- Advertisement -
Recipe: ಬೇಕಾಗುವ ಸಾಮಗ್ರಿ: 1 ಬೌಲ್ ಗೋಬಿ (ಹೂಕೋಸು), ಚಿಕ್ಕ ತುಂಡು ಶುಂಠಿ, 10 ಎಸಳು ಬೆಳ್ಳುಳ್ಳಿ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಎಲ್ಲವೂ 1 ಸ್ಪೂನ್. 2 ಕಪ್ ಗೋದಿ ಹುಡಿ, ತುಪ್ಪ ಅಥವಾ ಎಣ್ಣೆ, ಉಪ್ಪು.
ಮಾಡುವ ವಿಧಾನ: ಗೋಬಿಯನ್ನು ತುರಿದುಕ“ಳ್ಳಿ. ನಂತರ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಸ್ವಲ್ಪ ಉಪ್ಪು ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಹೂರಣ ರೆಡಿ.
ಇದಕ್ಕೂ ಮುನ್ನ ಗೋದಿಹುಡಿಗೆ ಬಿಸಿ ನೀರು, ಉಪ್ಪು, ಖಾರದಪುಡಿ, ಅರಿಶಿನ, ಎಣ್ಣೆ ಸೇರಿಸಿ, ಚಪಾತಿ ಹಿಟ್ಟು ಕಲಿಸಿಡಿ. 20 ನಿಮಿಷ ಬಿಟ್ಟು, ಈ ಹಿಟ್ಟಿಗೆ ಕಣಕ ಸೇರಿಸಿ, ಚಪಾತಿಯ ರೀತಿ ಲಟ್ಟಿಸಿ, ಬೇಯಿಸಿದರೆ, ಗೋಬಿ ಪರೋಠಾ ರೆಡಿ. ಕಾಯಿ ಚಟ್ನಿ ಜತೆ ಇದನ್ನು ಸವಿಯಬಹುದು.
- Advertisement -