ಇನ್ನು ಒಂದೇ ವಾರದಲ್ಲಿ ಗೃಹಲಕ್ಷ್ಮೀ ಹಣ ಜಮೆಯಾಗುತ್ತದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Political News: ರಾಜ್ಯದ ಗ್ಯಾರಂಟಿಗಳಲ್ಲಿ onದಾದ ಗೃಹಲಕ್ಷ್ಮೀ ಯೋಜನೆ. ಪ್ರತೀ ತಿಂಗಳು ಗೃಹಿಣಿಯರಿಗೆ 2 ಸಾವಿರ ರೂಪಾಯಿ ಕ“ಡುವುದು ಈ ಯೋಜನೆಯ ನಿರ್ಧಾರವಾಗಿದ್ದರೂ, ತಿಂಗಳಿಗೆ ಸರಿಯಾಗಿ ಹಣ ಖಾತೆಯಲ್ಲಿ ಜಮೆಯಾಗುತ್ತಿಲ್ಲ ಅನ್ನೋದು ಹಲವು ಗೃಹಿಣಿಯರ ದೂರು. ಆದರೆ ಈಗಾಗಲೇ ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮೀ ಹಣ ಖಾತೆಗೆ ಬಂದಿದ್ದು, ಮಾರ್ಚ್ ಏಪ್ರಿಲ್ ತಿಂಗಳ ಹಣವನ್ನು ಇದೇ ವಾರದಲ್ಲಿ ಖಾತೆಗೆ ಜಮೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರನ್ನು ಭೇ”ಿಯಾಗಿ, ಮಾತುಕತೆ ನಡೆಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಸಚಿವೆ ಹೆಬ್ಬಾಳ್ಕರ್, ಮಾರ್ಚ್ ತಿಂಗಳು ಆರ್ಥಿಕ ವರ್ಷದ ಕ“ನೆಯ ತಿಂಗಳಾಗಿರುವುದರಿಂದ ತಡವಾಗಿದೆ. ಏಪ್ರಿಲ್ ತಿಂಗಳ ಬಿಲ್ ರೆಡಿಯಾಗಿದೆ. ಹಲವರು ಗೃಹಲಕ್ಷ್ಮೀಯನ್ನೇ ನಂಬಿ ಕುಳಿತಿದ್ದಾರೆ. ಇದೇ ವಾರದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.

About The Author