Friday, April 25, 2025

Latest Posts

ಹಣಕ್ಕಾಗಿ ಸಿನಿಮಾ ಡಬ್‌ ಮಾಡ್ತೀರಾ, ಈಗ ಹಿಂದಿ ವಿರೋಧಿಸ್ತಿದ್ದೀರಿ : ಸ್ಟಾಲಿನ್‌ಗೆ ಪವನ್‌ ಕಲ್ಯಾಣ್‌ ಟಾಂಗ್

- Advertisement -

Political News: ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ ಕಿಡಿ ಕಾರಿದ್ದಾರೆ. ಈ ಕುರಿತು ಕಾಕಿನಾಡಿನ ಪೀಠಾಪುರಂನಲ್ಲಿ ನಡೆದ ಜನಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೆಲ ಜನರು ಹಿಂದಿ ಹಾಗೂ ಸಂಸ್ಕೃತಗಳನ್ನು ಯಾಕೆ ವಿರೋಧಿಸುತ್ತಾರೆ ಗೊತ್ತಿಲ್ಲ. ಈ ತಮಿಳುನಾಡಿನ ನಾಯಕರು ತಮ್ಮ ಸಿನಿಮಾ ಡಬ್‌ ಮಾಡಿ ಹಣ ಗಳಿಸಲು ಹಿಂದಿ ಭಾಷೆ ಬೇಕು ಎನ್ನುತ್ತಾರೆ. ಇದರಿಂದ ಲಾಭ ಪಡೆಯುವ ಈ ಜನರು ಹಿಂದಿಯನ್ನು ವಿರೋಧಿಸುತ್ತಿರುವುದು ಯಾಕೆ? ಅಲ್ಲದೆ ಇವರೆಲ್ಲ ಬಾಲಿವುಡ್‌ನಿಂದ ದುಡ್ಡು ಮಾಡಲು ಬಯಸುತ್ತಾರೆ ಎಂದು‌ ಪವನ್ ಟಾಂಗ್‌ ನೀಡಿದ್ದಾರೆ.

ಆರ್ಥಿಕವಾಗಿ ಗಟ್ಟಿಯಾಗಿ ಬೆಳೆದ ಇವರು ಈಗ ಹಿಂದಿಯನ್ನು ತಿರಸ್ಕರಿಸುತ್ತಿದ್ದಾರೆ, ಇದು ಯಾವ ನ್ಯಾಯ? ಎಂದು ಪ್ರಶ್ನಿಸುವ ಮೂಲಕ ತ್ರಿಭಾಷಾ ಸೂತ್ರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ನಾವು ಮುಖ್ಯವಾಗಿ ಭಾಷಾ ವೈವಿಧ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ಹೀಗಾಗಿ ಯಾವುದೋ ಎರಡು ಭಾಷೆಗಳಿಗೆ ಸೀಮಿತವಾದ್ರೆ ಸಾಕಾಗುವುದಿಲ್ಲ. ಅಲ್ಲದೆ ನಮ್ಮ ಜನರಲ್ಲಿ ಪ್ರೀತಿ ಹಾಗೂ ಏಕತೆಯ ಬೆಳವಣಿಗೆಗಾಗಿ ಬಹುಭಾಷಾ ನೀತಿಯ ಅಗತ್ಯವಿದೆ ಎಂದು ಪವನ್‌ ಕಲ್ಯಾಣ್‌ ಪ್ರತಿಪಾದಿಸಿದ್ದಾರೆ.

ಇನ್ನೂ ಇಸ್ಲಾಂ, ಕ್ರೈಸ್ತರಿಗೆ ಅಪವಿತ್ರ ಆದರೆ ಅದು ಸೆಕ್ಯೂಲರಿಸಂ, ಆದ್ರೆ ಅದೇ ಹಿಂದೂಗಳ ಪಾರ್ವತಿ, ಶಿವ, ರಾಮ, ಅಯ್ಯಪ್ಪ ದೇವರಗಳ ಬಗ್ಗೆ ಅಪವಿತ್ರವಾಗಿ ಮಾತಾಡಿದ್ರೆ ನಮಗೆ ಎಷ್ಟು ನೋವಾಗಬಾರದು? ನಮ್ಮ ಭಾವನೆಗಳಿಗೆ ಧಕ್ಕೆ ತರಬೇಡಿ ಬಾಯಿ ಮುಚ್ಚುಕೊಂಡು ಕುಳಿತುಕೊಳ್ಳಬೇಕು ಎಂದು ಸ್ಟಾಲಿನ್‌ ವಿರುದ್ಧ ಗುಡುಗಿದ್ದಾರೆ. ಇನ್ನೂ ನಮ್ಮ ಕೆಲಸ ಮಾಡಲು ಬಿಹಾರ್, ಉತ್ತರ ಪ್ರದೇಶದ ಹಿಂದಿ ಜನರು ಬೇಕು. ಆದರೆ ಅದೇ ಹಿಂದಿಯನ್ನು ದ್ವೇಷ ಮಾಡುವುದು ಸರಿನಾ?. ಉತ್ತರ- ದಕ್ಷಿಣದ ಭಾಷೆಯ ಬಗ್ಗೆ ನನಗೆ ಒಂದೇ ತೃಪ್ತಿ ಇದೆ. ಅದೇನೆಂದರೆ ಹಿಮಾಲಯದಲ್ಲಿ ಶಿವನ ಕೈಲಾಸ ಇದೆ. ದಕ್ಷಿಣದಲ್ಲಿ ಶಿವನ ಮಗ ಮುರುಗನ್ ನಿವಾಸ ಇದೆ. ಹೀಗಿರುವಾಗ ದೇಶವನ್ನು ಒಡೆಯುವ ಧೈರ್ಯ, ಸಾಹಸ ಯಾರಿಗೂ ಇಲ್ಲ. ನೀವು ದೇಶ ವಿಭಜನೆ ಮಾಡಬೇಕು ಎನ್ನುವ ಆಲೋಚನೆಯನ್ನು ತೆಗೆದು ಹಾಕಿ. ಭಾಷೆ ಬೇರೆ, ಭಾವನೆ ಬೇರೆ. ನೀವು ಉತ್ತರದವರು ಬೆಳ್ಳಗೆ ಇರುತ್ತೀರಿ, ನಾವು ದಕ್ಷಿಣದವರು ಕಪ್ಪುಗೆ ಇರುತ್ತೀರಿ ಎನ್ನುವ ಭೇದ ಭಾವ ಇರಬಾರದು ಎಂದು ಡಿಸಿಎಂ ಪವನ್‌ ಕಲ್ಯಾಣ್‌ ಹೇಳಿದ್ದಾರೆ.

ಒಟ್ನಲ್ಲಿ.. ಕೇಂದ್ರ ಸರ್ಕಾರದ ವಿರುದ್ಧ ಹಿಂದಿ ಹೇರಿಕೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದಾರೆ. ಇವರ ನಿಲುವಿಗೆ ಅನೇಕ ನಟರು, ರಾಜಕಾರಣಿಗಳು ಬೆಂಬಲಿಸಿದ್ದಾರೆ. ಈ ಹೊತ್ತಲ್ಲೇ ನಟ, ರಾಜಕಾರಣಿ ಪವನ್‌ ಕಲ್ಯಾಣ್‌ ಬಹುಭಾಷಾ ಅಗತ್ಯತೆ ಬಗ್ಗೆ ಮಾತನಾಡಿರುವುದು ಸಂಚಲನಕ್ಕೆ ಕಾರಣವಾಗಿದ್ದು, ಮುಂದೆ ಇದು ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ..

- Advertisement -

Latest Posts

Don't Miss