Dharwad News: ಆ ವ್ಯಕ್ತಿ ಮೊದಲೇ ಬುದ್ದಿ ಮಾದ್ಯವನಾಗಿದ್ದ, ಹಾಗೇ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಅಲೇದಾಡುತ್ತಾ ಬೇಡಿ ತಿನ್ನುತ್ತಾ ರಸ್ತೆ ಬದಿ ಜೀವ ಸಾಗಿಸುತ್ತಿದ್ದ. ಆದರೆ ಅಪ್ರಾಪ್ತ ಯುವಕನೊಂದಿಗೆ ಕಿರಿಕ್ ಆಗಿದೆ, ಆ ಯುವಕ ಬುದ್ದಿ ಮಾಂದ್ಯ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಯುವಕನ ಅಟಹಾಸಕ್ಕೆ ಗಂಭೀರವಾಗಿ ಗಾಯಗೊಂಡ ಬುದ್ದಿ ಮಾಂದ್ಯ ಜೀವ ಈಗ ಚಿಕಿತ್ಸೆ ಫಲಿಸದೇ ಹಾರಿಹೋಗಿದೆ..
ಬುದ್ದಿ ಮಾಂದ್ಯ ವ್ಯಕ್ತಿ ಮತ್ತು ಅಪ್ರಾಪ್ತ ಯುವಕನ ನಡುವೆ ಕಿರಿಕ್, ಕಲ್ಲಿನಿಂದ ಹಲ್ಲೆ ಗಂಭೀರ ಗಾಯ
ಸ್ಥಳೀಯರಿಂದ ಬುದ್ದಿ ಮಾಂದ್ಯ ಜೀವ ಉಳಿಸಲು ಯತ್ನ, ಚಿಕಿತ್ಸೆ ಫಲಿಸದೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು
ಧಾರವಾಡ ಹಳೇ ಎಪಿಎಂಸಿಯಲ್ಲಿ ನಡೆದ ದುರ್ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ, ಅಪ್ರಾಪ್ತ ಯುವಕ ಪೊಲೀಸ್ ವಶಕ್ಕೆ.
16 ವರ್ಷದ ಅಪ್ರಾಪ್ತ ಯುವಕನೊಂದಿಗೆ ಕಿರಿಕ್ ಮಾಡಿಕೊಂಡು ಚಿರ ನಿದ್ರೆಗೆ ಜಾರಿದ ಬುದ್ದಿ ಮಾಂದ್ಯ ಜೀವ…. ಮಗದೊಂದು ಕಡೆ ಘಟನಾ ಸ್ಥಳಕ್ಕೆ ಇನ್ಸ್ಪೆಕ್ಟರನಿಂದ ಹಿಡಿದು ಕಮಿಷನರ್ ಮಟ್ಟದ ಅಧಿಕಾರಿಗಳ ಭೇಟಿ ಪರಿಶೀಲನೆ… ಬುದ್ದಿ ಮಾಂದ್ಯ ಜೀವ ಉಳಿಸಲು ಪ್ರಯತ್ನಿಸಿದ ಯುವಕರ ಮುಖದಲ್ಲಿ ನೀರವ ಮೌನ… ಎಸ್ ಈ ಎಲ್ಲ ದೃಶ್ಯಗಳಿಗೆ ಘುರುವಾರ ತಡ ಸಂಜೆ ಧಾರವಾಡ ಹಳೇ ಎಪಿಎಂಸಿ ಆವರಣ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆ ಆವರಣ ಸಾಕ್ಷಿಯಾಗಿತ್ತು.
ನಲವತೈದು ವರ್ಷದ ಇಲಿಯಾಸ್ ಜಲೀಲ್ ಸಾಬ್ ಮಕಾಂದರ್ ಬುದ್ದಿ ಮಾಂದ್ಯ ವ್ಯಕ್ತಿ, ಧಾರವಾಡ ಶಿವಾಜಿ ವೃತ ಸೇರಿ ಹಳೇ ಎಪಿಎಂಸಿ ಆವರಣದಲ್ಲಿ ಓಡಾಟ ಮಾಡುತ್ತಿದ್ದನಂತೆ. ಗುರುವಾರ ಎಪಿಎಂಸಿ ರಸ್ತೆಯಲ್ಲಿ ಓಡಾಟ ಮಾಡುವಾಗ 16 ವರ್ಷದ ಯುವಕನೊಂದಿಗೆ ಕಿರಿಕ್ ಆಗಿದ್ದು, ಈ ವೇಳೆ ಯುವಕ ಕೋಪದ ಕೈಗೆ ಬುದ್ದಿ ಕೊಟ್ಟು ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ.
