Dharwad News: ಧಾರವಾಡ: ಅವಳಿನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳ ಓಡಾಟ ಹಿನ್ನೆಲೆ ಪತ್ರ ಬರೆದ ವಿಚಾರದ ಬಗ್ಗೆ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ನೀಡಿದ್ದಾರೆ.
ಕೆಲವು ಜಾಗೃತ ನಾಗರಿಕರು ನನಗೆ ಕರೆ ಮಾಡಿದರು ಹೊರಗಿನ ಜನ ಓಡಾಡುತ್ತಿದಾರೆ ಅಂತಾ. ಯಾವ ರೀತಿ ಇದ್ದಾರೆ ಎಂದು ಕೇಳಿದಾಗ ಅವರು ಬೇರೆ ರೀತಿಯ ಜನ ಅದಾರ ಎಂದು ಹೇಳಿದರು. ಬಾಂಗ್ಲಾದೇಶದ ಜನರ ರೀತಿ ಕಾಣಸ್ತಾರ ಎಂದು ಕೇಳಿದಾಗ ಇಲ್ಲಾ ಪಾಕಿಸ್ತಾನ ಜನರ ತರ ಕಾನಸ್ತಾರೆ ಅಂತಾ ಹೇಳಿದರು. ಹಾಗಾಗಿ ನನಗೆ ಮತ್ತೆ ಬೇರೆ ಬೇರೆ ಕಡೆಯಿಂದ ಮಾಹಿತಿ ಬಂತು. ಆಯಕ್ತರಿಗೆ ಹಾಗೂ ಗೃಹ ಮಂತ್ರಿಗಳಿಗೆ ಪತ್ರ ಬರೆದೆ. ಇದು ಸೂಕ್ಷ್ಮ ವಿಚಾರವಾಗಿದ್ದಕ್ಕೆ ಯಾವ ಪತ್ರಿಕೆಗೆ ಹಾಗೂ ಮೀಡಿಯಾಗೆ ಹೇಳಿಕೆ ನೀಡಿರಲಿಲ್ಲಾ. ಅವರಿಗೆ ತನಿಖೆಗೆ ಅನೂಕೂಲವಾಗಲೆಂದು. ಆದರೆ ಎಂಟು ದಿನಾ ಆಯ್ತು ಪತ್ರ ಬರೆದು ಯಾವುದೇ ವಿಚಾರಣೆ ಆಗಿಲ್ಲಾ. ಆದರೆ ಕಮಿಷನರ್ ಪತ್ರದ ಬಗ್ಗೆ ಮಾಹಿತಿ ಇಲ್ಲಾ ಎಂದು ಆಯುಕ್ತರು ಹೇಳುತ್ತಿದ್ದಾರೆ ಎಂದು ಬೆಲ್ಲದ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದೊಂದು ಬೇಜವಾಬ್ದಾರಿ ಹೇಳಿಕೆ. ಇಷ್ಟೊಂದು ಸಿರಿಯಸ್ ಅಲಿಗೇಷನ್ ಮಾಡಿದಾಗೂ ಏನಾಯ್ತು ಎಂದು ಹೇಳಿಲ್ಲಾ. ಅದನ್ನ ವಿಚಾರಣೆ ಮಾಡಬೆಕೆನ್ನುವ ಮನಸ್ಥಿತಿಬಕೂಡ ಇಲ್ಲಾ. ಇದು ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ. ಆಯುಕ್ತರಿಗೆ ಅಷ್ಟೇ ಅಲ್ಲಾ ನಾನು ಗೃಹ ಮಂತ್ರಿಗಳಿಗು ಪತ್ರ ಬರೆದಿದ್ದೇನೆ. ದೇಶಘಾತುಕ ಶಕ್ತಿಗಳಿಗೆ ನಮ್ಮ ಬ್ರದರ್ಸ್ ಅಂತಾ ಹೇಳುತ್ತಿದ್ದಾರೆ ಮೇಲಿನವರು. ಕೆಳಗಿನವರು ಕೂಡ ಅವರು ಹಂಗೆ ಅನುಕರಣೆ ಮಾಡುತ್ತಿದ್ದಾರೆ. ಏಳರಿಂದ ಎಂಟು ಜನರ ಗುಂಪಾಗಿ ಓಡಾಡತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರ ಆ್ಯಕ್ಟಿವೀಟಿ ಏನು ಗೊತ್ತಿಲ್ಲಾ. ದಿನಾ ಬೆಳಗ್ಗೆ ಅಲ್ಲಿ ನಮಾಜ್ ಟೈಮ್ ಗೆ ಬರ್ತಾರೆ ಎಂದು ಹೇಳಿದ್ದಾರೆ.
ಪೋಲಿಸರು ಬರಿ ಕಲೆಕ್ಷನ್ ಧಂದೆಯಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನ ಅವರು ಮೇಲೆ ಮುಟ್ಟಿಸಬೇಕಲ್ಲಾ. ನಿಜವಾದ ಕಾನೂನು ಉಳಿಸುವಂತವರು ಈ ರೀತಿ ಮಾಡಲ್ಲ. ಅವರಿಗೆ ಕೆಲಸದ ಮೇಲೆ ಆಸಕ್ತಿ ಇಲ್ಲಾ. ಎಂಟು ದಿನ ಆದರೂ ಯಾರನ್ನುಕರೆದು ತನಿಖೆ ಮಾಡಿಲ್ಲ. ನನಗೆ ಏನೂ ಉತ್ತರ ಬಂದಿಲ್ಲ. ಗೃಹ ಮಂತ್ರಿಗಳ ಕಚೇರಿಗೆ ಪತ್ರ ಮುಟ್ಟಿಸುವಂತೆ ಕೆಲಸ ಮಾಡಿದ್ದೆನೆ. ಫೋನ್ ಏನು ಮಾಡೆಲ್ಲ, ಆದರೆ ಪತ್ರ ಬರೆದಿದ್ದೆನೆ. ಏನಾದರು ಆದರೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಬೆಲ್ಲದ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.