೆಹೊಡೆಯಲು ಬಾಗಿಲೇ ತೆರೆದಂತಾಗಿರುವುದು ಸುಳ್ಳಲ್ಲ.
ಟ್ರಂಪ್ ಭೇಟಿಯಲ್ಲಿ ನಿಜಕ್ಕೂ ಏನಾಗಿತ್ತು..?
ಎರಡನೇ ಬಾರಿಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿಯಾಗಿದ್ದರು. ಅಲ್ದೆ ಅಮೆರಿಕ ಹಾಗೂ ಉಕ್ರೇನ್ ನಡುವಿನ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿರುವ ವೇಳೆ ವೈಟ್ ಹೌಸ್‌ನಲ್ಲಿ ಈ ಇಬ್ಬರು ನಾಯಕರ ನಡುವೆ ಗಲಾಟೆ ನಡೆದಿತ್ತು. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್ ನಡುವೆ ಖನಿಜ ಒಪ್ಪಂದಗಳ ಕುರಿತು ಮಾತುಕತೆ ನಡೆದಿತ್ತು. ಈ ವೇಳೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ವಿರಾಮ ಹಾಗೂ ಭದ್ರತಾ ವಿಚಾರಗಳ ಮೇಲಿನ ಚರ್ಚೆಯೂ ಆಗಿತ್ತು.
ಇನ್ನೂ ಇದೇ ವಿಚಾರಕ್ಕೆ ಜಾಗತಿಕ ಮಟ್ಟದ ಮಾಧ್ಯಮಗಳೆದುರೆ ಉಭಯ ನಾಯಕರು ಪರಸ್ಪರ ಕಿತ್ತಾಡಿಕೊಂಡಿರುವುದ್ದಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿತ್ತು. ಅಂದಹಾಗೆ ಭದ್ರತಾ ವಿಚಾರಗಳ ಬಗ್ಗೆ ಮಾತನಾಡಲು ಉಕ್ರೇನ್ ಅಧ್ಯಕ್ಷ ಮುಂದಾದಾಗ ಟ್ರಂಪ್ ನಾನು ಇದರ ಕುರಿತು ಮಾತನಾಡುವುದಿಲ್ಲ, ಅದರೆ ಖನಿಜ ಒಪ್ಪಂದಗಳ ಬಗ್ಗೆ ಚರ್ಚೆ ಮಾಡಲು ಇಚ್ಚಿಸುತ್ತೇನೆ ಅಂತ ಹೇಳಿದ್ದರು. ಹೀಗೆ ಮುಂದುವರೆದಿದ್ದ ನಾಯಕರ ಕಿತ್ತಾಟವು ಉದ್ವಿಗ್ನತೆ ರೂಪ ಪಡೆದು ಕೊನೆಗೆ ಟ್ರಂಪ್ ಝಲೆನ್ಸ್ಕಿಗೆ ಶ್ವೇತ ಭವನದಿಂದ ಎದ್ದು ಹೋಗುವಂತೆ ಹೇಳುವ ಹಂತವನ್ನ ತಲುಪಿತ್ತು.
