Punjab: ತಾಾನು ಮಾರಾಟ ಮಾಡುತ್ತಿದ್ದ ಐಸ್‌ಕ್ರೀಮಿನಲ್ಲಿ ಹಲ್ಲಿ ಪತ್ತೆಯಾಗಿದ್ದರೂ ಸಹ, ವ್ಯಾಪಾರಿ ವ್ಯಾಪಾರ ಮುಂದುವರಿಸಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ಪಂಜಾಬ್‌ನ ಲುಧಿಯಾನಾದ ಬೀದಿ ವ್ಯಾಪಾರಿ ಐಸ್‌ಕ್ರೀಮ್ ಮಾರುತ್ತಿದ್ದ ವೇಳೆ, 7 ವರ್ಷದ ಓರ್ವ ಬಾಲಕ ಇವನ ಬಳಿ 20 ರೂಪಾಯಿಗೆ ಮಿಲ್ಕ್ ಬೆಲ್ ಹೆಸರಿನ 2 ಚಾಕೋಬಾರ್ ಐಸ್‌ಕ್ರೀಮ್ ಖರೀದಿಸಿದ್ದಾನೆ. ಐಸ್‌ಕ್ರೀಮ್ ತಿನ್ನುತ್ತಿದ್ದ ವೇಳೆ ಐಸ್‌ಕ್ರೀಮ್‌ನಲ್ಲಿ ಹಲ್ಲಿ ಪತ್ತೆಯಾಗಿದೆ. ಬಾಲಕ ಅಜ್ಜಿಗೆ ವಿಷಯ ತಿಳಿಸಿದಾಗ, ಅಜ್ಜಿ ಹಲವರಿಗೆ ಈ ವಿಷಯ ಹೇಳಿ, ಐಸ್‌ಕ್ರೀಮ್ ವ್ಯಾಪಾರಿಗೆ ತರಾಟೆಗೆ ತೆಗೆದುಕ“ಂಡಿದ್ದಾರೆ.
ಆದರೂ ವ್ಯಾಪಾರಸ್ಥ ವ್ಯಾಪಾರ ಮುಂದುವರಿಸಿದ್ದು, ಈ ಬಗ್ಗೆ ಕೇಳಿದಾಗ, ಐಸ್‌ಕ್ರೀಮ್ ಮಾಡುವುದು ಫ್ಯಾಕ್ಟರಿಯವರು. ನಾನು ಬರೀ ಮಾರಾಟ ಮಾಡುತ್ತೇನೆ ಅಷ್ಟಟೇೇೇೇ ಎಂದು ಸಮಜಾಯಿಷಿ ನೀಡಿದ್ದಾನೆ. ಸದ್‌ಯ ಆರೋಗಾಧಿಕಾರಿಗೆ ದೂರು ನೀಡಿದ್ದು, ಫ್ಯಾಕ್ಟರಿಗೆ ಭೇಟಿ ನೀಡಿ, ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕ“ಡಿಸಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.