Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎನ್.ಸಶಿಕುಮಾರ್ ಮಾಧ್ಯಮದ ಜೊತೆ ಮಾತನಾಡಿದ್ದು, ಮೊನ್ನೆ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಮಗುವಿನ ಹತ್ಯೆ ಆಗಿತ್ತು. ಆರೋಪಿ ತಪ್ಪಿಸಿಕೊಳ್ಳುವ ವೇಳೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಸಾವಾಗಿತ್ತು. ಇಂತಹ ಪ್ರಕರಣದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅಂತ ಸುಪ್ರೀಂ ಕೋರ್ಟ್ ಸೂಚನೆ ಇದೆ ಅದರಂತೆ ನಡೆದಿದೆ. ಈಗ ಮರಣೋತ್ತರ ಪರೀಕ್ಷೆ ಮುಂದುವರೆದಿದೆ. ನ್ಯಾಯಾಗ ತನಿಖೆ ಮಾಡಬೇಕು ಅಂತ ಇತ್ತು, ಅದು ಕೂಡ ಆಗುತ್ತಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಆರೋಪಿಯ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ. ಆತ ಇದ್ದಲ್ಲಿ ಹಾಗೂ ಆತ ಸಂಚರಿಸಿದ ಎಲ್ಲಾ ಕಡೆ ಮಾಹಿತಿ ಕಲೆ ಹಾಕಲಾಗ್ತಿದೆ. ಪೋಸ್ಟ್ ಮಾರ್ಟಂ ಆದ ಮೇಲೆ ಅವರಿಗೆ ಸಂಬಂಧ ಪಟ್ಟವರನ್ನ ಹುಡುಕುವ ಕೆಲಸ ಮಾಡ್ತಾ ಇದ್ದಿವಿ. ಎಲ್ಲಾ ಭಾಷೆಗಳಲ್ಲಿ ಆರೋಪಿಯ ವಿವರಗಳನ್ನು ಬೇರೆ ಬೇರೆ ಕಡೆ ಕಳಿಸಲಾಗಿದೆ. ಆತ ಪಟ್ನಾದವನಾಗಿದ್ದಾನೆ ಎಂಬ ಮಾಹಿತಿ ಇದೆ. ಪತ್ತೆ ಆಗದೆ ಹೋದ್ರೆ ಅಂತ್ಯಕ್ರಿಯೆ ಮಣ್ಣು ಮಾಡಲಾಗುತ್ತೆ. ಸುಪ್ರೀಂ ಕೋರ್ಟ್ ಗೈಡ್ಲೈನ್ಸ್ ಪ್ರಕಾರ ಚಾಚು ತಪ್ಪದೇ ಪಾಲನೆ ಮಾಡಾಲಾಗುತ್ತಿದೆ. ಅವರ ಕುಟುಂಬಸ್ಥರು ಬರುವ ತನಕ ಕೋಲ್ಡ್ ಸ್ಟೋರೇಜ್ ನಲ್ಲಿ ಕೆಲವು ದಿನಗಳ ಕಾಲ ಶವ ಇರಿಸಲಾಗುತ್ತೆ.
ಇಷ್ಟಾದರೂ ಆತನ ಹಿನ್ನೆಲೆ ಪತ್ತೆ ಆಗದಿದ್ದರೆ ಮಣ್ಣು ಮಾಡುವ ಪ್ರಕ್ರಿಯೆಯನ್ನ ಕಾನೂನು ತಜ್ಞರ ಸಲಹೆ ಪಡೆದು ಮುಂದುವರೆಯುತ್ತೇವೆ. ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ ಆಗಿಲ್ಲ. ಏನೇ ಕೇಳಿದ್ರು ಉತ್ತರ ನೀಡಲು ಸಿದ್ದವಿದ್ದೇವೆ ಎಂದು ಶಶಿಕುಮಾರ್ ಹೇಳಿದ್ದಾರೆ.