ಇನ್ನೂ ನೀವು ಲಕ್ಷಾಂತರ ಜನರ ಜೀವಗಳೊಂದಿಗೆ ಆಟವಾಡುತ್ತಿದ್ದೀರಿ, 3ನೇ ಮಹಾಯುದ್ಧದಂತೆ ಜೂಜಾಡುತ್ತಿದ್ದೀರಿ, ನಿಮ್ಮಿಂದಲೇ ಆ ಯುದ್ಧ ನಡೆಯಬಹುದು. ನೀವು ಹೀಗೆ ನಡೆದುಕೊಳ್ಳುತ್ತಿರುವುದು ಈ ದೇಶಕ್ಕೆ ತುಂಬಾ ಅಗೌರವವಾಗಿದೆ ಅಂತ ನೇರ ವಾಗ್ದಾಳಿಯನ್ನ ಟ್ರಂಪ್ ನಡೆಸಿದ್ದರು. ಅಲ್ದೆ ನೀವು ಧೈರ್ಯವಂತರಿರಬಹುದು, ಆದ್ರೂ ಖನಿಜ ಒಪ್ಪಂದಕ್ಕೆ ಸಹಿ ಹಾಕಲೇಬೇಕು. ಇಲ್ಲದಿದ್ದರೆ ನಾವು ನಿಮಗೆ ಸಹಾಯ ಮಾಡುವುದಿಲ್ಲ. ನಾವು ಸಹಾಯ ಮಾಡದಿದ್ದರೆ, ನೀವು ಯುದ್ಧ ಮುಂದುವರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ತೀರ ಸಂಕಷ್ಟ ಎದುರಿಸಬೇಕಾಗುತ್ತೆ ಅಂತ ಆ ವೇಳೆಯೇ ಟ್ರಂಪ್ ಝೆಲೆನ್ಸ್ಕಿಗೆ ಎಚ್ಚರಿಸಿದ್ದರು.
ಅದರ ಮುಂದುವರೆದ ಭಾಗವಾಗಿಯೇ ಅಮೆರಿಕ ಉಕ್ರೇನ್‌ಗೆ ನೀಡುತ್ತಿದ್ದ ತನ್ನ ಮಿಲಿಟರಿ ನೆರವನ್ನ ಸ್ಥಗಿತಗೊಳಿಸುವ ಮೂಲಕ ತನ್ನ ದಮನಕಾರಿ ನೀತಿಯನ್ನ ತೋರ್ಪಡಿಸಲು ಮುಂದಾಗಿತ್ತು. ಆದ್ರೆ ಫೈನಲ್ಲಿ ಅಂದಕೊಂಡಂತೆ ಉಕ್ರೇನ್ ತನ್ನತ್ತ ವಾಲುವಂತೆ ಮಾಡುವಲ್ಲಿ ಟ್ರಂಪ್ ಸಕ್ಸಸ್ ಕಂಡಿದ್ದಾರೆ.
ಒಟ್ನಲ್ಲಿ.. ಜಾಗತಿಕವಾಗಿ ನಾನೊಬ್ಬನೇ ಬಾಸ್ ಆಗಿರಬೇಕು ಉಳಿದವರೆಲ್ಲ ನನ್ನ ಸೇವಕರಾಗಿರಬೇಕೆಂಬ ನಿಲುವಿನ ಅಮೆರಿಕ, ಅದರಲ್ಲೂ ಈ ಟ್ರಂಪ್ ಮಾತ್ರ ಹೇಳಿ ಕೇಳಿ ನಂಬಿಸಿ ಬಲಿಕಾ ಬಕ್ರಾ ಮಾಡೋದ್ರಲ್ಲಿ ಎತ್ತಿದ ಕೈ. ಇಂತಹ ನಾಯಕನಿಗೆ ಉಕ್ರೇನ್ ಶರಣಾಗಿದ್ದು, ಇದರಿಂದ ಸದ್ಯ ದೇಶವನ್ನ ಯುದ್ಧದಿಂದ ಪಾರುಮಾಡಲು ಹೋರಾಡುತ್ತಿರುವ ಝೆಲೆನ್ಸ್ಕಿಗೆ ಎಷ್ಟು ಲಾಭವಾಗುತ್ತೆ ಅನ್ನೋದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆಯಾಗಿದೆ. ಅದೇನೆ ಇರಲಿ..ಕಿತ್ತಾಡಿ ಕೆಡಿಸಿಕೊಂಡಿದ್ದ ಟ್ರಂಪ್, ಕುತಂತ್ರದಿಂದ ಒಲಿಸಿಕೊಳ್ಳಲು ಮುಂದಾಗಿದ್ದು ಮಾತ್ರ ನಿಜಕ್ಕೂ ಶಾಕಿಂಗ್ ವಿಚಾರ!..