Friday, July 11, 2025

Latest Posts

International News: ಚೀನಾಗೆ ಮೋದಿ ಸ್ನೇಹ ಬೇಕಂತೆ : ಜಿನ್‌ ಪಿಂಗ್‌ ಸಂದೇಶದಲ್ಲಿ ಏನಿದೆ..?

- Advertisement -

International News: ಭಾರತ ಹಾಗೂ ಚೀನಾ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕೆಂದು ನಾವು ಬಯಸುತ್ತೇವೆ. ಹಿಂದಿನ ವೈಷಮ್ಯ ಮರೆತು ಎರಡೂ ದೇಶಗಳ ದ್ವಿಪಕ್ಷೀಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸುಮಧುರ ರೂಪದಲ್ಲಿ ಬೆಳೆಸಬೇಕಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪ್ರತಿಪಾದಿಸಿದ್ದಾರೆ.

ಭಾರತ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಅವರಿಗೆ ಅಭಿನಂದನಾ ಸಂದೇಶ ಕಳುಹಿಸಿದ್ದಾರೆ. ಅಲ್ಲದೆ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಪರಸ್ಪರ ಒಗ್ಗಟ್ಟಿನಿಂದ ಹೆಜ್ಜೆ ಹಾಕುವುದು ಭಾರತ ಹಾಗೂ ಚೀನಾಗೆ ಸೂಕ್ತವಾದ ಮಾರ್ಗವಾಗಿದೆ. ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳು ದೀರ್ಘ ಸಮಯದ ದೃಷ್ಟಿಕೋನದಿಂದ ಬಾಂಧವ್ಯಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಬಂಧಗಳು ಗಟ್ಟಿಯಾಗಬೇಕಿದೆ..!

ಇನ್ನೂ ನಮ್ಮ ಗಡಿ ಭಾಗಗಳಲ್ಲಿ ಶಾಂತಿ ನೆಲೆಸುವುದರ ಜೊತೆಗೆ ಎರಡೂ ದೇಶಗಳ ನಡುವೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಲು ನಾವು ಶ್ರಮಿಸಬೇಕಿದೆ. ನಂಬಿಕೆ, ಗೌರವದ ಆಧಾರದಲ್ಲಿ ನಮ್ಮ ಬಂಧಗಳು ಗಟ್ಟಿಯಾಗಬೇಕಿದೆ. ಅಲ್ಲದೆ ಭಾರತ ಹಾಗೂ ಚೀನಾಗಳ ನಡುವೆ ಪ್ರಾಚೀನಾ ಕಾಲದಿಂದಲೂ ಒಂದು ಚಾರಿತ್ರಿಕ ಬಾಂಧವ್ಯವಿದೆ. ಜಗತ್ತಿನ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳಾಗಿದ್ದು, ದಕ್ಷಿಣ ಭಾಗದಲ್ಲಿ ವಿಶ್ವದ ಹಿತ ಕಾಪಾಡಿಕೊಳ್ಳಬೇಕಿದೆ ಎಂದು ಜಿನ್‌ಪಿಂಗ್‌ ಕರೆ ನೀಡಿದ್ದಾರೆ.

ಬಾಂಧವ್ಯ ಸ್ಥಿರಗೊಳಿಸೋಣ..

ಅಲ್ಲದೆ ಎರಡೂ ದೇಶಗಳ ನಡುವಿನ ಬಾಂಧವ್ಯ ಸ್ಥಿರಗೊಳಿಸುವುದರ ಜೊತೆಗೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು 75ನೇ ವರ್ಷದ ಈ ಸಂದರ್ಭವನ್ನು ಬಳಸಿಕೊಳ್ಳಬೇಕಿದೆ ಎಂದು ಚೀನಾ ಅಧ್ಯಕ್ಷರ ಸಂದೇಶಕ್ಕೆ ಭಾರತದ ರಾಷ್ಟ್ರಪತಿ ಮುರ್ಮು ಪ್ರತಿಕ್ರಿಯೆ ನೀಡಿದ್ದಾರೆ.

ಜಂಟಿ ನಿರ್ಣಯಗಳನ್ನು ಜಾರಿಗ ತರಲು ಸಿದ್ಧ..

ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ವ್ಯವಸ್ಥೆಯನ್ನು ಪುನಾರಂಭಿಸುವ ಕುರಿತು ನವದೆಹಲಿ ಮತ್ತು ಬೀಜಿಂಗ್ ನಡುವೆ ಒಪ್ಪಂದವಾಗಿರುವುದನ್ನು ಚೀನಾ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದೃಢಪಡಿಸಿತ್ತು. ಕಳೆದ ವರ್ಷದಲ್ಲೇ ಚೀನಾ-ಭಾರತ ಗಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚೀನಾ ಮತ್ತು ಭಾರತಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ನಿರಂತರ ಮಾತುಕತೆ ನಡೆಸಿದ್ದವು. ಚೀನಾ ಹೆಚ್ಚಾಗಿ ಪ್ರತಿಪಾದಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳು ಒಮ್ಮತಕ್ಕೆ ಬಂದಿದ್ದವು. ಮುಂದಿನ ನಿರ್ಣಯಗಳನ್ನು ಜಾರಿಗೆ ತರಲು ಚೀನಾ ಭಾರತದೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಕಳೆದ ವರ್ಷವಷ್ಟೇ ಹೇಳಿದ್ದರು.

ಇನ್ನೂ ಭಾರತ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದ ಇತರ ಪ್ರದೇಶಗಳಲ್ಲಿ ಚೀನಾದ ಯೋಧರು ಎಲ್ಎಸಿಯನ್ನು ಉಲ್ಲಂಘಿಸುತ್ತಿರುವ ಪ್ರಯತ್ನಗಳ ಮಧ್ಯೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಎರಡೂ ದೇಶಗಳು ಸ್ಥಾಪಿತ ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಚರ್ಚೆಗಳಲ್ಲಿ ತೊಡಗಿವೆ.

- Advertisement -

Latest Posts

Don't Miss