Tuesday, July 22, 2025

Latest Posts

ಪಂಜಾಬ್‌ನಲ್ಲಿ ಧರ್ಮಸ್ಥಳದ ಯುವತಿ ಅನುಮಾನಾಸ್ಪದ ಸಾ*ವು ಕೇಸ್‌ಗೆ Twist

- Advertisement -

National News: ಧರ್ಮಸ್ಥಳದ ಮೂಲದ ಯುವತಿ ಪಂಜಾಬ್‌ನಲ್ಲಿ ಮೃತಳಾದ ಕೇಸ್‌ಗೆ ಇದೀಗ ಬಿಗ್ Twist ಸಿಕ್ಕಿದೆ. ಏರೋಸ್ಪೆಸ್ ವಿದ್ಯಾರ್ಥಿನಿಯಾಗಿದ್ದ ಧರ್ಮಸ್ಥಳದ ಬೋಳಿಯಾರ್ ನ 22 ವರ್ಷದ ಯುವತಿ ಆಕಾಂಕ್ಷಾ ಜಪಾನ್‌ನಲ್ಲಿ ಕೆಲಸ ಮಾಡುವ ಆಸೆಯಿಂದ ಪಂಜಾಬ್‌ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಆಕೆ ಆಕಸ್ಮಿಕವಾಗಿ ಮೃತಳಾದ ಕಾರಣ, ಇದು ನಿಗೂಢ ಸಾವು ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಸಾವಿಗೆ ಕಾರಣವೇನೆಂದು ಬಹಿರಂಗವಾಗಿದ್ದು, ಆಕೆ ಅದೇ ಕಾಲೇಜಿನಲ್ಲಿದ್ದ ಕೇರಳದ ಪ್ರಾಧ್ಯಾಪಕನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರೇಮ ವೈಫಲ್ಯದ ಕಾರಣ, ಆಕಾಂಕ್ಷಾ ಕಾಲೇಜಿನ ಬಿಲ್ಡೀಂಗ್ ಮೇಲಿಂದ ಜಿಗಿದು, ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆಗಲೇ ವಿವಾಹವಾಗಿ ಇಬ್ಬರು ಮಕ್ಕಳಿದ್ದ ಪಂಜಾಬ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ ಬಿಜಿಲ್ ಮ್ಯಾಥ್ಯೂ ಕೇರಳದ ಕೋಟ್ಟಾಯಮ್ ನಿವಾಸಿಯಾಗಿದ್ದ. ಮ್ಯಾಥ್ಯೂ ಮೇಲೆ ಆಕಾಂಕ್ಷಾಗೆ ಪ್ರೀತಿಯಾಗಿದ್ದು, ಆಕೆ ಅವನ ಮನೆಗೆ ಹೋಗಿ, ತಾನು ಮ್ಯಾಥ್ಯುನನ್ನು ವಿವಾಹವಾಗುವುದಾಗ ಜಗಳವಾಡಿದ್ದಳು. ಅಲ್ಲದೇ, ಕಾಲೇಜಿನಲ್ಲೂ ಮ್ಯಾಥ್ಯೂನನ್ನು ವಿವಾಹವಾಗುವುದಾಗಿ ಜಗಳವಾಡಿದ್ದಳು.

ಅಲ್ಲದೇ ಸಾವಿಗೀಡಾಗುವ ಸ್ವಲ್ಪ ಸಮಯಕ್ಕೂ ಮುನ್ನ ಆಕಾಂಕ್ಷಾ ಮ್ಯಾಥ್ಯೂವಿನ ಜತೆ ಜಗಳವಾಡಿ, ಬಳಿಕ ಕಾಲೇಜಿನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ಮ್ಯಾಥ್ಯೂ ವಿರುದ್ಧ ಪಂಜಾಬ್‌ನ ಜಲಂಧರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 19 ಅಂದರೆ ಸೋಮವಾರದಂದು ಧರ್ಮಸ್ಥಳದ ಬೋಳಿಯಾರ್‌ನ ಮನೆಯಲ್ಲಿ ಆಕಾಂಕ್ಷಾಳ ಅಂತ್ಯಸಂಸ್ಕಾರ ನೆರವೇರಲಿದೆ. ಆಕಾಂಕ್ಷಾ ಪಂಜಾಬ್‌ ಕಾಲೇಜಿನಲ್ಲಿ ಏರೋಸ್ಪೆಸ್ ಎಂಜಿನಿಯರಿಂಗ್ ಓದುತ್ತಿದ್ದರು. ಇವರು ಜಪಾನಿನಲ್ಲಿ ಕೆಲಸ ಮಾಡುವ ಆಸೆ ಹೋಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಕೆಲ ದಿನಗಳ ಹಿಂದೆ ಕಾಲೇಜಿನಿಂದ ಸರ್ಟಿಫಿಕೇಟ್ ತೆಗೆದುಕೋಂಡು ಹೋಗಲು ಬಂದಿದ್ದಳು. ಈ ವೇಳೆ ಈ ರೀತಿ ದುಡುಕಿನ ನಿರ್ಧಾರ ಕೈಗೋಂಡಿದ್ದಾಳೆ.

- Advertisement -

Latest Posts

Don't Miss