Thursday, June 19, 2025

Latest Posts

Health Tips: ಜನ ಔಷಧಿ – ಔಷಧಿಗಳು ಒಳ್ಳೇದೋ? ಕೆಟ್ಟದ್ದೋ?

- Advertisement -

Health Tips: ಅಂಗಡಿಯಲ್ಲಿ ಸಿಗುವ ಔಷಧಿಗಳು ಬಡವರ ಕೈಗೆಕ್ಕಬೇಕು ಎಂದು ಕೇಂದ್ರ ಸರ್ಕಾರ, ಜನೌಷಧಿ ಕೇಂದ್ರದ ಸ್ಥಾಪನೆ ಮಾಡಿತ್ತು. ಅದರಲ್ಲಿ ಹಲವು ಮಧ್ಯಮ ವರ್ಗ, ಬಡವರ್ಗದವರು ಔಷಧಿ ಖರೀದಿಸುತ್ತಿದ್ದಾರೆ. ಆದರೆ ನೀವು ಕೆಲವು ವೈದ್ಯರ ಬಳಿ ಚಿಕಿತ್ಸೆಗೆ ಹೋದಾಗ, ಅವರು ಜನೌಷಧಿ ಕೇಂದ್ರದಿಂದ ಔಷಧಿ ಖರೀದಿಸಬೇಡಿ ಎಂದು ಹೇಳುತ್ತಾರೆ. ಹಾಗಾದ್ರೆ ಜನೌಷಧಿ ಕೇಂದ್ರದ ಔಷಧಿ ಒಳ್ಳೇದೋ, ಕೆಟ್ಟದ್ದೋ? ಅಂತಾ ವೈದ್ಯರಾದ ಡಾ.ಪ್ರಕಾಶ್ ರಾವ್ ಅವರು ವಿವರಿಸಿದ್ದಾರೆ.

ಕೆಲವರಿಗೆ ಜನೌಷಧಿಯಲ್ಲಿ ಸಿಗುವ ಔಷಧಿಗಳು ಉತ್ತಮವಾ ಅನ್ನೋ ಅನುಮಾನ ಹಲವರಿಗೆ ಬರುತ್ತದೆ. ಏಕೆಂದರೆ, ಅದು ಕಡಿಮೆ ದರದಲ್ಲಿ ಸಿಗುವ ಔಷಧಿಗಳು. ಅಲ್ಲದೇ, ಹಲವು ವೈದ್ಯರು ಈ ಔಷಧಿ ತೆಗೆದುಕ“ಳ್ಳಬೇಡಿ ಎನ್ನುತ್ತಾರೆ. ಆದರೆ ಇದಕ್ಕೆ ಕಾರಣವೇನು ಅನ್ನೋದು ಯಾರಿಗೂ ತಿಳಿದಿಲ್ಲ.

ಆದರೆ ವೈದ್ಯರು ಈ ಬಗ್ಗೆ ವಿವರಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಜನೌಷಧಿಯಲ್ಲಿ ಸಿಗುವ ಔಷಧಿಗಳನ್ನು ಖರೀದಿಸಬಹುದು ಎಂದು ಶಿಫಾರಸ್ಸು ಮಾಡುತ್ತದೆ. ಯಾಕಂದ್ರೆ ಇದು ಕಡಿಮೆ ಬೆಲೆಯ ಔಷಧಿಯಾಗಿದ್ರೂ ಕೂಡ, ಉತ್ತಮ ಕ್ವಾಲಿಟಿಯದ್ದಾಗಿರುತ್ತದೆ. ಹಾಗಾಗಿ ಈ ಔಷಧಿಗಳನ್ನು ಬಳಸಬಹುದು ಅಂತಾರೆ ವೈದ್ಯರು. ಈ ಬಗ್ಗೆ ಇ್ನನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss