Hubli News: ಹುಬ್ಬಳ್ಳಿ: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಜಯಮೃತ್ಯಂಜಯ ಸ್ವಾಮೀಜಿಗಳ ನಡೆಗೆ ಲಿಂಗಾಯತ ಪಂಚಮಸಾಲಿ ಸಮಾಜ ಅಸಮಾಧಾನ ಹೊರಹಾಕಿದೆ.
ಇಂದು ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಪಂಚಮಸಾಲಿ ಸಮುದಾಯ ಸಭೆ ನಡೆಸಿದ್ದು, ಈ ಸಭೆಯಲ್ಲಿ ಟ್ರಸ್ಟ್ ಮತ್ತು ಸಮಾಜದ ಮುಖಂಡರ ಚಿಂತನ ಮಂಥನ ಸಭೆ ನಡೆದಿತ್ತು. ಕೂಡಲಸಂಗಮಸ್ವಾಮೀಜು ಯತ್ನಾಳ್ ಪರವಾಗಿ ಯಾವುದೇ ರೀತಿಯ ಹೋರಾಟ ಮಾಡಬಾರದು. ವೈಯಕ್ತಿಕ ಹಿತಾಸಕ್ತಿಯಿಂದ ಯತ್ನಾಳ್ ಪರವಾಗಿ ಹೇಳಿಕೆ ಕೊಡೋದು ಸರಿಯಲ್ಲ. ಸ್ವಾಮಿಗಳಿಗೆ ಸಮಾಜ ಅನಿವಾರ್ಯ. ಜಾತಿ, ಒಳಪಂಗಡಗಳಿಗಾಗಿ ಕೆಲಸ ಮಾಡಬೇಕು ಸ್ವಾಮಿಗಳನ್ನ ಮಾಡುವ ಉದ್ದೇಶ ಸಮಾಜ ಸಂಘಟನೆಗಾಗಿ.
ಆರ್ಥಿಕವಾಗಿ, ಶೈಕ್ಷಣಿಕವಾಗಿ ಗುರುತಿಸಿ ಮೇಲಕ್ಕೆ ಎತ್ತುವುದಕ್ಕಾಗಿ ನೇಮಕ ಮಾಡಿರ್ತಾರೆ. ಆದ್ರೆ ಸ್ವಾಮಿಗಳು ಯಾವ ಸಂದರ್ಭದಲ್ಲೂ ವ್ಯಕ್ತಿ, ರಾಜಕೀಯ ಪಕ್ಷದ ಸ್ವತ್ತು ಆಗಬಾರದು. ಸ್ವಾಮಿಗಳು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬಾರದು. ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದಯ. ಒಬ್ಬ ವ್ಯಕ್ತಿಯ ಪರವಾಗಿ ಸ್ವಾಮೀಜಿಗಳು ನಿಲ್ಲಬಾರದು. ಸಮಾಜದ ಹಿತದೃಷ್ಠಿಯಿಂದ ಸ್ವಾಮೀಜಿಗಳು ಹೋರಾಟ ಮಾಡಲಿ. ಆದ್ರೆ ಒಬ್ಬ ವ್ಯಕ್ತಿಯ ಪರವಾಗಿ ರಾಜಕೀಯವಾಗಿ ಹೋರಾಟ ಮಾಡುವುದು ಸಲ್ಲದು ಎಂದು ಲಿಂಗಾಯತ ಪಂಚಮಸಾಲಿ ಸಮಾಜ ಅಸಮಾಧಾನ ಹೊರಹಾಕಿದೆ.

