Wednesday, April 16, 2025

Latest Posts

ಜಾತಿಗಣತಿಯನ್ನು ಕಾಂಗ್ರೆಸ್ ರಾಜಕೀಯಕ್ಕಾಗಿ ಉಪಯೋಗ ಮಾಡುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಬಿಜೆಪಿಯ ಬೀಮ ಹೆಜ್ಜೆ ಯಾತ್ರೆ ಹುಬ್ಬಳ್ಳಿಗೆ ಆಗಮಿಸಿದ್ದು, ನಿಪ್ಪಾಣಿಯತ್ತ ಹೆಜ್ಜೆ ಹಾಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದು ನೂರು ವರ್ಷ ತುಂಬಿದ ಹಿನ್ನಲೆ, ಬಿಜೆಪಿಯಿಂದ ಭೀಮ ಹೆಜ್ಜೆ ಯಾತ್ರೆ ಆಯೋಜನೆ ಮಾಡಲಾಗಿತ್ತು.

ಈ ಯಾತ್ರೆಯನ್ನು ಸ್ವಾಗತಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ, ಮಾಜಿ ಸಂಸದ ಮುನಿಸ್ವಾನಿ, ಎಸ್ಪಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಥ್ ನೀಡಿದ್ದಾರೆ.

ಜಾತಿ ಗಣಿತಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿಯೇ ಗೊಂದಲವಿದೆ. ಡಿಸಿಎಂ ಒಂದು ರೀತಿಯ ಹೇಳಿಕೆ ನೀಡುತ್ತಾರೆ ಉಳಿದ ಸಚಿವರು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ಜಾತಿಗಣತಿ ವರದಿ ವೈಜ್ಞಾನಿಕವಾಗಿಲ್ಲ. ಮೊದಲು ವರದಿಯನ್ನು ವೈಜ್ಞಾನಿಕವಾಗಿ ಅಧ್ಯಾಯನ ಮಾಡಲಿ. ಇವರು ಏನೆ ಸರ್ವೆ ಮಾಡಿದರು ಅಂತಿಮವಾಗಿ ಅದನ್ನು ಕೇಂದ್ರ ಸರ್ಕಾರ ಒಪ್ಪಬೇಕು. ರಾಜ್ಯ ಸರ್ಕಾರಕ್ಕೆ ಸರ್ವೇ ಮಾಡುವ ಅಧಿಕಾರವಿದೆ. ಅದನ್ನು ಅಂತಿಮಗೊಳಿಸುವ ಅಧಿಕಾರ ಕೇಂದ್ರಕ್ಕಿದೆ. ನಕಲಿ ಗಾಂಧಿಗಳ ಹೆಸರು ಹೇಳಿ ,ಹೆದರಿಸಿ ಇದನ್ನು ಕ್ಯಾಬಿನೆಟ್ ಚರ್ಚೆ ಆಗದಂತೆ ನೋಡಿಕೊಂಡಿದ್ದಾರೆ.

ಹೀಗಾಗಿ ಈ ಬಗ್ಗೆ ಕಾಂಗ್ರೆಸ್ ನಲ್ಲೆ ಬೇಗುದಿದೆ. ಜಾತಿಗಣತಿಯನ್ನು ಕಾಂಗ್ರೆಸ್ ರಾಜಕೀಯಕ್ಕಾಗಿ ಉಪಯೋಗ ಮಾಡುತ್ತಿದೆ. ಇದನ್ನು ಯಾವು ಸಮಾಜ ಕಲ್ಯಾಣಕ್ಕಾಗಿ ಉಪಯೋಗ ಮಾಡುವ ವಿಚಾರ ಮಾಡುತ್ತಿಲ್ಲ. ತಮ್ಮ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ವರದಿ ಬಹಿರಂಗ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

