Saturday, April 26, 2025

Latest Posts

Bengaluru News: ಅಪ್ರಾಪ್ತೆ ಮೇಲೆ ಎರಗಿದ ಕಾಮುಕ : ಮೊಬೈಲ್‌ ಕಂಡು ಶಾಕ್‌ ಆದ ಖಾಕಿ..!

- Advertisement -

Bengaluru News: ಕಳೆದೆರಡು ದಿನಗಳ ಹಿಂದಷ್ಟೇ ಅಣ್ಣನ ಬೈಕ್‌ ಮೇಲೆ ಹೊರಟಿದ್ದ ತಂಗಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೆ ರಾಜ್ಯದಲ್ಲಿ ಇಂಥದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ. ಬ್ಯಾಡ್ಮಿಂಟನ್ ಕೋಚಿಂಗ್ ಸೆಂಟರ್ ಗೆ ತೆರಳುತ್ತಿದ್ದ 16 ವರ್ಷದ ಬಾಲಕಿಯ ಮೇಲೆ ಕೋಚ್ ಒಬ್ಬ ಅತ್ಯಾಚಾರ ಎಸಗಿರುವ ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಅಪ್ರಾಪ್ತ ಬಾಲಕಿಯು ತಮಿಳುನಾಡಿನ 26ರ್ಷದ ಸುರೇಶ್‌ ಬಾಲಾಜಿ ಎನ್ನುವ ಯುವಕನ ಬಳಿ ಕಳೆದೆರಡು ವರ್ಷಗಳಿಂದ ಬ್ಯಾಡ್ಮಿಂಟನ್‌ ಕೋಚಿಂಗ್‌ ಪಡೆಯುತ್ತಿದ್ದಳು. ಈ ವೇಳೆ ಆತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ತರಬೇತಿಯ ನೆಪದಲ್ಲಿ ಆಗಾಗ್ಗೆ ಸುರೇಶ್‌ ಬಾಲಕಿಯನ್ನು ತನ್ನ ಬಾಡಿಗೆ ಮನೆಗೆ ಕಕಡೆದುಕೊಂಡು ಹೋಗಿ, ಅತ್ಯಾಚಾರ ಎಸಗುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಬಗ್ಗೆ ಯಾರ ಮುಂದೆಯೂ ಬಾಯಿ ಬಿಡದಂತೆ ಬಾಲಕಿಗೆ ಹೆದರಿಸಿದ್ದ, ಒಂದು ವೇಳೆ ಹೇಳಿದರೆ ಕೊಲೆ ಮಾಡುವುದಾಗಿ ಪಾಪಿ ಬೆದರಿಸಿದ್ದನಂತೆ.

ಶಾಕ್‌ಗೆ ಒಳಗಾಗಿದ್ದ ಅಜ್ಜಿ..!

ಈ ನಡುವೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬಾಲಕಿಯು ಅಜ್ಜಿ ಮನೆಗೆ ಹೋಗಿದ್ದಾಳೆ. ಅಲ್ಲದೆ ಈತನ ಚಾಟಿಂಗ್‌ ಅಲ್ಲಿಯೂ ಮುಂದುವರೆದಿತ್ತು, ಈ ವೇಳೆ ತನ್ನ ಅಜ್ಜಿ ಮೊಬೈಲ್‌ನಿಂದ ನಗ್ನ ಫೋಟೋ ಕಳುಹಿಸುವಂತೆ ಬಾಲಕಿಗೆ ಪಾಪಿ ಒತ್ತಡ ಹಾಕುತ್ತಿದ್ದ, ಹೀಗಾಗಿ ಅಪ್ರಾಪ್ತೆಯು ತನ್ನ ಫೋಟೋ ಕಳುಹಿಸಿದ್ದಳು. ಇದರ ಕುರಿತು ಅನುಮಾನ ಬಂದು ಅಜ್ಜಿಯು ಬಾಲಕಿಯ ಕೈಯಿಂದ ಮೊಬೈಲ್‌ ಕಿತ್ತುಕೊಂಡು ಪರಿಶೀಲಿಸಿ, ಅವಳನ್ನು ವಿಚಾರಿಸಿದಾಗ ಕಾಮುಕ ಸುರೇಶ್ ಅಪ್ರಾಪ್ತೆಯನ್ನು ದುರುಪಯೋಗ ಪಡಿಸಿಕೊಂಡ ವಿಚಾರ ಬಯಲಾಗಿದೆ. ಇನ್ನೂ ಬಾಲಕಿ ತನ್ನ ನಗ್ನ ಫೋಟೋವನ್ನು ಕೋಚ್​ಗೆ ಕಳುಹಿಸಿರುವುದನ್ನು ಕಂಡು ಬೆಚ್ಚಿಬಿದ್ದಿರುವ ಅಜ್ಜಿ ಕೂಡಲೇ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೆ ವಿಚಾರ ತಿಳಿದು ಆಘಾತಕ್ಕೆ ಒಳಗಾದ ಬಾಲಕಿಯ ಪೋಷಕರು ಕೂಡಲೇ ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಅಧಾರದ ಮೇಲೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಅವನ ಮೊಬೈಲ್‌ ಕೂಡ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಇನ್ನೂ ಬಂಧಿತ ಪಾಪಿಯ ಮೊಬೈಲಿನಲ್ಲಿ 13 ರಿಂದ 16 ವರ್ಷ ವಯಸ್ಸಿನ 8 ಹುಡುಗಿಯರ ನಗ್ನ ಫೋಟೋಗಳು ಹಾಗೂ ವೀಡಿಯೋಗಳು ಪತ್ತೆಯಾಗಿವೆ.

ಅಪ್ರಾಪ್ತೆಯರ ಹೇಳಿಕೆ ದಾಖಲು..

ಬ್ಯಾಡ್ಮಿಂಟನ್ ಕಾಮ ಪಿಶಾಚಿ ಸುರೇಶ್ ಕೋಚಿಂಗ್ ಪಡೆಯಲು‌ ತನ್ನ ಬಳಿ ಬರುತ್ತಿದ್ದ ಬಾಲಕಿಯರೊಂದಿಗೆ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಈ ವಿಚಾರವನ್ನು ಯಾರಿಗೂ ಹೇಳದಂತೆ ಹೆದರಿಸಿದ್ದ. ಹೀಗಾಗಿ ಇದುವರೆಗೂ ಯಾವುದೇ ಬಾಲಕಿಯರು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಆದರೆ ಈಗ ಓರ್ವ ಬಾಲಕಿ ಅಜ್ಜಿ ಮೊಬೈಲ್​ನಿಂದ ತನ್ನ ನಗ್ನ ಫೋಟೋವನ್ನು ಕಳುಹಿಸಿದಾಗ ಕೋಚರ್​ ಸುರೇಶನ ನವರಂಗಿ ಆಟ ಬಯಲಿಗೆ ಬಿದ್ದಿದ್ದು, ಬಳಿಕ ಇನ್ನುಳಿದ ಬೇರೆ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತೆ ಬಾಲಕಿಯರ ಹೇಳಿಕೆ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಈ ಕಾಮುಕನ ಬಳಿ ತಮ್ಮ ಬಾಲಕಿಯರನ್ನು ಬ್ಯಾಡ್ಮಿಂಟನ್‌ ಕೋಚಿಂಗ್‌ಗೆಂದು ಕಳುಹಿಸುತ್ತಿದ್ದ ಪೋಷಕರಲ್ಲಿ ಇದೀಗ ಆತಂಕ ಶುರುವಾಗಿದೆ.

- Advertisement -

Latest Posts

Don't Miss