Thursday, August 21, 2025

Latest Posts

ಕೌಟುಂಬಿಕ ಕಲಹಕ್ಕೆ ಟೆಕ್ಕಿ ಸೂಸೈಡ್‌ : ತಂದೆಯ ದೂರಿನಲ್ಲಿತ್ತು ಸ್ಫೋಟಕ ಮಾಹಿತಿ..?

- Advertisement -

Crime News: ಕೌಟುಂಬಿಕ ಕಲಹಕ್ಕೆ ಬೇಸತ್ತು 40 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್ ಪ್ರಶಾಂತ್ ನಾಯರ್‌ ಎನ್ನುವವರು ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಇನ್ನೂ ಸೂಸೈಡ್‌ ಮಾಡಿಕೊಂಡಿರುವ ಟೆಕ್ಕಿ ಪ್ರಶಾಂತ್‌ ನಾಯರ್‌ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅಲ್ಲದೆ ಗಾಣಿಗರಹಳ್ಳಿಯ ಡಿಎಕ್ಸ್‌ ಸ್ಮಾರ್ಟ್‌ನೆಸ್ಟ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಟೆಕ್ಕಿ ಕೇರಳದ ಮೂಲದವರಾಗಿದ್ದರು. ಅವರು 12 ವರ್ಷಗಳ ಹಿಂದೆ ಪೂಜಾ ಎನ್ನುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಎಂಟು ವರ್ಷದ ಹೆಣ್ಣು ಮಗುವಿದೆ. ಅಂದಹಾಗೆ ಈ ದಂಪತಿ ಮಧ್ಯೆ ಇತ್ತೀಚಿನ ದಿನಗಳಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಇದು ವಿಕೋಪಕ್ಕೆ ತಿರುಗಿ ದಂಪತಿ ಪ್ರತ್ಯೇಕವಾಗಿ ವಾಸ ಮಾಡಲು ಮುಂದಾಗಿದ್ದರು. ಆದರೆ ಈ ಪ್ರಶಾಂತ್ ನಾಯರ್ ಅವರು ಗಾಣಿಗರಹಳ್ಳಿಯ ತಮ್ಮ ಮೊದಲಿನ ಅಪಾರ್ಟ್‌ಮೆಂಟ್‌ನಲ್ಲಿಯೇ ನೆಲಸಿದ್ದರು. ಇನ್ನೂ ಕಳೆದ ಏಪ್ರಿಲ್‌ 4ರಂದು ದಂಪತಿ ಮಧ್ಯೆ ಜಗಳ ಆಗಿತ್ತು. ಇದಾದ ನಂತರ ತಮ್ಮ ಅಪಾರ್ಟ್‌ಮೆಂಟ್‌ಗೆ ವಾಪಸಾಗಿದ್ದ ಪ್ರಶಾಂತ್‌ ಅದೇ ದಿನ ರಾತ್ರಿ ಎಂಟು ಗಂಟೆಯ ಹೊತ್ತಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯವಿತ್ತು..

ಅಲ್ಲದೆ ಮಗನ ಸಾವಿನ ಕುರಿತು ಪ್ರಶಾಂತ್ ನಾಯರ್ ತಂದೆ ಎಂಎನ್ ಕುಟ್ಟಿ, ತಮ್ಮ ಮಗ ಮತ್ತು ಪೂಜಾ ನಡುವೆ ಭಿನ್ನಾಭಿಪ್ರಾಯವಿತ್ತು. ಅವರಿಬ್ಬರು ಸ್ವಲ್ಪ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇತ್ತೀಚಿಗೆ ಆತ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದನು. ಬಳಿಕ ನಾನು ಫೋನ್ ಮೂಲಕ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ನನ್ನ ಕರೆಗಳಿಗೆ ಉತ್ತರಿಸದ ಕಾರಣ, ಮನೆಗೆ ತೆರಳಿ ನೋಡಿದಾಗ ಆತ ಸೀಲಿಂಗ್ ಫ್ಯಾನ್‌‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ ಎಂದು ಸೋಲದೇವನಹಳ್ಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚಿತ್ರಹಿಂಸೆಯ ದೂರುಗಳಿಲ್ಲ..!

ಇನ್ನೂ ಇದೇ ವಿಚಾರಕ್ಕೆ ಬೆಂಗಳೂರು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸೈದುಲ್ಲಾ ಅದಾವತ್ ಪ್ರತಿಕ್ರಿಯಿಸಿ, ಮೃತ ಪ್ರಶಾಂತ್ ತಮ್ಮ ಪತ್ನಿಯಿಂದ ಯಾವುದೇ ಚಿತ್ರಹಿಂಸೆ ಅನುಭವಿಸಿದ ದೂರುಗಳಿಲ್ಲ. ಅಲ್ಲದೆ ಕಳೆದ ಒಂದು ವರ್ಷದ ಹಿಂದೆಯೇ ಅವರು ಬೇರ್ಪಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಒಟ್ನಲ್ಲಿ.. ಇಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಅದರಲ್ಲೂ ದಾಂಪತ್ಯ ಕಲಹದ ಕಾರಣಕ್ಕಾಗಿ ಗಂಡ ಅಥವಾ ಹೆಂಡತಿಯ ಸಾವಿನ ಸಂಖ್ಯೆಯು ಏರಿಕೆಯಾಗುತ್ತಿದೆ. ಪ್ರಮುಖವಾಗಿ ಸಂಸಾರವೆಂದರೆ ಅದರಲ್ಲಿ ವೈಮನಸ್ಸು, ಭಿನ್ನಾಭಿಪ್ರಾಯಗಳು ಸಹಜವಾಗಿರುತ್ತವೆ. ಅದರೆ ಇವುಗಳನ್ನೇ ಪ್ರತಿಷ್ಠೆಯಾಗಿ ಪಡೆದು ಜೀವನದಲ್ಲಿ ವ್ಯತಿರಿಕ್ತ ತೀರ್ಮಾನಗಳನ್ನು ಪೆಡಯುವ ಮೂಲಕ ಅನೇಕ ಜನರು ಹೀಗೆ ಆತ್ಮಹತ್ಯೆಯ ದಾರಿ ತುಳಿಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಅದೇನೆ ಇರಲಿ.. ಗಂಡ ಹಾಗೂ ಹೆಂಡತಿ ನಡುವೆ ಏನೇ ಗಲಾಟೆ, ವೈಮನಸ್ಸು ಎದುರಾದರೆ ಅವುಗಳಿಗೆ ಆರೋಗ್ಯಕರ ಮಾತುಕತೆಯ ಮೂಲಕ ಫುಲ್‌ ಸ್ಟಾಪ್‌ ಇಡಬೇಕು. ಅಂದಾಗ ಮಾತ್ರ ಪ್ರತಿಯೊಬ್ಬರ ಸಂಸಾರ ಆನಂದ ಸಾಗರವಾಗಲು ಸಾಧ್ಯ.. ಆದರೆ ಕೇವಲ ಹೆಂಡತಿಯ ಜೊತೆ ಗಲಾಟೆಯಾಯ್ತು ಅನ್ನೋ ಒಂದೇ ಕಾರಣಕ್ಕೆ ಟೆಕ್ಕಿ ಪ್ರಶಾಂತ್‌ ದುರಂತ ಅಂತ್ಯ ಕಂಡಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ..!

- Advertisement -

Latest Posts

Don't Miss