Thursday, April 24, 2025

Latest Posts

ಇವತ್ತು ಶಿವಮೊಗ್ಗದ ಮಂಜುನಾಥ್, ನಾಳೆ ನಿಮಗೆ ಗುಂಡು ಹೊಡೀತಾರೆ: ಹಿಂದೂಗಳಿಗೆ ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್

- Advertisement -

Hubli News: ಹುಬ್ಬಳ್ಳಿ: ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಹಿಂದೂಗಳ ಮೇಲೆ, ಹಿಂದೂಸ್ತಾನಿಗಳ, ಭಾರತೀಯರ ಮೇಲೆ ನಡೆದ ದಾಳಿ ಶ್ರೀರಾಮಸೇನೆ ತೀವ್ರವಾಗಿ ಖಂಡನೆ ಮಾಡುತ್ತೇವೆ ಎಂದಿದ್ದಾರೆ.

ಲಾಲ್ ಚೌಕ್ ನಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತು ಈಗ ಅಲ್ಲಿ ನಮ್ಮ ರಾಷ್ಟ್ರೀಯ ಧ್ವಜ‌ ಹಾರಾಡುತ್ತಿದೆ. ಧರ್ಮ ಇಲ್ಲ ಎನ್ನುವವರಿಗೆ ಚಪ್ಪಲಿಯಲ್ಲಿ ಹೊಡೆದು ಹೇಳುವೆ ಇದು ಇಸ್ಲಾಮಿಕ್ ಭಯೋತ್ಪಾದನೆ. ಒಬ್ಬನೇ ಒಬ್ಬ ಮುಸ್ಲಿಂರನ್ನು ಹತ್ಯೆ ಮಾಡಿಲ್ಲ. ಅಲ್ಲಿನ ಸ್ಥಳೀಯ ಮುಸ್ಲಿಂರ ಸಹಕಾರದಿಂದ ಇದು ನಡೆದಿದೆ. ಇವರಿಗೆ ಕಾಶ್ಮೀರ ಬೇಕಾಗಿಲ್ಲ, ಇವರಿಗೆ ಇಸ್ಲಾಂ ಬೇಕಾಗಿದೆ. ಕಾಶ್ಮೀರ ಸಿಎಂ ಸಹ ಭಯೋತ್ಪಾದಕರು. ಈಗ ಕಾಶ್ಮೀರ ಬಂದ್ ಮಾಡುವ ನಾಟಕ ಬೇಡ ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

ಸಿರಿಯಾ ಕಾನೂನು ಪ್ರಕಾರ ಕಾಶ್ಮೀರ ನಡೆಯಬೇಕು ಅಂತ ಹೀಗೆ ಮಾಡಿದ್ದಾರೆ. ಕಾಶ್ಮೀರಕ್ಕೆ ಪ್ರವಾಸಕ್ಕೆ ಯಾರು ಹೋಗದಂತೆ ಭಯ ಹುಟ್ಟಿಸಿ ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕಾಶ್ಮೀರ, ಅಮರನಾಥ ಯಾತ್ರೆಗೆ ಹಿಂದೂಗಳ ಹೋಗುತ್ತದಂತೆ ಮಾಡಿ ಅವರು ಸಕ್ಸಸ್ ಆಗಿದ್ದಾರೆ. ಕರ್ನಾಟಕದಲ್ಲಿ ಈ ರೀತಿಯ ಭಯೋತ್ಪಾದಕರು ಇದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಳೇ ಹುಬ್ಬಳ್ಳಿ ಗಲಭೆ ಮಾಡಿದ್ದು ಇಸ್ಲಾಮಿಕ್ ಮಾನಸಿಕತೆ. ಪ್ರವಾಸಿಗರಿಂದ ಕಾಶ್ಮೀರದವರು ಅನ್ನ ತಿನ್ನುತ್ತಿದ್ದರು. ಈಗ ಭಯದಿಂದ ಯಾರು ಹೋಗಲ್ಲ. ಈಗ ಅಲ್ಲಿನವರು ಏನು ಸಗಣಿ… ಹೆ… ತಿನ್ನಿತ್ತಿರಾ?. ಕಾಶ್ಮೀರ ಮುಸ್ಲಿಂರು ಈಗ ಹೆಚ್ಚೆತ್ತುಕೊಳ್ಳಬೇಕು ಭಯೋತ್ಪಾದಕರ ವಿರುದ್ಧ ಹೋರಾಡಬೇಕು. ಇಲ್ಲದಿದ್ದರೆ ಕಾಶ್ಮೀರ ಮುಸ್ಲಿಂ ವಿರುದ್ಧ ಹೋರಾಡಿ ಕಾಶ್ಮೀರದಿಂದ ಒದ್ದು ಓಡಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಘಟನೆಗೆ ಕ್ವಿಕ್ ರಿಯ್ಯಾಕ್ಷನ್ ಮಾಡಿದೆ. ಸಚಿವ ಸಂತೋಷ ಲಾಡ್ ಸಾಕಷ್ಟು ರಿಸ್ಕ್ ತೆಗೆದುಕೊಂಡು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುವೆ ಎಂದು ಮುತಾಲಿಕ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ನೇರವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು. ಶ್ರೀಮಂತಿ ಇಂದಿರಾ ಗಾಂಧೀಯಂತೆ ಯುದ್ಧ ಮಾಡಿದಂತೆ ಯುದ್ಧ ಮಾಡಿ. ಗೃಹ ಮಂತ್ರಿ ಕೂಡಲೇ ಸ್ಥಳಕ್ಕೆ ಹೋಗಿದ್ದಾರೆ. ಪಾಕಿಸ್ತಾನ್ ದ ಮೇಲೆ ಯುದ್ಧ ಘೋಷಣೆ ಮಾಡಲೇಬೇಕು. ಇನ್ನು ಎಷ್ಟು ಜನರು ಬಲಿ ಆಗಬೇಕು? ಈ ಘಟನೆಗೆ ಕೇಂದ್ರ ಹಾಗೂ ಸ್ಥಳೀಯ ರಾಜ್ಯ ಸರ್ಕಾರ ಜವಾಬ್ದಾರಿ. ನಿರ್ಲಕ್ಷ ಮಾಡುತ್ತಿರೋದಕ್ಕೆ ಅವರು ತಪ್ಪಿಸ್ಥರು.
ಗುಪ್ತಚರ ಇಲಾಖೆಯವರ ವೈಫಲ್ಯ ಸಹ ಆಗಿದೆ. ರಾಜಕೀಯ ಮಾಡಬಾರದು, ಸಂಬಂಧ ಪಟ್ಟ ಇಲಾಖೆ ಲೋಪದೋಷಗಳನ್ನು ಸರಿ ಪಡಿಸೋದು ಕೆಲಸ ಆಗ್ಬೇಕು.

ಇದರಂತೆ ನಮ್ಮ ಹಿಂದೂಗಳ ಸರಣಿ ಕೊಲೆಗಳು ಸಹ ಆಗಿವೆ. ಯಾಕೆ ಕೊಲೆ ಮಾಡಿದ್ದು? ಹಿಂದೂ ಸಂಘಟನೆ ಕಾರ್ಯಕರ್ತರು ಅಂತ ಹೊಡೆದಿದ್ದಾರೆ. ಕೇರಳ, ಪಶ್ಚಿಮ ಬಂಗಾಳದಲ್ಲಿ ಏನು ಪರಿಸ್ಥಿತಿ ಆಗಿದೆ? ಹಿಂದುಗಳೇ.. ಇಸ್ಲಾಂ ಭಯೋತ್ಪಾದಕ, ಮುಸ್ಲಿಂರ ಬಗ್ಗೆ ಎಚ್ಚರವಾಗಿರ್ರಿ. ಇವತ್ತು ಶಿವಮೊಗ್ಗದ ಮಂಜುನಾಥ್, ನಾಳೆ ನಿಮಗೆ ಗುಂಡು ಹೊಡೀತಾರೆ. 2014ರ ನಂತರ ಭಯೋತ್ಪಾದನೆ ಬಹಳಷ್ಟು ಕಡಿಮೆ ಆಗಿದೆ. ಬಾಂಗ್ಲಾ ದೇಶ, ಪಶ್ಚಿಮ ಬಂಗಾಳದ ಘಟನೆಗೆ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

- Advertisement -

Latest Posts

Don't Miss