ಇದರಿಂದ ತಲೆ ಭಾಗಕ್ಕೆ ಬುದ್ದಿ ಮಾಂದ್ಯ ವ್ಯಕ್ತಿಗೆ ತೀವ್ರವಾದ ಗಾಯವಾಗಿದೆ. ರಕ್ತ ಮಡುವಿನಲ್ಲಿ ಬಿದಿದ್ದ ವ್ಯಕ್ತಿಯನ್ನು ಸ್ಥಳೀಯರು ನೋಡಿ ಕೂಡಲೆ ರಕ್ಷಣೆಗೆ ಧಾವಿಸಿ, ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಿಸದೆ ಬುದ್ದಿ ಮಾಂದ್ಯ ಇಲಿಯಾಸ್ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ…
ಇನ್ನೂ ಘಟನೆ ಮಾಹಿತಿ ಸಿಗುತ್ತಿಂದಂತೆ ಧಾರವಾಡ ಉಪನಗರ ಠಾಣೆಯ ಸಿಪಿಐ ದಯಾನಂದ ಆ್ಯಂಡ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಘಟನೆ ನಗರ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಘಟನಾ ಸ್ಥಳಕ್ಕೆ ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರ, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ, ಡಿಸಿಪಿಗಳ ಸಹ ಭೇಟಿ ನೀಡಿ ಘಟನೆ ಮಾಹಿತಿ ತಿಳಿದುಕೊಂಡಿದ್ದಾರೆ.
ಆದರೆ ವಿಧಿಯಾಟ 16 ವರ್ಷದ ಅಪ್ರಾಪ್ತ ಯುವಕನ ಕೋಪಕ್ಕೆ ಇಲ್ಲಿ ಬುದ್ದಿ ಮಾಂದ್ಯ ಜೀವ ಬಲಿಯಾಗಿದೆ. ಇನ್ನೂ ಘಟನೆ ನಡೆದ ಕೂಡಲೇ ಅಲರ್ಟ್ ಆಗಿರೋ ಉಪನಗರ ಠಾಣೆಯ ಪೊಲೀಸರು ಹಲ್ಲೆ ನಡೆಸಿದ ಅಪ್ರಾಪ್ತನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಒಟ್ಟರೆಯಾಗಿ ವಿದ್ಯಾಕಾಶಿ ಎಂದು ಖ್ಯಾತಿ ಪಡೆದುಕೊಂಡಿರುವ ಧಾರವಾಡದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಇಲ್ಲಿ ಅಪ್ರಾಪ್ತ ಯುವಕನ ತಪ್ಪೋ ಒಪ್ಪೋ ಅನ್ನೊದಗಿಂತ ಇದು ವಿಧಿಯಾಟ ಎಂದು ಸ್ಥಳೀಯರು ಮಮಲ ಮರುಗುತ್ತಿದ್ದಾರೆ.ಇನ್ನೂ ಬುದ್ದಿ ಮಾಂದ್ಯ ವ್ಯಕ್ತಿಯ ಮೇಲೆ ಅಷ್ಟೊಂದು ಕೋಪದಿಂದ ಅಪ್ರಾಪ್ತ ಯುವಕ ಹಲ್ಲೆಗೆ ಕಾರಣ ಏನು ಎಂಬುವುದು ಪೊಲೀಸರ ತನಿಖೆಯ ಬಳಿಕವಷ್ಟೇ ಹೊರಬರಬೇಕಾಗಿದೆ. ಅದೇನೇ ಇರಲಿ ಆದರೆ ಇಲ್ಲಿ ಕೋಪದ ಕೈಗೆ ಯುವಕ ಬುದ್ದಿಕೊಟ್ಟ ಒಂದು ಜೀವ ಹೋಗಿರುವುದು ದುರದೃಷ್ಟಕರ.
ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಧಾರವಾಡ