Chanakya Neeti: ಶತ್ರು ಇಲ್ಲದೇ ಅಜಾತ ಶತ್ರುವಿನ ಹಾಗೆ ಬದುಕುವುದು ಸುಲಭದ ಮಾತಲ್ಲ. ನಾನು ಯಾರ ಬಳಿಯೂ ಶತ್ರುತ್ವ ಮಾಡುವುದಿಲ್ಲ ಎಂದರೂ, ನಿಮ್ಮ ಜೀವನದಲ್ಲಿ ಓರ್ವ ವ್ಯಕ್ತಿಯಾದರೂ ನಿಮ್ಮ ಶತ್ರುವಾಗೇ ಆಗುತ್ತಾರೆ. ಹಾಗಾಗಿ ನಾವು ಯಾವುದೇ ಶತ್ರು ಅಂದ್ರೆ ವಿರುದ್ಧವಿರುವ ಶತ್ರು ಅಥವಾ ಹಿತ ಶತ್ರುಗಳು ಯಾರೇ ಇರಲಿ. ಅಂಥವರನ್ನುಹೇಗೆ ಎದುರಿಸಬೇಕು ಎಂದು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ.
ಗುಪ್ತ ಶತ್ರುಗಳ ಬಗ್ಗೆ ಗಮನವಿರಲಿ: ಗುಪ್ತ ಶತ್ರುಗಳು ಎಂದರೆ, ನಿಮ್ಮ ಜತೆಗಿದ್ದು ನಿಮ್ಮವರಂತೆ ನಟಿಸಿ, ಬಳಿಕ ನಿಮ್ಮ ಸೋಲನ್ನು ಬಯಸುತ್ತಾರೆ. ಇಂಥವರು ನಿಮ್ಮ ಸುತ್ತಮುತ್ತಲು ನಿಮ್ಮವರಂತೆ ಇರುತ್ತಾರೆ. ಇಂಥವರಿಂದ ಸದಾ ಕಾಲ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು.
ಶತ್ರುಗಳ ಚಲನ ವಲನ ಗಮನಿಸಿ: ಚಾಣಕ್ಯರು ಹೇಳುವುದೇನೆಂದರೆ, ಎಂದಿಗೂ ನಿಮ್ಮ ಶತ್ರುವನ್ನು ಬಲಹೀನರೆಂದು ತಿಳಿಯಬೇಡಿ. ಏಕೆಂದರೆ, ಜೀವನದಲ್ಲಿ ಗೆಲುವು ಸಾಧಿಸಬೇಕು, ಶತ್ರುಗಳನ್ನು ಎದುರಿಸಲು ಇರುವ ಉಪಾಯಗಳಲ್ಲಿ ಬಲಹೀನರಂತೆ ವರ್ತಿಸುವುದು ಕೂಡ 1 ಪ್ರಮುಖ ಉಪಾಯ. ಹಾಗಾಗಿ ಶತ್ರುವನ್ನು ಬಲಹೀನರೆಂದು ನಿರ್ಲಕ್ಷಿಸಬಾರದು ಅಂತಾರೆ ಚಾಣಕ್ಯರು.
ಶತ್ರು ನಿಮಗಿಂತ ಶಕ್ತಿಶಾಲಿ ಎಂದಾದಲ್ಲಿ ಸುಮ್ಮನಿರುವುದು ಉತ್ತಮ: ಚಾಣಕ್ಯರು ಹೇಳುವಂತೆ ನಿಮಗಿಂತ ಶಕ್ತಿಶಾಲಿಯಾಗಿರುವವರು ನಿಮ್ಮ ಶತ್ರುಗಳಾಗಿದ್ದಲ್ಲಿ, ನೀವು ಸುಮ್ಮನಿರುವುದು ಉತ್ತಮ. ತಾಳ್ಮೆಯಿಂದ ಇದ್ದು, ಬುದ್ಧಿವಂತಿಕೆ ಉಪಯೋಗಿಸಿ, ಶತ್ರುಗಳನ್ನು ಗೆಲ್ಲಬೇಕು ಎನ್ನುತ್ತಾರೆ ಚಾಣಕ್ಯರು.




