Mysuru News: ಅನೈತಿಕ ಸಂಬಂಧಕ್ಕೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೈಸೂರಿನ ಸೂರ್ಯ ಎಂಬಾತನು ಇನ್ಸ್ಟಾಗ್ರಾಮ್‌ನಲ್ಲಿ ಶ್ವೇತಾ ಎಂಬುವ ಯುವತಿಯನ್ನು ಪರಿಚಯ ಮಾಡಿಕೊಂಡು ಅವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದನ್ನು ಪ್ರಶ್ನಿಸಿದ್ದ ಅತನ ಹೆಂಡತಿ ಹಾಗೂ ತಾಯಿಯೊಂದಿಗೆ ನಿರಂತರ ಗಲಾಟೆ ಮಾಡುತ್ತಿದ್ದ. ಅಲ್ಲದೆ ಸೂರ್ಯನ ಈ ಅನೈತಿಕ ಸಂಬಂಧಕ್ಕೆ ಅವರಿಬ್ಬರು ಬೇರೆ ಮನೆ ಮಾಡಿ ವಾಸವಾಗಿದ್ದರು. ಇನ್ನೂ ಕಳೆದ ರಾತ್ರಿ ಸೂರ್ಯ ಹಾಗೂ ಶ್ವೇತಾ ಇಬ್ಬರು ಅನುಗನಹಳ್ಳಿಯ ತೋಟದಲ್ಲಿ ಜೊತೆಯಾಗಿದ್ದರು. ಅಲ್ಲದೆ ಇಬ್ಬರು ಜೊತೆಗಿರುವುದನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಸ್ಟೇಟಸ್ ಹಾಕಿಕೊಂಡಿದ್ದ. ಆದರೆ ಹೀಗೆ ಪ್ರೇಯಸಿಯ ಜೊತೆಗಿದ್ದ ಸೂರ್ಯ ಬೆಳಿಗ್ಗೆ ಎದ್ದು ನೋಡಿದ ತಕ್ಷಣ ಹೆಣವಾಗಿ ಬಿಟ್ಟಿದ್ದಾನೆ.
ಸೂರ್ಯನ ತಲೆಗೆ ಬಲವಾಗಿ ಪೆಟ್ಟು ಬೀಳುವಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇನ್ನೂ ತನ್ನ ಗಂಡನ ಕೊಲೆಗೆ ಶ್ವೇತಾಳೆ ಕಾರಣವಾಗಿದ್ದಾಳೆ ಎಂದು ಮೃತ ಸೂರ್ಯನ ಪತ್ನಿ ದೀಪಿಕಾ ಆರೋಪಿಸಿದ್ದಾಳೆ. ಅಲ್ಲದೆ ಸೂರ್ಯ ತನ್ನ ಎಲ್ಲಾ ಆಸ್ತಿಯನ್ನು ಶ್ವೇತಾಳ ಹೆಸರಿಗೆ ಮಾಡುವಂತೆ ತಾಯಿಗೆ ಸೂರ್ಯ ನಿರಂತರವಾಗಿ ಪೀಡಿಸುತ್ತಿದ್ದ ಎಂದು ದೀಪಿಕಾ ಹೇಳಿದ್ದಾಳೆ.
ಒಟ್ನಲ್ಲಿ.. ಅನೈತಿಕ ಸಂಬಂಧದ ಬಲೆಗೆ ಬಿದ್ದು ಪ್ರೇಯಸಿಯ ಜೊತೆ ಕಾಲ ಕಳೆಯಲು ಹೋಗಿ ಬರ್ಬರವಾಗಿ ಹತ್ಯೆಯಾಗಿರುವ ಸೂರ್ಯನ ಸಾವಿಗೆ ನಿಜವಾದ ಕಾರಣ ಏನು..? ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಬಯಲಾಗಬೇಕಿದೆ. ಅದೇನೆ ಇರಲಿ.. ಹೆಂಡತಿ ಹಾಗೂ ತಾಯಿಯ ಜೊತೆ ಸುಂದರ ಬದುಕು ಸಾಗಿಸಬೇಕಿದ್ದ ಸೂರ್ಯನ ದುರಂತ ಅಂತ್ಯಕ್ಕೆ ಹೆಣ್ಣಿನ ಮೇಲಿನ ಅತಿಯಾದ ವ್ಯಾಮೋಹವೇ ಕಾರಣವಾಗಿರುವುದು ಮಾತ್ರ ಸುಳ್ಳಲ್ಲ..