Spiritual: ನಾವು ಪ್ರತೀ ವರ್ಷ ಸರಿಯಾದ ಸಮಯಕ್ಕೆ ನಮ್ಮ ಪಿತೃಗಳ ಶ್ರಾದ್ಧ ಮಾಡದಿದ್ದರೆ, ಅಥವಾ ಅವರ ಹೆಸರಿನಲ್ಲಿ ಕಾಗೆಗೆ, ದನಕ್ಕೆ ಒಂದು ಎಡೆ ಇಡದೇ ನಿರ್ಲಕ್ಷ್ಯ ಮಾಡಿದ್ದಲ್ಲಿ, ನಮ್ಮ ಜೀವನದಲ್ಲಿ ಹಲವು ಅಡೆತಡೆಗಳು ಸಂಭವಿಸುತ್ತದೆ. ಹಾಗಾಗಿಯೇ ಯಾವ ದಿನ ಶ್ರಾದ್ಧ ಬಂದಿದೆಯೋ, ಅಂದೇ ಶ್ರಾದ್ಧಕಾರ್ಯವನ್ನು ಮಾಡಿ ಮುಗಿಸಬೇಕು ಎನ್ನಲಾಗುತ್ತದೆ. ಅಲ್ಲದೇ, ಕೆಲವು ಮಾಡರ್ನ್ ಜನರು ಸಂಡೇ ರಜಾ ಇದ್ದಾಗ, ಹಿರಿಯರ ಶ್ರಾದ್ಧ ಕಾರ್ಯ ಮಾಡುತ್ತಾರೆ. ಇದು ತಪ್ಪು, ಯಾವ ದಿನದಂದು ಶ್ರಾದ್ಧ ಇರುತ್ತದೆಯೋ, ಅಂದೇ ಶ್ರಾದ್ಧ ಮಾಡಬೇಕು. ನಾವೇನಾದರೂ ಶ್ರಾದ್ಧವನ್ನು ಸರಿಯಾಗಿ ಮಾಡಲಿಲ್ಲ, ಅಥವಾ ಶ್ರಾದ್ಧ ಮಾಡುವುದನ್ನೇ ಮರೆತೆವು ಎಂದರೆ, ನಮ್ಮ ಜೀವನದಲ್ಲಿ ಏನೇನೆಲ್ಲಾ ಆಗಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ನಾವು ಯಾವ ದಿನ ಶ್ರಾದ್ಧ ಮಾಡದಿದ್ದರೂ, ಮಹಾಲಯದ ಸಮಯದಲ್ಲಾದರೂ ಶ್ರಾದ್ಧ ಮಾಡಬೇಕು ಅಂತಾ ಹೇಳಲಾಗುತ್ತದೆ. ಹಾಗಾಗಿ ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಮುಹೂರ್ತ ಇರುವುದೇ ಇಲ್ಲ. ಯಾಕಂದ್ರೆ ಮಹಾಲಯ ಅನ್ನೋದು ಪಿತೃಗಳಿಗಾಗಿ ಇರುವ ಕಾಲ. ಈ ದಿನಗಳಲ್ಲಿ ಕೆಲವು ದೇವಸ್ಥಾನದ ಬಾಗಿಲು ಕೂಡ ಬಂದ್ ಮಾಡಿರುತ್ತಾರೆ. ಈ ಸಮಯದಲ್ಲೂ ನೀವು ಪಿತೃವನ್ನು ಕಡೆಗಣಿಸಿದರೆ, ಪಿತೃ ದೋಷಕ್ಕೆ ಒಳಗಾಗುತ್ತೀರಿ.
ಆರೋಗ್ಯ ಸಮಸ್ಯೆ: ಪಿತೃದೋಷವಿದ್ದಾಗ ಅಥವಾ ಮಾಟಮಂತ್ರ ಮಾಡಿಸಿದಾಗ ಆರೋಗ್ಯ ಸಮಸ್ಯೆ ತಲೆದೂರುತ್ತದೆ. ಹಾಗಾಗಿ ಪಿತೃಗಳ ಪಿಂಡಪ್ರಧಾನ ಕಾರ್ಯ, ಶ್ರಾದ್ಧ ಕಾರ್ಯಗಳನ್ನು ಭಕ್ತಿಯಿಂದ ಮಾಡಬೇಕು.
ಹಣದ ಸಮಸ್ಯೆ: ಪಿತೃಗಳನ್ನು ಮರೆತರೆ ಬರುವ ಪ್ರಮುಖ ಸಮಸ್ಯೆ ಅಂದ್ರೆ, ಹಣದ ಸಮಸ್ಯೆ. ಪಿತೃಗಳ ಕಾರ್ಯವನ್ನು ಸರಿಯಾಗಿ, ಭಕ್ತಿಯಿಂದ ಮಾಡದಿದ್ದಾಗಲೂ ಈ ರೀತಿಯಾಗಬಹುದು. ಹಾಗಾಗಿ ನಿಮ್ಮ ಪಿತೃಗಳ ಬಗ್ಗೆ ಭಕ್ತಿಯಿಂದ, ಶ್ರಾದ್ಧ ಕಾರ್ಯವನ್ನು ಮಾಡಬೇಕು. ಕಾಟಾಚಾರಕ್ಕೆ ಮಾಡಬಾರದು. ಕಾಟಾಚಾರಕ್ಕೆ ಮಾಡಿದರೆ, ಅದರಿಂದೇನೂ ಪ್ರಯೋಜನವಿಲ್ಲ.
ಮನೆಯಲ್ಲಿ ಕಾರಣವಿಲ್ಲದೇ ಕಲಹ: ಮನೆಯಲ್ಲಿ ವಿನಾಕಾರಣ ಕಲಹವಾಗುತ್ತದೆ. ಸಂಂಬಂಧಗಳು ಹಾಳಾಗುತ್ತದೆ. ಇದಕ್ಕೆ ಕಾರಣ ಪಿತೃದೋಷವೂ ಇರಬಹುದು. ಅಥವಾ ಹರಕೆ ಹೊತ್ತು ಅದನ್ನು ಸಲ್ಲಿಸದೆಯೂ ಇರಬಹುದು. ಹಗಾಗಿ ಹರಕೆ ಇದ್ದರೆ ಅದನ್ನು ತೀರಿಸಿ, ಪಿತೃದೋಷವಿದ್ದರೆ, ಪರಿಹಾರ ಕಂಡುಕೊಳ್ಳಿ.
ಅಪಘಾತ ಸಂಭವಿಸುವುದು: ಕೆಲವರಿಗೆ ಪದೇ ಪದೇ ಅಪಘಾತವಾಗುತ್ತದೆ. ದೊಡ್ಡ ಪೆಟ್ಟುಗಳಾಗದಿದ್ದರೂ, ಸಣ್ಣ ಪುಟ್ಟ ಗಾಯವಾಗುವುದು, ಪದೇ ಪದೇ ಗಾಡಿ ಹಾಳಾಗುವುದು. ಇದೆಲ್ಲ ಆಗುತ್ತದೆ. ಹೀಗಿರುವಾಗ ನೀವು ಶ್ರಾದ್ಧ ಕಾರ್ಯ ಮಾಡಿದ್ದೀರಾ ಇಲ್ಲವಾ ಅನ್ನೋದನ್ನ ನೆನಪಿಸಿಕೊಳ್ಳಿ.

