Recipe: ಬೇಕಾಗುವ ಸಾಮಗ್ರಿ: ಪನೀರ್, ಈರುಳ್ಳಿ, ಕ್ಯಾಪ್ಸಿಕಂ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಸ್ವಲ್ಪ ಕಡ್ಲೆ ಹುಡಿ, ಉಪ್ಪು, ಜಿಂಜರ್ ಗಾರ್ಲಿಕ್ ಪೇಸ್ಟ್, ಬಿಸಿ ಮಾಡಿದ ಎಣ್ಣೆ, ಸ್ವಲ್ಪ ಬೆಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ: ಮ್ಯಾರಿನೇಟ್ ಮಾಡಲು 1 ಮಿಕ್ಸಿಂಗ್ ಬೌಲ್ಗೆ , ಮೊಸರು, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಕಸೂರಿ ಮೇಥಿ, ಸ್ವಲ್ಪ ಕಡ್ಲೆ ಹುಡಿ, ಉಪ್ಪು, ಜಿಂಜರ್ ಗಾರ್ಲಿಕ್ ಪೇಸ್ಟ್, ಬಿಸಿ ಮಾಡಿದ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಈರುಳ್ಳಿ, ಪನೀರ್, ಕ್ಯಾಪ್ಸಿಕಂ ಇದನ್ನೆಲ್ಲ ಸೇರಿಸಿ, 15 ನಿಮಿಷ ಬದಿಗಿರಿಸಿ.
ಬಳಿಕ ಟಿಕ್ಕಾ ಮಾಡುವ ಸ್ಟಿಕ್ಗೆ ಮ್ಯಾರಿನೇಟ್ ಮಾಡಿದ ಮಿಶ್ರಣ ಹಾಕಿ, ಬೆಣ್ಣೆ ಅಥವಾ ತುಪ್ಪವನ್ನು ಸವರಿ ಚೆನ್ನಾಗಿ ರೋಸ್ಟ್ ಮಾಡಿದ್ರೆ, ಪನೀರ್ ಟಿಕ್ಕಾ ರೆಡಿ.