1925ರಲ್ಲಿ ಅಂಬೇಡ್ಕರ್ ನಿಪ್ಪಾಣಿಗೆ ಬಂದಿದ್ದರು. ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ನೂರು ಹಿನ್ನಲೆ ಕಾಂಗ್ರೆಸ್ ಸಮಾವೇಶ ಮಾಡಿದರು. ಅವರ ಪಕ್ಷದ ಕಾರ್ಯಕ್ರಮವನ್ನು ಗಾಂಧಿ ಸಮಾವೇಶ ಮಾಡಿದರು. ಅಂಬೇಡ್ಕರ್ ನಿಪ್ಪಾಣಿಗೆ ಬಂದು ನೂರು ವರ್ಷವಾಗಿದೆ. ಈ ಬಗ್ಗೆ ಶಶಿಕಲಾ ಜೊಲ್ಲೆ ಅವರು ರಾಜ್ಯಸರ್ಕಾರದ ಗಮನಕ್ಕೆ ತಂದರೂ ರಾಜ್ಯ ಸರ್ಕಾರ ಸಮಾವೇಶ ಮಾಡುತ್ತಿಲ್ಲ. ಗಾಂಧಿಜಿ ಅವರ ಸಮಾವೇಶ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಸಮಾವೇಶ ಯಾಕೆ ಮಾಡುತ್ತಿಲ್ಲ.

ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತ ರತ್ನವಾಗಲಿ, ಪದ್ಮವಿಭೂಷಣ ಸಹ ನೀಡಲ್ಲ. ಹೈಕಮಾಂಡ್ ಸೂಚನೆಯಂತೆ ರಾಜ್ಯ ಸರ್ಕಾರ ನೂರನೇ ಸಮಾವೇಶ ಮಾಡಿಲ್ಲ ಇದು ಷಡ್ಯಂತರ. ನಕಲಿ ಗಾಂಧಿ ಕುಟುಂಬ ಅಂಬೇಡ್ಕರ್ ಸಮಾವೇಶ ಮಾಡದಂತೆ ರಾಜ್ಯ ಸರ್ಕಾರದ ಮೇಲೆ ತಡೆಹಾಕಿದೆ. ಆದರೆ ಬಿಜೆಪಿಯಿಂದ ಭೀಮ ಹೆಜ್ಜೆ ಕಾರ್ಯಕ್ರಮ ಮೂಲಕ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ..

ಅಂಬೇಡ್ಕರ್ ಭೌದ್ದ ಧರ್ಮ ದೀಕ್ಷೆ ಪಡೆದಾಗ ಆ ಜಾಗವನ್ನು ದೀಕ್ಷಾ ಭೂಮಿ ಮಾಡಿ ಅಭಿವೃದ್ಧಿ ಮಾಡಿದ್ದು ಬಿಜೆಪಿ. ಪ್ರಿಯಾಂಕ ಖರ್ಗೆ ಅಧಿಕಾರ, ಅಹಂಕಾರದಿಂದ ಮಾತನಾಡುತ್ತಾರೆ. ಅವರ ತಂದೆ ನಕಲಿ‌ ಗಾಂಧಿ ಕುಟುಂಬದ ಸರ್ಕಾರದಲ್ಲಿ ಕ್ಯಾಬಿನೆಟ್ ನಲ್ಲಿದ್ದರು. ಆದರೂ ಮಾಡಲಿ‌ ನಾವು ಅಂಬೇಡ್ಕರ್ ಅವರಿಗೆ ಗೌರವ ನೀಡಿಲ್ಲ. ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕಾರ್ಯ ಬಿಜೆಪಿ ಮಾಡುತ್ತಿದೆ. ಅಂಬೇಡ್ಕರ್ ನಿಪ್ಪಾಣಿಗೆ ಬಂದು ನೂರು ವರ್ಷ ತುಂಬಿದ ಕಾರ್ಯಕ್ರಮ ಮಾಡಿದಿರುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿ. ದೇಶದ ಜನತೆ ಕ್ಷೇಮ ಕೇಳಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss