ವಿದ್ಯಾಭ್ಯಾಸವಿಲ್ಲದಿದ್ದರೆ ಜೀವನವಿಲ್ಲ ಎಂಬ ಕಾಲ ಹೋಯಿತು. ಈಗ ವಿದ್ಯಾಭ್ಯಾಸವಿಲ್ಲದವರೂ ಕೂಡ, ತಮಗಿರುವ ಉದ್ಯಮದ ಐಡಿಯಾಗಳಿಂದ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾರೆ. ಇಂಥ ಉದ್ಯಮಗಳಲ್ಲಿ ಕಾರ್ ವಾಷಿಂಗ್ ಸರ್ವಿಸ್ ಕೂಡಾ ಒಂದು. ಇದರಲ್ಲ ಲಕ್ಷಗಟ್ಟಲೇ ಸಂಪಾದನೆ ಮಾಡಲಾಗದಿದ್ದರೂ, ಹೊಟ್ಟೆ ತುಂಬಿಸಿಕೊಳ್ಳುವಷ್ಟಾದರೂ ಸಂಪಾದಿಸಬಹುದು. ಹಾಗಾಗಿ ನಾವಿಂದು ಕಾರ್ ವಾಷಿಂಗ್ ಸರ್ವಿಸ್ ಉದ್ಯಮದ ಬಗ್ಗೆ ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.

ನೀವು ನಿಮ್ಮ ಕಾರ್ ವಾಷಿಂಗ್ ಸರ್ವಿಸ್ ಶಾಪ್‌ನ್ನ ಮಾರುಕಟ್ಟೆ, ಅಥವಾ ಹೆಚ್ಚು ವಾಹನಗಳು ಓಡಾಡುವ ಜಾಗದಲ್ಲಿ ತೆರೆಯಬಹುದು. ನೀವು ಕಾರ್ ವಾಷ್ ಅಷ್ಟೇ ಅಲ್ಲದೇ, ಬೈಕ್, ಟ್ರಕ್, ಬಸ್ ವಾಷ್ ಕೂಡ ಮಾಡಬಹುದು.
ನಿಮ್ಮ ಜೊತೆ ಇನ್ನೊಬ್ಬರನ್ನು ಸೇರಿಸಿಕೊಂಡು ಈ ಉದ್ಯಮ ಆರಂಭಿಸಿದರೆ ಸಾಕು. ನಿಮಗೆ ಲಾಭ ಹೆಚ್ಚು ಬರುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಲ್ಲಿ ಮತ್ತಿಬ್ಬರನ್ನು ಕೇಲಸಕ್ಕೆ ಸೇರಿಸಿಕೊಳ್ಳಬಹುದು.
ಈ ಕೆಲಸಕ್ಕೆ ನಿಮಗೆ ಕೆಲ ವಸ್ತುಗಳ ಅವಶ್ಯಕತೆ ಇರುತ್ತದೆ. ನಿಮ್ಮ ಅಂಗಡಿಯ ಹೆಸರು ಹಾಕಲು ಬೋರ್ಡ್ ಬಳಸಬೇಕಾಗುತ್ತದೆ. ಅಲ್ಲದೇ ವಾಹನ ವಾಷ್ ಮಾಡಲು ವ್ಯಾಕ್ಯೂಮ್ ಕ್ಲೀನರ್ ಅವಶ್ಯಕತೆ ಇರುತ್ತದೆ.
ಹ್ಯಾಂಡ್ ಸ್ಕ್ರಬಿಂಗ್ ಮಷಿನ್, ಹೈ ಪ್ರೇಷರ್ ಜೆಟ್ ಮಷಿನ್, ಶ್ಯಾಂಪೂ, ಕಾರ್ ವಾಷ್ ಪಾಲಿಶರ್, ಡ್ಯಾಷ್‌ಬೋರ್ಡ್ ಪಾಲಿಷರ್ ಕೂಡ ಬೇಕಾಗುತ್ತದೆ.
ಎಕ್ಸ್‌ಟಿರಿಯರ್ ವಾಷ್‌ನಲ್ಲಿ ಗಾಡಿಯನ್ನ ಹೊರಗಿನಿಂದ ಬರೀ ಶ್ಯಾಂಪೂ ಬಳಸಿ ವಾಷ್ ಮಾಡಲಾಗುತ್ತದೆ. ಇಂಟಿರಿಯರ್ ವಾಷ್‌ನಲ್ಲಿ ಗಾಡಿಯ ಒಳಗಿರುವ ಸೀಟ್, ಫೂಟ್ ಮ್ಯಾಟ್ ಎಲ್ಲವನ್ನ ವ್ಯಾಕ್ಯೂಮ್ ಕ್ಲೀನರ್‌ನಿಂದ ವಾಷ್ ಮಾಡಲಾಗುತ್ತದೆ.
ಇದ್ರಲ್ಲಿ ನೀವು ಡೋರ್ ಟೂ ಡೋರ್ ಕಾರ್ ವಾಷಿಂಗ್ ಸರ್ವಿಸ್ ಕೂಡ ಮಾಡಬಹುದಾಗಿದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




