Veg Pizza Recipe: ಹೆಸರು ಬೇಳೆ ಬಳಸಿ ಮನೆಯಲ್ಲೇ ತಯಾರಿಸಬಹುದು ಪ್ರೋಟೀನ್ ಭರಿತವಾದ ಪಿಜ್ಜಾ..

Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಬೇಳೆ, 1ರಿಂದ 2 ಹಸಿಮೆಣಸು, ಶುಂಟಿ, ಬೆಳ್ಳುಳ್ಳಿ, ಉಪ್ಪು. ಇದು ಬೇಸ್ ತಯಾರಿಸಲು ಬೇಕಾಗುವ ಸಾಮಗ್ರಿ.

2 ಸ್ಪೂನ್ ಎಣ್ಣೆ, ಪನೀರ್, ಬೇಯಿಸಿದ ಸ್ವೀಟ್ ಕಾರ್ನ್, ತುರಿದ ಚೀಸ್, ಕ್ಯಾಪ್ಸಿಕಂ, ಈರುಳ್ಳಿ, ಪಿಜ್ಜಾ ಸಾಸ್, ಚಿಲ್ಲಿ ಫ್ಲೇಕ್ಸ್, ಆರೆಗ್ಯಾನೋ.

ಮಾಡುವ ವಿಧಾನ: ಹೆಸರು ಬೇಳೆಯನ್ನು 2 ತಾಸು ನೆನೆಸಿ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ, ಹಸಿಮೆಣಸು, ಶುಂಟಿ, ಬೆಳ್ಳುಳ್ಳಿ, ಉಪ್ಪು ಹಾಕಿ ರುಬ್‌ಬಿ. ಬದಿಗಿರಿಸಿ. ನಂತರ ಪ್ಯಾನ್ ಬಿಸಿ ಮಾಡಿ ಅದಕ್ಕೆ ಬೆಣ್ಣೆ ಅಥವಾ ಎಣ್ಣೆ ಹಾಕಿ, ಚೌಕಾಕಾರದಲ್ಲಿ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಬೇಯಿಸಿದ ಕಾರ್ನ್, ಹುರಿದ ಪನೀರ್ ಹಾಕಿ ಬಾಡಿಸಿ. ನಂತರ ಅದಕ್ಕೆ ಪೆರಿ ಪೆರಿ ಪೌಡರ್, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.

ಬಳಿಕ ಪ್ಯಾನ್ ಬಿಸಿ ಮಾಡಿ, ರುಬ್ಬಿದ ಹಿಟ್ಟು ದೋಸೆ ರೀತಿ ಹಾಕಿ. ಮಿಶ್ರಣ ಸ್ವಲ್ಪ ದಪ್ಪವಾಗಿರಲಿ. ಪಿಜ್ಜಾ ಬೇಸ್‌ ರೀತಿ ಇರಲಿ. ಬಳಿಕ ಇದನ್ನು ಫ್ಲಿಪ್ ಮಾಡಿ, ಮಂದ ಉರಿಯಲ್ಲಿರಿಸಿ, ಅದರ ಮೇಲೆ ಪಿಜ್ಜಾ ಸಾಸ್ ಸವರಿ, ಹುರಿದ ಮಿಶ್ರಣ ಮತ್ತು ಚೀಸ್ ಹಾಕಿ ಮುಚ್ಚಳ ಮುಚ್ಚಿ ಚೀಸ್ ಕರಗುವವರೆಗೂ ಬೇಯಿಸಿ. ಬಳಿಕ ಗ್ಯಾಸ್ ಆಫ್ ಮಾಡಿ, ಅದರ ಮೇಲೆ ಆರೆಗ್ಯಾನೋ, ಚಿಲ್ಲಿ ಫ್ಲೇಕ್ಸ್ ಹಾಕಿ ಸರ್ವ್ ಮಾಡಿ.

About The Author