Dharwad News: ಧಾರವಾಡ: ಧಾರವಾಡದಲ್ಲಿ ಭರ್ಜರಿ ಹೋಳಿ ಹಬ್ಬವನ್ನು ಆಚರಣೆ ಮಾಡಲಾಯಿತು. ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಶಿವಾಜಿ ಸರ್ಕಲ್‌ನಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಆಯೋಜನೆ ಮಾಡಿದ್ದರು.
ಇನ್ನು ಎಲ್ಐಸಿ ಸರ್ಕಲ್‌ನಲ್ಲಿ ಶಾಸಕ ಅರವಿಂದ ಬೆಲ್ಲದ್ ಹೋಳಿ ಹಬ್ಬವನ್ನು ಆಚರಣೆ ಮಾಡಿದರು. ಸಂಗಮ ಸರ್ಕಲ್ ನಲ್ಲಿ ಮಕ್ಕಳಗೇರಿ ಮಂಜು ಆಯೋಜನೆ ಮಾಡಿದ್ದು, ಜನರು ರಂಗಿನಾಟವನ್ನು ಎಂಜಾಯ್ ಮಾಡಿದ್ದಾರೆ.
ಇನ್ನು ಹೋಳಿ ಹಬ್ಬ ಆಚರಣೆಯಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರುಗಳು ಪ್ರತಿಷ್ಠೆ ತೋರಿಸಲು ಮುಂದಾಗಿದ್ದು, ನಾ ಮುಂದು ತಾ ಮುಂದು ಎಂದು ಹಬ್ಬದ ಆಚರಣೆ ನಡೆಸಿದ್ದು ವಿಶೇಷವಾಗಿತ್ತು. ಈ ಮೂರು ಸರ್ಕಲ್‌ನಲ್ಲಿ ಡಾನ್ಸ್, ರೇನ್ ಡಾನ್ಸ್ ಆಯೋಜನೆ ಮಾಡಲಾಗಿದ್ದು, ಧಾರವಾಡ ಜಿಲ್ಲೆಯಾದ್ಯಂತ ಜನರು ಹೋಳಿ ರಂಗಿನಲ್ಲಿ ಮಿಂದೆದಿದ್ದಾರೆ.




