Health Tips: ಪುಟ್ಟ ಮಕ್ಕಳ ದೇಹ ಆಗಾಗ ಬಿಸಿಯಾಗೋದು ಕಾಮನ್. ಆದರೆ ಕೆಲವು ಪೋಷಕರು ಅದನ್ನೇ ಜ್ವರವೆಂದು ಪರಿಗಣಿಸಿ, ಮಗುವಿಗೆ ಪದೇ ಪದೇ ಜ್ರದ ಔಷಧಿ ನೀಡುತ್ತಾರೆ. ಆದರೆ ಹೀಗೆ ಮಾಡೋದು ತಪ್ಪು ಅಂತಾರೆ ವೈದ್ಯರು.
ಈ ಬಗ್ಗೆ ವಿವರಿಸಿರುವ ವೈದ್ಯರಾದ ಡಾ.ಪ್ರಿಯ ಶಿವಳ್ಳಿ, ಮಕ್ಕಳಿಗೆ ಜ್ವರದ ಟೆಂಪ್ರೆಚರ್ ಚೆಕ್ ಮಾಡಿ, ಅದು 99 ದಾಟಿದರೆ ಮಾತ್ರ, ವೈದ್ಯರ ಬಳಿ ಪರೀಕ್ಷಿಸಿ, ಔಷಧಿ ನೀಡಬೇಕು. ಇ್ಲಲವಾದಲ್ಲಿ ಮಗುವಿಗೆ ಪದೇ ಪದೇ ಜ್ವರದ ಔಷಧಿ ನೀಡಬೇಡಿ ಅಂತಾರೆ ವೈದ್ಯರು.
ಅಲ್ಲದೇ ಮಗುವಿಗೆ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಹಾಕುವ ಮುನ್ನ, ನೀವು ಆ ನೀರು ಅತೀ ಬಿಸಿ, ಅತೀ ತಣ್ಣ ಇರದಂತೆ ನೋಡಿಕೋಳ್ಳಬೇಕು. ರೂಮ್ ಟೆಂಪ್ರೆಚರ್ ಇರುವ ಬಟ್ಟೆಯನ್ನು ನೀವು ಮಕ್ಕಳ ಹಣೆಗೆ ಹಾಕಬೇಕು. ಇದಷ್ಟೇ ಅಲ್ಲದೇ, ಮಗುವಿಗೆ ರೆಸ್ಟ್ ನೀಡುವುದು ತುಂಬಾ ಮುಖ್ಯ.
ಅಲ್ಲದೇ, ಜ್ವರ ಬಂದ ಬಳಿಕ ಮಕ್ಕಳಿಗೆ ದಪ್ಪ ಬಟ್ಟೆ, ಹೆಚ್ಚು ಬಟ್ಟೆ ಹಾಕೋದು ತಪ್ಪು ಅಂತಾರೆ ವೈದ್ಯರು. ತೆಳುವಾದ ಕಾಟನ್ ಬಟ್ಟೆ ಧರಿಸಿದರೂ ಮಗುವಿಗೆ ಜ್ವರ ಕಡಿಮೆಯಾಗುತ್ತದೆ ಎನ್ನುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.